Advertisement

ಮೂರು ವಿಧೇಯಕಗಳ ಮಂಡನೆ

10:15 PM Sep 15, 2022 | Team Udayavani |

ಬೆಂಗಳೂರು: ಹಿಂದುಳಿದ ವರ್ಗದವರಿಗೆ ಮೀಸಲು ಸಂಬಂಧ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ಮಸೂದೆ -2022, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಮಸೂದೆ ಸಹಿತ ಒಟ್ಟು ಮೂರು ಮಸೂದೆಗಳನ್ನು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಗುರುವಾರ ಮಂಡಿಸಿದರು.

Advertisement

ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಸುಪ್ರೀಂಕೋರ್ಟ್‌ ನೀಡಿರುವ ನಿರ್ದೇಶನವನ್ನು ಪಾಲಿಸಲು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಉಪಬಂಧಿಸಲಾದಂತೆ ಬಿಬಿಎಂಪಿಯಲ್ಲಿ ಅನುಸೂಚಿತ ಜಾತಿಗಳು, ಅನುಸೂಚಿತ ಪಂಗಡಗಳು, ಇತರೆ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಮೀಸಲು ಕಲ್ಪಿಸಲು ಶೇ.50 ಮೀರದಂತೆ ಮೀಸಲಾತಿ ನಿಗದಿಪಡಿಸಲು ವಿಧೇಯಕ ಮಂಡಿಸಲಾಗಿದೆ. ಬಿಬಿಎಂಪಿ ಅಧಿನಿಯಮ 2020ರ 7ನೇ ಮತ್ತ 8ನೇ ಪ್ರಕರಣಕ್ಕೆ ತಿದ್ದುಪಡಿ ಪ್ರಸ್ತಾಪ ಮಾಡಲಾಗಿದೆ.

2022ರ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ(ತಿದ್ದುಪಡಿ) ವಿಧೇಯಕವನ್ನು ಮಂಡಿಸಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಪ್ರಕರಣ 7ರ ಉಪಪ್ರಕರಣ 2ರಡಿಯಲ್ಲಿ ಪರವಾನಗಿ ಶುಲ್ಕ ಅಥವಾ ಅರ್ಜಿ ಶುಲ್ಕ ಅಥವಾ ಬೇರೆ ಯಾವುದಾದರೂ ಹೆಸರಿನಿಂದ ಕರೆಯಲ್ಪಡುವ ಆಲ್ಕೋಹಾಲ…ಯುಕ್ತ ಮದ್ಯದ ಪರವಾನಗಿ ನೀಡುವಿಕೆ ಬಗ್ಗೆಯೂ ಇರಲಿದೆ. 2017ರ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಸರಕುಗಳ ಪೂರೈಕೆಯಲ್ಲಿ ಅಥವಾ ಸೇವೆಗಳ ಪೂರೈಕೆಯೂ ಅಲ್ಲ ಎಂದು ಪರಿಗಣಿಸಲು ವಿಧೇಯಕವನ್ನು ಮಂಡಿಸಲಾಗಿದೆ. ಈ ಅವಧಿಯಲ್ಲಿ ಸಂಗ್ರಹಿಸಲಾದ ಹಾಗೂ ಸಂಗ್ರಹಿಸಬಾರದಾಗಿದ್ದ ತೆರಿಗೆಯನ್ನು ಪಾವತಿಸದಿರಲು ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಕ್ಷೇತ್ರಗಳಿಗೆ ಜನಸಂಖ್ಯೆ ಮತ್ತು ಸ್ಥಾನಗಳ ನಿಗದಿಯಲ್ಲಿ ಬದಲಾವಣೆ ಮಾಡುವ 2022ನೇ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next