Advertisement

ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿ, ಆನೆಗುಂದಿ ಶ್ರೀ ಪ್ರಶಸ್ತಿ ಪ್ರದಾನ

10:56 PM Jun 16, 2019 | sudhir |

ಕಾಪು: ಪಡುಕುತ್ಯಾರು ಆನೆಗುಂದಿ ಮಠದ ಶ್ರೀ ಸರಸ್ವತೀ ಸಭಾಭವನದಲ್ಲಿ ಜರಗಿದ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಕಾಳಹಸ್ತೇಂದ್ರ ಸರಸ್ವತೀ ಶ್ರೀಗಳ ನವಮ ವರ್ಷದ ಪಟ್ಟಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಕೆ. ಕೇಶವ ಆಚಾರ್ಯ ಮಂಗಳೂರು ಇವರಿಗೆ ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಶ್ರೀಮತ್‌ ಆನೆಗುಂದಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀಧರ ಆಚಾರ್ಯ ವಡೇರ ಹೋಬಳಿ ಬಾಕೂìರು ಅಧ್ಯಕ್ಷತೆ ವಹಿಸಿದ್ದರು.

ಸಾಮಾಜಿಕ ಮುಖಂಡ ಎಂ. ಸೋಮಶೇಖರ ಭಟ್‌ ಉಡುಪಿ, ಮನೋಹರ್‌ ಎಸ್‌. ಶೆಟ್ಟಿ ಉಡುಪಿ, ಶಿಲ್ಪಿ ದಿನೇಶ್‌ ಆಚಾರ್ಯ ಪಡುಬಿದ್ರಿ, ಶಿಲ್ಪಿ ಕೆ. ಸುರೇಶ್‌ ಆಚಾರ್ಯ ಹೊಸಪೇಟೆ, ವೇ| ಮೂ| ಬ್ರಹ್ಮಶ್ರೀ ವೀರರಾಘವ ಶರ್ಮಾ ತಾಡಿಚರ್ಲ, ಬ್ರಹ್ಮಶ್ರೀ ಪುರೋಹಿತ್‌ ಬಿ. ಕೇಶವ ಆಚಾರ್ಯ ಉಳಿಯತ್ತಡ್ಕ ಮಧೂರು, ಬಂಟ್ವಾಳ ಜಯರಾಮ ಆಚಾರ್ಯ, ಕ್ಯಾ| ಮೂಲ್ಕಿ ಗಣೇಶ್‌ ರಾವ್‌ ಇವರಿಗೆ ಆನೆಗುಂದಿ ಶ್ರೀ ಪ್ರಶಸ್ತಿ ಹಾಗೂ ಡಾಕ್ಟರೇಟ್‌ ಪುರಸ್ಕೃತ ಡಾ| ಬಾಲಕೃಷ್ಣ ಬಿ.ಎಂ ಹೊಸಂಗಡಿ ಅವರಿಗೆ ವಿಶೇಷ ಅಭಿನಂದನೆ ನೀಡಿ ಗೌರವಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಬಿ. ಸೂರ್ಯ ಕುಮಾರ್‌ ಆಚಾರ್ಯ, ಪ್ರತಿಷ್ಠಾನದ ಹುಬ್ಬಳ್ಳಿ ವಲಯ ಸಮಿತಿ ಅಧ್ಯಕ್ಷ ವಿದ್ವಾನ್‌ ವೇ| ಮೂ| ಬ್ರ. ಶಂಕರ ಆಚಾರ್ಯ ಕಡ್ಲಾಸ್ಕರ್‌, ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ಘನಪಾಠಿ ವಿದ್ವಾನ್‌ ಬಾಲಚಂದ್ರ ಭಟ್‌ ಚಂದುಕೂಡ್ಲು, ಪಡುಕುತ್ಯಾರು ಎಂ. ಜಿನೇಶ್‌ ಬಲ್ಲಾಳ್‌, ಹಿರಿಯ ಸಮಾಜ ಸೇವಕ ಎಂ. ಸೋಮಶೇಖರ ಭಟ್‌, ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಎನ್‌. ಆಚಾರ್ಯ ಬೆಂಗಳೂರು,
ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಯು.ಕೆ.ಎಸ್‌. ಸೀತಾರಾಮ ಆಚಾರ್ಯ ಉಪ್ರಳ್ಳಿ, ಶೆ„ಕ್ಷಣಿಕ ಟ್ರಸ್ಟ್‌ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ, ಕರಾವಳಿಯ ವಿಶ್ವಬ್ರಾಹ್ಮಣ ಕಾಳಿಕಾಂಬಾ ದೇವಸ್ಥಾನಗಳ ಆಡಳಿತ ಮೊಕ್ತೇಸರ, ಗುರುಸೇವಾ ಪರಿಷತ್‌ ಕೇಂದ್ರ ಸಮಿತಿ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿಲ್ಪಿ ಸತೀಶ್‌ ಆಚಾರ್ಯ, ಗೋಶಾಲಾ ಟ್ರಸ್ಟ್‌ ಅಧ್ಯಕ್ಷ ಜಯಕರ ಆಚಾರ್ಯ ಕರಂಬಳ್ಳಿ, ಮಾಧ್ಯಮ ವಿಭಾಗ ಮುಖ್ಯಸ್ಥ ನಿವೃತ್ತ ಸುಬೇದಾರ್‌ ವೈ. ಧರ್ಮೇಂದ್ರ ಆಚಾರ್ಯ ಕಾಸರಗೋಡು, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ.ಬಿ. ಆಚಾರ್‌ ಕಂಬಾರು, ಕಾರ್ಯದರ್ಶಿಗಳಾದ ಕಾಡಬೆಟ್ಟು ನಾಗರಾಜ ಆಚಾರ್ಯ, ಸುರೇಶ ಆಚಾರ್ಯ ಕಾರ್ಕಳ, ಕೆ.ಎಂ. ಗಂಗಾಧರ ಕೊಂಡೆವೂರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next