Advertisement
ಇದೀಗ ಇಂಟರ್‌ನೆಟ್ ಸರ್ಚ್ ಎಂಜಿನ್ ದೈತ್ಯ ಗೂಗಲ್ ಹೊಸ ಆವೃತ್ತಿಯ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಅಳವಡಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ಇನ್ನೂ 30 ಸಾವಿರ ಮಂದಿಯನ್ನು ಕೆಲಸದಿಂದ ತೆಗೆದು ಹಾಕುವ ಸಾಧ್ಯತೆಗಳು ಇವೆ. ಸಂಸ್ಥೆಯಿಂದ ಈಗಾಗಲೇ 12 ಸಾವಿರ ಮಂದಿಯನ್ನು ತೆಗೆದು ಹಾಕಲಾಗಿದೆ.ವಿಶೇಷವಾಗಿ ಗೂಗಲ್‌ನ ಜಾಹೀರಾತು ಮತ್ತು ಮಾರಾಟ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಮೊದಲ ಹಂತದಲ್ಲಿ ಕೃತಕ ಬುದ್ಧಿಮತ್ತೆ ವ್ಯವಸ್ಥೆ ಅಳವಡಿಸಿಕೊಳ್ಳುವುದರಿಂದ ಸವಾಲಿನ ದಿನಗಳನ್ನು ಎದುರಿಸುವುದು ನಿಶ್ಚಿತ ಎನ್ನಲಾಗುತ್ತಿದೆ. ಇದರ ಜತೆಗೆ ಜಾಹೀರಾತು ಮತ್ತು ಮಾರಾಟ ವಿಭಾಗದಿಂದ ಮುಂದುವರಿದು, ಇತರ ವಿಭಾಗ ಮತ್ತು ಸಹವರ್ತಿ ಸಂಸ್ಥೆಗಳಿಗೆ ಕೂಡ ಎ.ಐ. ಅನ್ನು ವಿಸ್ತರಿಸುವುದು ಖಚಿತವೆನ್ನಲಾಗುತ್ತಿದೆ.