ರಷ್ಟು ಮಾತ್ರ ಆಳಸಮುದ್ರ ಬೋಟುಗಳು ತೆರಳಿವೆ. ಸುಮಾರು 400ರಷ್ಟು ಆಳಸಮುದ್ರ ಬೋಟುಗಳು ಸಿದ್ಧತೆಯಲ್ಲಿದ್ದು, ಇನ್ನಷ್ಟೇ ತೆರಳಬೇಕಾಗಿವೆ. ಪರ್ಸಿನ್ ಮೀನುಗಾರರು ತಮ್ಮ ಸಂಘದ ನಿರ್ಧಾರದಂತೆ ಸಾಮೂಹಿಕ ಪ್ರಾರ್ಥನೆ ನಡೆಸಿ ಆ. 30ರಂದು ತೆರಳಲು ತೀರ್ಮಾನಿಸಿದ್ದಾರೆ. ತ್ರೀಸೆವೆಂಟಿ, ಸಣ್ಣಟ್ರಾಲ್ ಬೋಟುಗಳು ಆ. 26ರಿಂದ ಮೀನುಗಾರಿಕೆಗೆ ಹೋಗಲು ನಿರ್ಧರಿಸಿದ್ದು ಹಂತ ಹಂತವಾಗಿ ಎಲ್ಲ ವರ್ಗಗಳ ದೋಣಿಗಳು ಮೀನುಗಾರಿಕೆ ತೆರಳಲಿವೆ.
Advertisement
ಆ. 1ರಿಂದ ಮೀನುಗಾರಿಕೆಗೆ ಅವಕಾಶವಿದ್ದರೂ ಕೋವಿಡ್-19 ಸೋಂಕು ಆವರಿಸುವ ಭಯದಿಂದಾಗಿ ಜಿಲ್ಲಾಡಳಿತವು ಮೀನುಗಾರಿಕೆ ಚಟುವಟಿಕೆ ನಡೆಸಲು ಸೂಕ್ತ ನಿದರ್ಶನವನ್ನು ನೀಡಬೇಕೆಂದು ಮೀನುಗಾರರು ಕಾದು ಕುಳಿತಿದ್ದರು. ಮೀನುಗಾರಿಕೆಗೆ ಯಾವುದೇ ನಿರ್ಬಂಧ ಇಲ್ಲದಿದ್ದರೂ ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆ ನಡೆಸಲು ನಿರ್ಬಂಧವಿದೆ. ಇದೀಗ ಮೀನುಗಾರಿಕೆ ಇಲಾಖೆ ಮತ್ತು ಜಿಲ್ಲಾಡಳಿತ ನೀಡಿದ ನಿರ್ದೇಶನದಂತೆ ಮೀನುಗಾರಿಕೆ ಆರಂಭಗೊಂಡಿದೆ.
ಸಭೆಯಲ್ಲಿ ಕೆಲವೊಂದು ನಿಯಮ ರೂಪಿಸಲಾಗಿದೆ. ಬಂದರಿನೊಳಗೆ ಹೊರ ರಾಜ್ಯದ ವಾಹನಗಳ ನಿಲುಗಡೆಗೆ ಅವಕಾಶ ಇರುವುದಿಲ್ಲ. ದ್ವಿಚಕ್ರ, ಕಾರುಗಳನ್ನು ನಿಗದಿತ ಸ್ಥಳದಲ್ಲಿಯೇ ಪಾರ್ಕ್ ಮಾಡಬೇಕು. ಮೀನು ಮಾರಾಟದ ಮಹಿಳೆಯರಿಗೆ ಬಂದರಿನೊಳಗೆ ಮೀನು ಖರೀದಿ ಮಾಡಲು ಅವಕಾಶವಿದ್ದು, ಚಿಲ್ಲರೆ ಮಾರಾಟಕ್ಕೆ ಅವಕಾಶವಿಲ್ಲ. ಮೀನುಗಾರಿಕೆ ಮುಗಿಸಿ ಬಂದರಿಗೆ ಬರುವ ದೋಣಿಗಳ ಮೀನು ಖಾಲಿ ಮಾಡುವ ಸಮಯದಲ್ಲಿ ಆಯಾಯ ವಿಭಾಗ ಮೀನುಗಾರ ಸಂಘದ ಸ್ವಯಂ ಸೇವಕರನ್ನು ನಿಯೋಜಿಸಿ, ಸಾಮಾಜಿಕ ಅಂತರವನ್ನು ಕಾಯ್ದು ಮೀನು ಖಾಲಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಎಲ್ಲರೂ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ ತಿಳಿಸಿದ್ದಾರೆ. ಪಾಳಿ ಆಧಾರದಲ್ಲಿ ಮೀನು ಅನ್‌ಲೋಡ್
ಪಾಳಿ ಆಧಾರದಲ್ಲಿ ವಿವಿಧ ವರ್ಗಗಳ ಬೋಟ್‌ಗಳ ಮೀನುಗಳನ್ನು ಖಾಲಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಮುಂಜಾನೆ 4.30ರಿಂದ ಬೆಳಗ್ಗೆ 8 ಗಂಟೆಯವರೆಗೆ ಆಳಸಮುದ್ರ ಬೋಟ್, 8ರಿಂದ 9.30ರ ವರೆಗೆ ತ್ರೀಸೆವೆಂಟಿ ಬೋಟುಗಳು, ಮಧ್ಯಾಹ್ನ 1 ಗಂಟೆಯ ಬಳಿಕ ಸಣ್ಣಟ್ರಾಲ್‌ಬೋಟು, ಸಂಜೆ 4 ಗಂಟೆಯ ಅನಂತರ ಪಸೀìನ್ ಬೋಟುಗಳ ಮೀನುಗಳನ್ನು ಖಾಲಿ ಮಾಡಲಾಗುತ್ತದೆ.
Related Articles
ವಿವಿಧ ಮೀನುಗಾರ ಸಂಘಗಳ ವತಿಯಿಂದ ಮುಂದಿನ ಸೀಮಿತ ಅವಧಿಯವರೆಗೆ ಪ್ರತಿದಿನ ರಾತ್ರಿ 9 ಗಂಟೆಯ ಬಳಿಕ ಮಲ್ಪೆ ಬಂದರು ಪ್ರದೇಶವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲು ತೀರ್ಮಾನಿಸ ಲಾಗಿದೆ. ಬಂದರು ಪ್ರವೇಶಕ್ಕೆ ಮಾಸ್ಕ್ ಕಡ್ಡಾಯ. ಮಾಸ್ಕ್ ಇಲ್ಲದೆ ಪ್ರವೇಶ ಮಾಡುವವರ ಬಗ್ಗೆ ಕ್ರಮ ತೆಗೆದು ಕೊಳ್ಳಲು ಪೊಲೀಸ್ ಇಲಾಖೆ , ಕರಾವಳಿ ಕಾವಲು ಪಡೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ.
-ಕೃಷ್ಣ ಎಸ್. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ
Advertisement