Advertisement

ಎನ್‌ಆರ್‌ಸಿ ಖಚಿತ: ಬೆಂಗಳೂರಿನ, ಮಹಾರಾಷ್ಟ್ರದಲ್ಲಿ ನಿರಾಶ್ರಿತರ ಕೇಂದ್ರ ಸ್ಥಾಪನೆ

11:55 AM Oct 19, 2019 | mahesh |

ಹೊಸದಿಲ್ಲಿ: ಅಸ್ಸಾನಂತೆಯೇ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿ ಶತಃಸಿದ್ಧ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪುನರುಚ್ಚರಿಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಸಹಿತ ಕೆಲವು ಕಡೆಗಳಲ್ಲಿ ನಿರಾ ಶ್ರಿತರ ಕೇಂದ್ರ ಸ್ಥಾಪನೆ ಮಾಡುತ್ತಿರುವ ಸುದ್ದಿಗಳು ಹರಿದಾ ಡುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

Advertisement

ಆಂಗ್ಲ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ಎನ್‌ಆರ್‌ಸಿಗೆ ಪೂರ್ವಭಾವಿಯಾಗಿಯೇ ನಿರಾಶ್ರಿತರ ಕೇಂದ್ರ ತೆರೆಯಲಾಗುತ್ತಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಈ ಪ್ರಕ್ರಿಯೆಯನ್ನು ವಿದೇಶೀಯರ ನ್ಯಾಯ ಮಂಡಳಿ ನಿರ್ವಹಿಸಲಿದೆ ಎಂದಿ ರುವ ಅವರು, ಸರಕಾರವೂ ಇದಕ್ಕೆ ಬೇಕಾದ ತಯಾರಿ ಆರಂಭಿಸಿದೆ ಎಂದು ಹೇಳಿದ್ದಾರೆ.

ಈಗಾಗಲೇ ಅಸ್ಸಾಂನಲ್ಲಿ ನಿರಾಶ್ರಿತರ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ನಿರಾಶ್ರಿತರ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಬೆಂಗಳೂರಿನಿಂದ 40 ಕಿ.ಮೀ. ದೂರದಲ್ಲಿರುವ ಸೊಂಡೆಕೊಪ್ಪದಲ್ಲಿ ನಿರಾಶ್ರಿತರ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಮಹಾ ರಾಷ್ಟ್ರದ ನವಿಮುಂಬಯಿ ಬಳಿಯಲ್ಲಿ ಮೂರು ಎಕರೆ ಜಾಗ ವೊಂದನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಅಕ್ರಮ ವಲಸಿಗರನ್ನು ವಿಶ್ವಸಂಸ್ಥೆಯ ನಿಯಮ ದಂತೆಯೇ ಗುರುತಿಸುತ್ತೇವೆ. ಕಾನೂನು ಪ್ರಕ್ರಿಯೆ ಬಳಿಕ ವಿಶ್ವಸಂಸ್ಥೆ ಹೇಳಿದ ರೀತಿಯಲ್ಲೇ ಅಕ್ರಮ ವಲಸಿಗರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಅಕ್ರಮ ಬಾಂಗ್ಲಾದೇಶೀಯರ ಹಾವಳಿ
ಮೊದಲಿನಿಂದಲೂ ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾ ದೇಶಿ ವಲಸಿಗರ ಹಾವಳಿ ಹೆಚ್ಚೇ ಇದೆ. ಇತ್ತೀಚೆಗೆ ಎನ್‌ಐಎ ಕೂಡ ಬಾಂಗ್ಲಾ ಮೂಲದ ಉಗ್ರ ಸಂಘಟನೆ ಬೆಂಗಳೂರಿನ ಕೆಲವೆಡೆ ನೆಲೆ ಕಂಡುಕೊಂಡಿದೆ ಎಂಬ ಆಘಾತಕಾರಿ ಅಂಶ ವನ್ನು ಬಹಿರಂಗ ಮಾಡಿದೆ. ಹೀಗಾಗಿ ಕರ್ನಾಟಕದಲ್ಲೇ ಮೊದಲ ನಿರಾಶ್ರಿತರ ಕೇಂದ್ರ ಶುರು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

2024ರ ಚುನಾವಣೆಗೆ ಮುನ್ನ ಜಾರಿ
ಅಕ್ರಮ ವಲಸಿಗರನ್ನು ದೇಶದಿಂದ ಒಧ್ದೋಡಿಸುತ್ತೇವೆ ಎಂದು ಹಲವು ರಾಜ್ಯಗಳ ಚುನಾವಣ ರ್ಯಾಲಿಗಳಲ್ಲಿ ಈಗಾ ಗಲೇ ಘೋಷಿಸಿರುವ ಶಾ, ಈಗ ಅದಕ್ಕೆ ಪೂರಕವಾಗಿ ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ನುಸುಳುಕೋರರನ್ನು ದೇಶದಿಂದ ಓಡಿಸುವ ಕೆಲಸ 2024ರ ಲೋಕಸಭೆ ಚುನಾವಣೆಗೆ ಮುನ್ನವೇ ಪೂರ್ಣಗೊಳ್ಳಲಿದೆ ಎಂದೂ ಶಾ ಹೇಳಿದ್ದಾರೆ.

Advertisement

ಶೀಘ್ರವೇ ನಿರಾಶ್ರಿತರ ಕೇಂದ್ರಕ್ಕೆ ಚಾಲನೆ
ಬೆಂಗಳೂರು: ನೆಲಮಂಗಲ ಬಳಿಯ ಸೊಂಡೆಕೊಪ್ಪದಲ್ಲಿ ಸಿದ್ಧವಾಗುತ್ತಿರುವ ನಿರಾಶ್ರಿತರ ಕೇಂದ್ರಕ್ಕೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ನೆಲಮಂಗಲದ ಬಳಿ ನಿರಾಶ್ರಿತರ ಕೇಂದ್ರ ಸಿದ್ಧವಾಗಿದೆ. ಇದಕ್ಕೆ ಚಾಲನೆ ನೀಡಬೇಕಷ್ಟೇ. ನಿರಾಶ್ರಿತರ ಕೇಂದ್ರ ಆರಂಭಿಸಲು ಇನ್ನಷ್ಟು ತಡ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ನಿರಾಶ್ರಿತರ ಕೇಂದ್ರ ಗಳಲ್ಲಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿ ರುವ ವಿದೇಶೀಯರನ್ನು ಹಾಕಲಾಗುತ್ತದೆ ಎಂದೂ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಒಳಗೆ ಏನಿದೆ?
ಪ್ರಮುಖ ಕಟ್ಟಡದಲ್ಲಿ 6 ಕೊಠಡಿ ಗಳಿದ್ದು, ಇಲ್ಲೇ ಅಕ್ರಮ ವಲಸಿಗರನ್ನು ಕೂಡಿಹಾಕಲಾಗುತ್ತದೆ. ಇಲ್ಲಿ ಒಂದು ಅಡುಗೆ ಮನೆ ಮತ್ತು ಒಂದು ಶೌಚಾಲಯ ವಿರುತ್ತದೆ. ಒಂದು ಕೊಠಡಿಯಲ್ಲಿ ಅಡುಗೆ ಮನೆಗೆ ಬೇಕಾದ ಸಾಮಗ್ರಿಗಳು, ಪಾತ್ರೆ ಪಗಡಿಗಳು, ಬಕೆಟ್‌ ಮತ್ತಿತರ ವಸ್ತುಗಳನ್ನು ಇಡಲಾಗಿದೆ. ಸದ್ಯದಲ್ಲೇ ನಿರಾಶ್ರಿತರ ಕೇಂದ್ರಕ್ಕೆ ಚಾಲನೆ ನೀಡಲಾಗುವುದು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಎಲ್ಲವನ್ನೂ ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ನೋಡಲು ಜೈಲಿನಂತಿದ್ದರೂ ಇದು ಜೈಲಲ್ಲ. ಇದು ಕೇವಲ ನಿರ್ಬಂಧಿತ ಪ್ರದೇಶ ಅಷ್ಟೆ. ಪಾಸ್‌ಪೋರ್ಟ್‌, ವೀಸಾ ಮತ್ತಿತರ ಪ್ರಯಾಣ ದಾಖಲೆಗಳನ್ನು ಹೊಂದಿರದೆ ಅಕ್ರಮವಾಗಿ ದೇಶಕ್ಕೆ ಆಗಮಿಸುವ ವಿದೇಶೀ ಯರನ್ನು ಈ ಕೇಂದ್ರದಲ್ಲಿ ಇರಿಸಲಾಗುತ್ತದೆ. ಜತೆಗೆ, ಅವರ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತದೆ ಎಂದು ವಲಸೆ ಬ್ಯೂರೋದ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖೀಸಿ ಮಾಧ್ಯಮವೊಂದು ವರದಿ ಮಾಡಿದೆ.

1992ರಲ್ಲಿ ನಿರ್ಮಾಣ
ನೆಲಮಂಗಲದ ಸೊಂಡೆಕೊಪ್ಪದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್‌ ಆಗಿ 1992ರಲ್ಲಿ ಇದನ್ನು ನಿರ್ಮಿಸಲಾಗಿತ್ತು. ಕ್ರಮೇಣ ಹಾಸ್ಟೆಲ್‌ನಲ್ಲಿ ತಂಗುವ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗುತ್ತಾ ಸಾಗಿದ ಕಾರಣ 2008ರಲ್ಲಿ ಇದನ್ನು ಮುಚ್ಚಲಾಯಿತು. ಕಳೆದ ವರ್ಷವಷ್ಟೇ ಈ ಕಟ್ಟಡವನ್ನು ನಿರಾಶ್ರಿತರ ಕೇಂದ್ರವಾಗಿ ಬಳಸಲು ನಿರ್ಧರಿಸಲಾಯಿತು. ಬಳಿಕ ಎರಡು ವಾಚ್‌ ಟವರ್‌ಗಳನ್ನು ನಿರ್ಮಿಸ ಲಾಗಿದೆ. ಸದ್ಯಕ್ಕೆ ಇಲ್ಲಿ ಯಾವುದೇ ಅಕ್ರಮ ವಿದೇಶೀಯರನ್ನು ಹಾಕಿಲ್ಲ.

ಸೊಂಡೆಕೊಪ್ಪದ ನಿರಾಶ್ರಿತರ ಕೇಂದ್ರ ಹೇಗಿದೆ?
– 10 ಅಡಿ ಎತ್ತರದ ಗೋಡೆಗಳು
– ಕಾಂಪೌಂಡ್‌ ಮೇಲೆ ನಾಲ್ಕೂ ಬದಿಗಳಲ್ಲಿ ತಂತಿ ಬೇಲಿ
– ಕಾಂಪೌಂಡ್‌ನ‌ ಎರಡೂ ಮೂಲೆ ಗಳಲ್ಲಿ ವೀಕ್ಷಣಾ ಟವರ್‌
– ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬಂದಿ ಕೊಠಡಿ

Advertisement

Udayavani is now on Telegram. Click here to join our channel and stay updated with the latest news.

Next