Advertisement

ಉಪ ಸಮರಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

04:43 PM Apr 08, 2017 | Team Udayavani |

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ನ್ಯಾಯಸಮ್ಮತವಾಗಿ ಹಾಗೂ ಶಾಂತಿಯುತವಾಗಿ ನಡೆಯಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ. ರಾಮು ತಿಳಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.9ರಂದು  ಮತದಾನ‌ವನ್ನು ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬರು ಮತಗಟ್ಟೆ ಅಧಿಕಾರಿ, ವಿವಿ ಪ್ಯಾಟ್‌ಗೆ ಒಬ್ಬರು ಅಧಿಕಾರಿ ಸೇರಿದಂತೆ ಒಟ್ಟು 5 ಜನ ಮತದಾನ ಅಧಿಕಾರಿಗಳನ್ನು ನೇಮಿಸಲಾಗಿದೆ. ಒಟ್ಟು 250 ಮತಗಟ್ಟೆಗಳಿಗೆ 275  ಮತಗಟ್ಟೆ ಅಧಿಕಾರಿಗಳು, 275 ಒಂದನೇ ಮತದಾನ ಅಧಿಕಾರಿ, 550 ಎರಡು ಮತ್ತು ಮೂರನೇ ಮತದಾನ ಅಧಿಕಾರಿ ಹಾಗೂ 275 4ನೇ ಮತದಾನ ಅಧಿಕಾರಿ ಸೇರಿ ಒಟ್ಟು 1375 ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಒಟ್ಟು 2,00,862 ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ 1,00,144 ಪುರುಷ ಮತದಾದರರು, 1,00,701 ಮಹಿಳೆಯರು ಹಾಗೂ 17 ಸೇವಾ ಮತದಾರರು ಇದ್ದು 250 ಮತಗಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು. ಪ್ರತಿ ಮತಗಟ್ಟೆಗೆ ಒಬ್ಬರು ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಿದ್ದು, ಒಟ್ಟು 270 ಸೂಕ್ಷ್ಮ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಮತಗಟ್ಟೆ ಅಧಿಕಾರಿಗಳನ್ನು ಮತಗಟ್ಟೆಗೆ ತಲುಪಿಸುವ ಸಲುವಾಗಿ 60 ಕೆಎಸ್‌ಆರ್‌ಟಿಸಿ ಮತ್ತು 20 ಸರ್ಕಾರಿ ಜೀಪ್‌ಗ್ಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

22 ವಲ್ನರನಲ್‌ ಮತಗಟ್ಟೆಗಳು: 250 ಮತಗಟ್ಟೆಗಳಲ್ಲಿ 40 ಅತಿಸೂಕ್ಷ¾, 56 ಸೂಕ್ಷ್ಮ, 19 ರಿಮೋಟ್‌ ಏರಿಯಾ ಹಾಗೂ 126  ಸಾಧಾರಣಾ ಮತಗಟ್ಟೆಗಳನ್ನಾಗಿ ವಿಂಗ
ಡಿಸಿದ್ದು, 22 ಮತಗಟ್ಟೆಗಳನ್ನು ವಲ್ನರಬಲ್‌ ಮತ ಗಟ್ಟೆಗಳೆಂದು ಗುರುತಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು 55 ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌, 128 ಹೆಡ್‌ ಕಾನ್ಸ್‌ಟೇಬಲ್‌, 250 ಪೊಲೀಸ್‌ ಕಾನ್ಸ್‌ಟೇಬಲ್ಸ್‌, 194 ಹೋಂರ್ಡ್‌ ಹಾಗೂ 365 ಸಿಪಿಎಂಎಫ್ಗಳನ್ನು ಭದ್ರತೆಗಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.

ಶನಿವಾರ ಮಸ್ಟರಿಂಗ್‌, ಭಾನುವಾರ  ಡೀಮ ಸ್ಟರಿಂಗ್‌ ಕಾರ್ಯವು ಗುಂಡ್ಲುಪೇಟೆ ಸೇಂಟ್‌ ಜಾನ್ಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಂ‌ುಲಿದ್ದು ವೆಬ್‌ಕಾಸ್ಟಿಂಗ್‌ ಕೂಡ ಮಾಡಲಾಗುವುದು ಎಂದರು. ಭಾನುವಾರ ಮತದಾನದ ದಿನದಂದು ಮತದಾನ ಪ್ರಾರಂಭಕ್ಕಿಂತ ಮುಂಚೆ ಅಣಕು ಮತದಾನವನ್ನು ಆಯಾ ಮತಗಟ್ಟೆಗಳಲ್ಲಿ ನಡೆಸಲಾಗುವುದು, ಅಣಕು ಮತದಾನ ನಡೆಸುವಾಗ ಎಲ್ಲಾ ಅಭ್ಯರ್ಥಿಗಳ ಮತಗಟ್ಟೆ ಏಜೆಂಟ್‌ ಹಾಜರಿದ್ದು, ಅಣಕು  ಮತದಾನ ಮಾಡಿ, ಇವಿಎಂ ಮತ್ತು ವಿವಿಪ್ಯಾಟ್‌ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

Advertisement

100 ಮೀ ಒಳಗೆ  ಒಲೈಕೆ ಇಲ್ಲ: ಮತದಾರರ ಲ್ಲದವರು, ರಾಜಕೀಯ ಮುಖಂಡರು ಕ್ಷೇತ್ರ ಬಿಡು ವಂತೆ ಸೂಚನೆ ನೀಡಲಾಗಿದೆ. ಮತದಾನದಂದು ಮತಗಟ್ಟೆಯ 100 ಮೀ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿಯನ್ನು ಓಲೈಕೆ ಮಾಡುವುದಾಗಲಿ, ಪ್ರಚಾರ ಮಾಡುವುದಾಗಲಿ ಮಾಡುವಂತಿಲ್ಲ, ಈಗಾಗಲೇ ಪಾನ ನಿಷೇಧ ಘೋಷಿಸಿ ಒಣ ದಿನ ಆಚರಣೆಗೆ ಆದೇಶ ಹೊರಡಿಸಲಾಗಿದೆ. ಮತದಾನದ ವ್ಯವಸ್ಥೆಯನ್ನು ವಿಡಿಯೋ ತೆಗೆ ಸುವ ಸಂಬಂಧ 250 ಮಂದಿ ವೀಡಿಯೋ ಗ್ರಾಫ‌ರ್‌ಗಳನ್ನು ನೇಮಕ ಮಾಡಲಾಗಿದೆ. ಮತದಾನ ಪ್ರಕ್ರಿ ಯೆಯನ್ನು ವೆಬ್‌ಕ್ಯಾಸ್ಟಿಂಗ್‌ ನಡೆಸಲು ಬಿಎಸ್‌ಎನ್‌ಎಲ್‌ ಮೂಲಕ ಕ್ರಮ ವಹಿಸಲಾಗಿದೆ ಎಂದರು.

24×7 ಭದ್ರತೆ: ಸ್ಟ್ರಾಂಗ್‌ ರೂಂನಲ್ಲಿ ಲೋಹ ಶೋಧಕ ಹಾಗೂ ಸಿಸಿ ಟಿವಿ ಅಳವಡಿಸಲಾಗಿದೆ. ಮತದಾನದ ನಂತರ ಗುಂಡ್ಲುಪೇಟೆ ಸೇಂಟ್‌ ಜಾನ್ಸ್‌ ಆಂಗ್ಲ ಮಾಧ್ಯಮ ಶಾಲಾ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಭದ್ರತಾ ಕೊಠಡಿಯಲ್ಲಿ 24×7 ಪೊಲೀಸ್‌ ಹಾಗೂ ಸಿಸಿಎಫ್ ಬಂದೋಬಸ್ತ್ನಲ್ಲಿ ಮೊಹರು ಮಾಡಿ ಇಡಲಾಗುವುದು, ಮತ ಎಣಿಕೆ ದಿನ ಅಭ್ಯರ್ಥಿಗಳ ಸಮ್ಮುಖದಲ್ಲಿ ತೆರೆಯಲಾಗುವುದು ಎಂದರು.

108 ಅಕ್ರಮ ಮದ್ಯ ಪ್ರಕರಣ ದಾಖಲು: ಇದುವರೆಗೆ 67491 ರೂ.ಮೌಲ್ಯದ ಅಕ್ರಮವಾಗಿ ಸಾಗಿಸುತ್ತಿದ್ದ 112 ಲೀ, ಮದ್ಯವನ್ನು ವಶಪಡಿಸಿಕೊಂಡಿದ್ದು, 108 ಪ್ರಕರಣಗಳಲ್ಲಿ 91 ಜನರನ್ನು ದಸ್ತಗಿರಿ ಮಾಡಲಾಗಿದೆ. ಪೊಲೀಸ್‌ ಇಲಾಖೆಯಲ್ಲಿ 48 ಪ್ರಕರಣಗಳು ದಾಖಲಾಗಿದ್ದು ಅವುಗಳ ಪೈಕಿ 46 ಪ್ರಕರಣಗಳಿಗೆ ಎಫ್ಐಆರ್‌ ದಾಖಲಿಸಲಾಗಿದೆ. ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ 74 ಪ್ರಕರಣಗಳಿಗೆ ಎಫ್ಐಆರ್‌ ದಾಖಲಾಗಿಸಲಾಗಿದೆ ಎಂದರು.

300ಕ್ಕೂ ಹೆ‌ಚ್ಚು ವಾಹನಗಳ ಜಪ್ತಿ: ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲಾ ಸಿದ್ದತೆಗಳನ್ನು ಕೈಗೊಂಡಿದ್ದು, ಮುಖ್ಯಮಂತ್ರಿ ಹಾಗೂ ತಮ್ಮನ್ನೂ ಸೇರಿದಂತೆ ಎಲ್ಲರ ವಾಹನಗಳನ್ನು ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲಿಸಲಾಗುತ್ತಿದ್ದು, 300ಕ್ಕೂ ಹೆಚ್ಚು ವಾಹಗಳನ್ನು ಜಪ್ತಿ ಮಾಡಲಾಗಿದೆ ಎಂದರು. ಹಣ ಹಂಚುವ ಬಗ್ಗೆ ದೂರು ಹಾಗೂ ಸಾಕ್ಷಿ ಕೊಟ್ಟರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಗಾಯತ್ರಿ ಜಿಲ್ಲಾ ಅಬ್ಕಾರಿ ಆಯುಕ್ತ ನಾಗೇಶ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next