Advertisement

ಚೆ‌ಂಗಡಿ ಗ್ರಾಮ ಸ್ಥಳಾಂತರಕ್ಕೆ ಸಿದ್ಧತೆ

05:08 AM May 22, 2020 | Lakshmi GovindaRaj |

ಹನೂರು: ಜಿಲ್ಲೆಯಲ್ಲಿ ಸ್ಥಳಾಂತರಗೊಂಡ ಮೊದಲ ಗ್ರಾಮ ಚೆಂಗಡಿ ಎಂದು ಜಿಲ್ಲಾ ಉಸ್ತುವಾರ ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು. ತಾಲೂಕಿನ ಅರಣ್ಯದೊಳಗಿನ ಚೆಂಗಡಿ ಗ್ರಾಮ ಸ್ಥಳಾಂತರಿಸುವ ಹಿನ್ನೆಲೆ ಗ್ರಾಮಸ್ಥರ ಜೊತೆ ಸಭೆ  ನಡೆಸಿದ ಸಚಿವರು, ಚೆಂಗಡಿ ಅರಣ್ಯದೊಳಗಿನ ಗ್ರಾಮವಾಗಿದ್ದು ಅರಣ್ಯ ನೀತಿಯಿಂದಾಗಿ ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ 225 ಕುಟುಂಬಗಳು ವಾಸಿಸುತ್ತಿರುವ 1562 ಜನಸಂಖ್ಯೆ ಹೊಂದಿರುವ ಗ್ರಾಮವನ್ನು ಸ್ಥಳಾಂತರಿಸಲು  ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

Advertisement

ಜಮೀನು, ನಿವೇಶನದ ಭರವಸೆ: ಚೆಂಗಡಿಯಿಂದ ಸ್ಥಳಾಂತರಗೊಳ್ಳುವ ಗ್ರಾಮಸ್ಥರಿಗೆ ಕೊತ್ತನೂರು ಸಮೀಪ 400 ಎಕರೆ ಜಾಗವನ್ನೂ  ಗುರುತಿಸಲಾಗಿದೆ. ಪ್ರತಿ ಕುಟುಂಬಕ್ಕೆ 15-20 ಲಕ್ಷ ರೂ., ಅವರ ಆಸ್ತಿಯ ಮೌಲ್ಯ ಅಥವಾ 3 ಎಕರೆ ಜಮೀನು, ವಸತಿಗಾಗಿ ನಿವೇಶನ ನೀಡಲಾಗುವುದು. ಈ ಎರಡು ಪ್ಯಾಕೇಜ್‌ನಲ್ಲಿ ಪ್ರತಿ  ಕುಟುಂಬ ಯಾವ ರೀತಿ ಬಯಸುತ್ತದೆಯೋ ಅದೇ ರೀತಿ ಪರಿಹಾರ ಕಲ್ಪಿಸಲಾಗುವುದು ಎಂದರು.

ಗ್ರಾಮಗಳ ಸ್ಥಳಾಂತರಕ್ಕೆ ಮಾದರಿ: ಈ ಪ್ರಕ್ರಿಯೆ ತಾಲೂಕಿನ ತೇಕಣಿ, ಮೆದಗನಾಣೆ, ಪಡಸಲನತ್ತ ಸೇರಿದಂತೆ ಇನ್ನಿತರ ಗ್ರಾಮಗಳ ಸ್ಥಳಾಂತರಕ್ಕೂ ಮಾದರಿ ಯಾಗಲಿದೆ. ಗ್ರಾಮಸ್ಥರು ಭಾವನಾತ್ಮಕ ಸಂಬಂಧವನ್ನು ಬದಿಗೊತ್ತಿ  ಸ್ಥಳಾಂತರಗೊಳ್ಳಬೇಕು. ಸ್ಥಳಾಂತರಗೊಂಡ ಗ್ರಾಮಕ್ಕೂ ಚೆಂಗಡಿ ಎಂದೇ ನಾಮಕರಣ ಮಾಡಲಾ ಗುವುದು ಎಂದು ಭರವಸೆ ನೀಡಿದರು.

ಶಾಸಕರಾದ ನರೇಂದ್ರ, ಮಹೇಶ್‌, ಜಿಪಂ ಸದಸ್ಯ ಬಾಲರಾಜು, ಮಾಜಿ ಶಾಸಕ ನಂಜುಂಡಸ್ವಾಮಿ, ಜಿಲ್ಲಾಧಿಕಾರಿ ರವಿ, ಎಸ್ಪಿ ಆನಂದ್‌ಕುಮಾರ್‌, ಜಿಪಂ ಸಿಇಒ ನಾರಾಯಣ್‌ ರಾವ್‌, ಡಿಎಫ್ಓ ಏಡು ಕೊಂಡಲು, ಉಪ ವಿಭಾಗಾಧಿ ಕಾರಿ ನಿಖೀತಾ, ಇಒ ಡಾ.ಪ್ರಕಾಶ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next