Advertisement

ಪುರಸಭಾ ಚುನಾವಣೆಗೆ ಸಕಲ ಸಿದ್ಧತೆ

09:04 PM May 04, 2019 | Lakshmi GovindaRaj |

ದೇವನಹಳ್ಳಿ: ನಗರದ ಪುರಸಭೆಯ ಎಲ್ಲಾ 23ವಾರ್ಡ್‌ಗಳಿಗೆ ಮೇ 29ರಂದು ಚುನಾವಣೆ ನಡೆಯಲಿದ್ದು, ಚುನಾವಣಾ ದಿನಾಂಕ ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಪುರಸಭಾ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು. ನಗರದ ಬಳಿಯ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಚುನಾವಣಾಧಿಕಾರಿಗಳ ನೇಮಕ: ನೆಲಮಂಗಲ ಮತ್ತು ದೇವನಹಳ್ಳಿ ಪುರಸಭೆಯ 23ವಾರ್ಡ್‌ಗಳಿಗೆ ಚುನಾವಣೆ ನಡೆಸಲಾಗುವುದು. ದೇವನಹಳ್ಳಿ ಪುರಸಭೆಯ ಒಂದರಿಂದ 12ವಾರ್ಡ್‌ಗಳಿಗೆ ಒಬ್ಬರು ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿ ಹಾಗೂ 13ನೇ ವಾರ್ಡ್‌ನಿಂದ 23ನೇ ವಾರ್ಡ್‌ಗಳಿಗೆ ಮತ್ತೂಬ್ಬರನ್ನು ನೇಮಕ ಮಾಡಲಾಗಿದೆ.

ಒಂದನೇ ವಾರ್ಡ್‌ನಿಂದ 12ವಾರ್ಡ್‌ಗಳಿಗೆ ಚುನಾವಣಾಧಿಕಾರಿಯಾಗಿ ತಾಪಂ ಸಹಾಯಕ ನಿರ್ದೇಶಕ ಪ್ರದೀಪ್‌, ಮೊ.ನಂ.9886728666, ಸಹಾಯಕ ಚುನಾವಣಾಧಿಕಾರಿಯಾಗಿ ತಾಲೂಕು ರೇಷ್ಮೆ ಇಲಾಖೆ ತಾಂತ್ರಿಕ ಸಹಾಯಕ ಕುಂದರಗಿ ಮೊ.ನಂ.8970574521 ಅವರನ್ನು ನೇಮಿಸಲಾಗಿದೆ.

ವಾರ್ಡ್‌ 1- ಪ್ರಸನ್ನ ಹಳ್ಳಿ , 2- ಶಾಂತಿ ನಗರ ದಕ್ಷಿಣ, 3- ಜೊಳ್ಳಪ್ಪನವರ ಬೀದಿ, 4- ಗರಡಿ ಮನೆ ಬೀದಿ, 5- ಯಲಹಂಕ ಬೀದಿ, 6- ಗಾಣಿಗರ ಬೀದಿ , 7- ಕೋಟೆಯ ಎಡ ಭಾಗ, 8- ಕೋಟೆಯ ಬಲ ಭಾಗ, 9- ಪರ್ವತಪುರ ರಸ್ತೆ ಎಡ ಭಾಗ, 10- ನೀಲೇರಿ, 11- ಅಚಲ ಮಂದಿರ, 12-ಮರಳುಬಾಗಿಲು ಮತ್ತು ಹರಿಜನ ಕಾಲೋನಿ ವಾರ್ಡ್‌ಗಳ ಉಸ್ತುವಾರಿಯನ್ನು ಅವರು ನೋಡಿಕೊಳ್ಳಲಿದ್ದಾರೆ ಎಂದರು.

13ನೇ ವಾರ್ಡ್‌ನಿಂದ 23ನೇ ವಾರ್ಡ್‌ ವರೆಗೆ ಚುನಾವಣಾಧಿಕಾರಿಯಾಗಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ ಮೊ. ನಂ.9900226282, ಸಹಾಯಕ ಚುನಾವಣಾಧಿಕಾರಿಯಾಗಿ ಲೋಕಪಯೋಗಿ ಇಲಾಖೆ ಎಇ ಜಗದೀಶ್‌ ಮೊ.ನಂ.9448610495 ಅವರನ್ನು ನೇಮಿಸಲಾಗಿದೆ.

Advertisement

ವಾರ್ಡ್‌ ನಂ.13: ಕುಂಬಾರ ಬೀದಿ, 14-ಮಹಂತಿ ಮಠ, 15- ಕಾಳಮ್ಮ ದೇವಾಲಯ ಬೀದಿ, 16- ಅಂಬೇಡ್ಕರ್‌ ಕಾಲೋನಿ, 17- ದಾಸರ ಬೀದಿ, 18- ಚನ್ನರಾಯ ಪಟ್ಟಣ ರಸ್ತೆ ಬಲ ಭಾಗ, 19- ಚನ್ನರಾಯಪಟ್ಟಣ ರಸ್ತೆ ಎಡ ಭಾಗ, 20- ಶಾಂತಿ ನಗರ ಉತ್ತರ, 21- ಪ್ರಶಾಂತ ನಗರ , 22- ಮಂಜುನಾಥ್‌ ನಗರ , 23- ಅಕ್ಕು ಪೇಟೆ ವಾರ್ಡ್‌ಗಳ ಉಸ್ತುವಾರಿಯನ್ನು ಅವರು ನೋಡಿಕೊಳ್ಳಲಿದ್ದಾರೆ ಎಂದು ಹೇಳಿದರು.

ಮೇ 9ರಂದು ಅಧಿಕೃತ ಅಧಿಸೂಚನೆ, ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮೇ 17 ನಾಮಪತ್ರ ಪರಿಶೀಲನೆ, ಮೇ 20 ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನ. ಮೇ 29ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಮೇ 30 ಅಗತ್ಯವಿದ್ದಲ್ಲಿ ಮರು ಮತದಾನ, ಮೇ 31 ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 5ರ ವರೆಗೆ ಮತ ಎಣಿಕೆ ನಡೆಯಲಿದೆ.

ಮೇ 2ರಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಮೇ 31ರ ವರೆಗೂ ಚಾಲ್ತಿಯಲ್ಲಿರುತ್ತದೆ. ಈ ಬಾರಿ ಪುರಸಭಾ ಚುನಾವಣೆಯಲ್ಲಿ ನೋಟಾ ಕಲ್ಪಿಸಲಾಗಿದೆ. ಶಾಂತಿಯುತ ಮತದಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪುರಸಭಾ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next