Advertisement

ಗ್ರಾಮದೇವಿ ಜಾತ್ರೆಗೆ ಸಿದ್ಧತೆ

03:06 PM Jan 04, 2018 | |

ಯಲ್ಲಾಪುರ: ಜಾತ್ರೆ ಸಂದರ್ಭದಲ್ಲಿ ಕುಡಿವ ನೀರು, ಸ್ವತ್ಛತೆ, ದಾರಿದೀಪ ಹಾಗೂ ರಕ್ಷಣೆ ಬಗೆಗೆ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸಬೇಕು. ಯಾವುದೇ ಮೂಲ ಸೌಲಭ್ಯಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಆರಕ್ಷಕರು ತಾಳ್ಮೆ ಮತ್ತು ಜಾಣ್ಮೆಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಶಿವರಾಮ ಹೆಬ್ಟಾರ ಹೇಳಿದರು.

Advertisement

ಬುಧವಾರ ಪಟ್ಟಣದ ತಾ.ಪಂ ಸಭಾಭವನದಲ್ಲಿ ಗ್ರಾಮದೇವಿ ಜಾತ್ರೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಹಶೀಲ್ದಾರ್‌  ಕಚೇರಿ ಬಳಿ, ಶಿರಸಿ ಅರ್ಬನ್‌ ಬ್ಯಾಂಕ್‌ ಎದುರು ಸಾರ್ವಜನಿಕ ಶೌಚಾಲಯ ಹಾಗೂ ಐಬಿ ರಸ್ತೆ ಬಳಿ ಸಾರ್ವಜನಿಕ ಮೂತ್ರಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಮೊಬೈಲ್‌ ಶೌಚಾಲಯ ಬಳಸಿಕೊಂಡು ಜಾತ್ರಾರ್ಥಿಗಳಿಗೆ ಅನುಕೂಲತೆ ಕಲ್ಪಿಸಿ ಕೊಡಲಾಗುವುದು ಎಂದು ಪ.ಪಂ.ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾನಿ ಮಾಹಿತಿ ನೀಡಿದರು.

ಜಾತ್ರೆಯಲ್ಲಿ ಪಿಕ್‌ ಪಾಕೇಟ್‌ 
ಆಗದಂತೆ ಸೂಕ್ತ ರಕ್ಷಣೆ ನೀಡಲಾಗುತ್ತದೆ. ಹಾವೇರಿ, ಬೆಳಗಾವಿ, ಧಾರವಾಡ ಇತ್ಯಾದಿಗಳಿಂದ ಮೂರು ಪೊಲೀಸ್‌ ಸ್ಕ್ವಾಡ್‌ ನಿಯೋಜಿಸಲಾಗುತ್ತದೆ. ಹೆಚ್ಚುವರಿಯಾಗಿ ಸುಮಾರು 40 ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುವುದು ಎಂದು ಸಿಪಿಐ ಮಂಜುನಾಥ ನಾಯಕ ತಿಳಿಸಿದರು. ಜಾತ್ರಾ ಸಂದರ್ಭದಲ್ಲಿ ಬರುವ ವಾಹನಗಳ ಸಮರ್ಪಕ ಪಾರ್ಕಿಂಗ್‌ ವ್ಯವಸ್ಥೆ, 24 ಗಂಟೆಗಳ ಕಾಲ ನಿರಂತರ ವಿದ್ಯುತ್‌ ಪೂರೈಕೆ, ಹೆಚ್ಚುವರಿ ಬಸ್‌, ಮೊಬೈಲ್‌ ದೂರವಾಣಿ ಸೇವೆ, ಉಚಿತ ಆರೋಗ್ಯ ಸೇವೆ ಬಗ್ಗೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಯಿತು. ಜಾತ್ರಾ ನಿರ್ವಹಣೆಗೆ ಅನುಭವಿ ಅಧಿಕಾರಿಗಳ ಮಾರ್ಗದರ್ಶನ ಪಡೆದು, ಶಾಂತಿ ಸುವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಸೂಚಿಸಿದರು. ಪಾರ್ಕಿಂಗ್‌, ಬೀದಿ ದೀಪ, ಸಾರಿಗೆ ಮೂಲ ಸೌಕರ್ಯಗಳ ಬಗ್ಗೆ ಮುತುವರ್ಜಿ ವಹಿಸಬೇಕೆಂದು ಸಂಕಲ್ಪ ಅಧ್ಯಕ್ಷ ಪ್ರಮೋದ ಹಗಡೆ ಸೂಚಿಸಿದರು. 

ವಿವಿಧ ಸಂಘ-ಸಂಸ್ಥೆಗಳ ಪ್ರಮುಖರಾದ ಮಹೇಶ್‌ ನಾಯ್ಕ, ಮಹಮ್ಮದ್‌ ಗೌಸ್‌, ಜಗದೀಶ್‌ ನಾಯ್ಕ, ಶೋಭಾ ಹುಲಮನಿ, ಯೋಗೇಶ ಹಿರೇಮಠ, ಸೂರಜ್‌ ಹೆಗಡೆ, ಕೇಬಲ್‌ ನಾಗೇಶ್‌ ಮುಂತಾದವರು ಸಲಹೆ ಸೂಚನೆ ನೀಡಿದರು. ಪ.ಪಂ. ಅಧ್ಯಕ್ಷ
ಶಿರೀಷ್‌ ಪ್ರಭು, ಉಪಾಧ್ಯಕ್ಷೆ ಬಶೀರಾ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷೆ ಪುಷ್ಪಾ ನಾಯ್ಕ, ತಹಶೀಲ್ದಾರ ಡಿ.ಜಿ. ಹೆಗಡೆ, ಗ್ರಾಮದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಾಜೇಂದ್ರ ಪ್ರಸಾದ ಭಟ್ಟ ಮುಂತಾದವರು ಇದ್ದರು.

ಮಾಧ್ಯಮದವರಿಗೂ ಪಾಠ:
ಜಾತ್ರೆ ಸಂದರ್ಭದಲ್ಲಿ ಆಗುವ ಸಣ್ಣಪುಟ್ಟ ಲೋಪದೋಷಗಳನ್ನೇ ಮಾಧ್ಯಮದವರು ವೈಭವೀಕರಿಸುವ ತಮ್ಮ ದೊಡ್ಡಸ್ಥಿಕೆಯೊಂದನ್ನೇ
ತೊರಿಸದೇ ಯಲ್ಲಾಪುರದ ಹೆಸರು ಹಾಳಾಗದಂತೆ ಎಚ್ಚರ ವಹಿಸಿ ಎಂದು ಮಾಧ್ಯಮದವರಿಗೆ ಶಾಸಕರು ಪಾಠ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next