Advertisement

ಡಿಕೆಶಿ ಪದಗ್ರಹಣ ವೀಕ್ಷಣೆಗೆ ಸಿದ್ಧತೆ

05:16 AM Jul 02, 2020 | Lakshmi GovindaRaj |

ಹುಣಸೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್‌ ಖಂಡ್ರೆ, ಸತೀಶ್‌ ಜಾರಕಿಹೊಳಿ, ಸಲೀಂ ಅಹಮದ್‌ ಪದಗ್ರಹಣ ಗುರುವಾರ ನಡೆಯಲಿದ್ದು, ಸಮಾರಂಭ ವೀಕ್ಷಣೆ ಹಾಗೂ ಪ್ರತಿಜ್ಞಾ ವಿಧಿ  ಸ್ವೀಕಾರ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹುಣಸೂರು ಬ್ಲಾಕ್‌ ವೀಕ್ಷಕ ಚಿದಂಬರ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ ಹಿನ್ನೆಲೆಯಲ್ಲಿ ಡಿಕೆಶಿ ಅಧಿ ಕಾರ ಸ್ವೀಕಾರ ಕಾರ್ಯಕ್ರಮ ಕಾಂಗ್ರೆಸ್‌ ಪಕ್ಷದ ಎಲ್ಲಾ ಕಾರ್ಯಕರ್ತರು ಇರುವಲ್ಲೇ ವೀಕ್ಷಿಸುವ ಹಾಗೂ ಇಲ್ಲಿ ಭಾಗವಹಿಸುವುದನ್ನು ಬೆಂಗಳೂರಿನಲ್ಲಿ ವಿಡಿಯೋ ಮೂಲಕ ವೀಕ್ಷಿಸಲು ಅನುವಾಗುವಂತೆ ಹುಣಸೂರು ತಾಲೂಕಿನ 41 ಗ್ರಾಪಂ ಹಾಗೂ  ನಗರದ ಕಾಂಗ್ರೆಸ್‌ ಕಚೇರಿ, ಎಸ್‌ಎಲ್‌ವಿ ಕಲ್ಯಾಣ ಮಂಟಪ ಹಾಗೂ ಪವನ್‌ ಜಲ್‌ ಫ್ಯಾಕ್ಟರಿಯಲ್ಲಿ ಶಾಸಕ ಮಂಜುನಾಥ್‌ ಸಹಕಾರದೊಂದಿಗೆ ವ್ಯವಸ್ಥೆ ಮಾಡಲಾಗಿದೆ.

ತಾಲೂಕಿನಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು  ಭಾಗವಹಿಸಲಿದ್ದಾರೆ. ಕಾರ್ಯಕರ್ತರು ಕಾರ್ಯಕ್ರಮ ವೀಕ್ಷಿಸುವ ಸಂದರ್ಭದಲ್ಲಿ 7676366666ಗೆ ಮಿಸ್ಡ್ ಕಾಲ್‌ ನೀಡುವಂತೆ ಮನವಿ ಮಾಡಿದರು. ಬಿಳಿಕರೆ ಬ್ಲಾಕ್‌ನ ವೀಕ್ಷಕ ಲೋಕೇಶ್‌ರಾವ್‌ ಮಾತನಾಡಿ, ಬಿಳಿಗೆರೆ, ಮುಳ್ಳೂರು, ಜಾಬಗೆರೆ  ಹಾಗೂ ಗಾವಡಗೆರೆ ಗ್ರಾಪಂಗಳಲ್ಲಿ ಎಲ್ಲಾ ವ್ಯವಸ್ಥೆ ಕೈಗೊಳ್ಳಲಾಗಿದೆ.

ಕೋವಿಡ್‌-19 ಮಾರ್ಗಸೂಚಿಯಂತೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್, ಸ್ಯಾನಿಟೈಸರ್‌, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯ ಮಹಿಳಾ  ಕಾಂಗ್ರೆಸ್‌ ಅಧ್ಯಕ್ಷೆ ಡಾ. ಪುಷ್ಪಾಅಮರನಾಥ್‌ ಸಹಕಾರ ನೀಡಿದ್ದಾರೆ. ಆದಿವಾಸಿಗಳ ವೀಕ್ಷಣೆಗೆ ಶೆಟ್ಟಹಳ್ಳಿ ಪುನರ್ವಸತಿ ಕೇಂದ್ರದಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಬಿಳಿಕೆರೆ ಬ್ಲಾಕ್‌ ಅಧ್ಯಕ್ಷ ನಾರಾಯಣ್‌  ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next