Advertisement
“ಸುದಿನ’ ಜತೆ ವಿವರ ಹಂಚಿಕೊಂಡ ಅವರು, ಹೋಲಿ ರೋಜರಿ ಚರ್ಚ್ ಜಿಲ್ಲೆಯಲ್ಲೇ ಅತ್ಯಂತ ಪ್ರಾಚೀನ ಇಗರ್ಜಿಯಾಗಿದ್ದು 450 ವರ್ಷಗಳ ಇತಿಹಾಸ ಹೊಂದಿದೆ. ಪೋರ್ಚುಗೀಸರಿಂದ ಪ್ರತಿಷ್ಠಾಪಿಸಲ್ಪಟ್ಟು ಇಲ್ಲಿದ್ದ ಗುರುಗಳಿಗೆ ಸಂತ ಪದವಿಯೂ ದೊರೆತಿದೆ. ಈ ವರ್ಷ 450 ವರ್ಷದ ಮುಕ್ತಾಯ ಆಚರಣೆಯ ಮಹೋತ್ಸವವು ಅದ್ದೂರಿಯಿಂದ ನಡೆಯದಿದ್ದರೂ, ಬಹಳ ಭಕ್ತಿ ಶ್ರದ್ಧೆಯಿಂದ ನಡೆದಿತ್ತು. ಕ್ರಿಸ್ಮಸ್‌ಗೂ ಲಾಕ್‌ಡೌನ್ ಅನಂತರ ಸರಕಾರ ಸೂಚಿಸಿದ ಎಲ್ಲ ಮಾರ್ಗಸೂಚಿಗಳನ್ನೂ ಪಾಲಿಸಲಾಗುತ್ತಿದ್ದು ಹಿರಿಯ ನಾಗರಿಕರು ಹಾಗೂ ಮಕ್ಕಳು ಈಗಲೂ ಚರ್ಚ್‌ಗೆ ಆಗಮಿಸುತ್ತಿಲ್ಲ. ಸ್ಯಾನಿಟೈಸೇಶನ್, ಮಾಸ್ಕ್ ಧಾರಣೆ, ಥರ್ಮಲ್ ಸ್ಕ್ರೀನಿಂಗ್, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಭಕ್ತರ ಆರೋಗ್ಯದ ಕುರಿತು ಎಲ್ಲ ಕಾಳಜಿಯನ್ನೂ ತೆಗೆದುಕೊಳ್ಳಲಾಗುತ್ತಿದೆ. ಕ್ರಿಸ್ಮಸ್ ಪ್ರಯುಕ್ತ ಹೆಚ್ಚು ಜನ ಒಟ್ಟಾಗದಂತೆ ಭಕ್ತರನ್ನು ಇಂತಿಷ್ಟು ಸೀಮಿತವಾಗಿ ಜನರ ತಂಡಗಳಾಗಿ ಮಾಡಲಾಗುತ್ತಿದ್ದು ಹೆಚ್ಚುವರಿ ಪೂಜೆಗಳನ್ನು ಮಾಡಲಾಗುತ್ತಿದೆ. ಇದರಿಂದ ಸಂದಣಿ ಉಂಟಾಗುವುದಿಲ್ಲ, ಭಕ್ತರಿಗೂ ಪೂಜೆಯಲ್ಲಿ ಪಾಲ್ಗೊಳ್ಳುವ ಅವಕಾಶ ತಪ್ಪುವುದಿಲ್ಲ ಎಂದರು. ಈ ಬಾರಿ ಡಿ. 24ರಂದು ಸಂಜೆಯ ಪೂಜೆಯ ಬಳಿಕ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು, ಕೇಕ್ ಹಂಚುವಿಕೆ ನಡೆಯವುದಿಲ್ಲ. ಆರೋಗ್ಯ ಜಾಗೃತಿ ಕುರಿತು ಮಾಹಿತಿ ನೀಡಲಾಗುವುದು ಎಂದರು.
Related Articles
Advertisement
ಕಾರ್ಕಳ, ಡಿ. 23: ತಾಲೂಕಿನಲ್ಲಿ ಅತ್ತೂರು, ನಕ್ರೆ, ಕ್ರೈಸ್ತಕಿಂಗ್, ಪಕಳ, ಬೆಳ್ಮಣ್, ಹಿರ್ಗಾನ, ಅಜೆಕಾರು, ಮಿಯ್ನಾರು ಸೇರಿದಂತೆ ಹಲವೆಡೆ ಚರ್ಚ್‌ಗಳಿವೆ. ಈ ಎಲ್ಲ ಚರ್ಚ್‌ಗಳಲ್ಲಿ ಕ್ರಿಸ್ಮಸ್ ಸಂದರ್ಭ ಜನರು ಎಚ್ಚರಿಕೆ ಕ್ರಮವಾಗಿ ಸರಕಾರದ ಮಾರ್ಗ ಸೂಚಿ ಪಾಲಿಸಿಕೊಂಡು ಹಬ್ಬ ಆಚರಿಸಲಾಗುತ್ತಿದೆ.
ಸಾಮೂಹಿಕ ಕೂಟ, ಚರ್ಚ್‌ಗಳ ಒಳಗೆ ಜನರು ಸೇರದಂತೆ ಕ್ರಮ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು, ಕಡ್ಡಾಯ ಮಾಸ್ಕ್ ಧರಿಸುವುದು ಇತ್ಯಾದಿಗಳನ್ನು ಚರ್ಚ್ ಗಳಲ್ಲಿ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.
ಈ ಬಾರಿ ಕ್ರಿಸ್ಮಸ್‌ಗೆ ಚರ್ಚ್‌ಗಳಲ್ಲಿ ದೀಪಗಳನ್ನು ಸಂಪ್ರದಾಯಕ್ಕಷ್ಟೇ ಬೆಳಗಲಾಗುತ್ತದೆ. ಹಬ್ಬ ವನ್ನು ಸಂಪ್ರದಾಯಕ್ಕೆ ಸೀಮಿತ ಗೊಳಿಸಿ, ಅರ್ಥಗರ್ಭಿತವಾಗಿ ಆಚರಣೆ ನಡೆಸಲು ನಿರ್ಧರಿಸಿದ್ದಾಗಿ ಚರ್ಚ್‌ಗಳ ಧರ್ಮ ಗುರುಗಳು ತಿಳಿಸಿದ್ದಾರೆ.
ಆಡಂಬರ ವಿಲ್ಲ :
ಕೋವಿಡ್-19 ಹಿನ್ನೆಲೆಯಲ್ಲಿ ಆಡಂಬರದ ಆಚರಣೆ ನಡೆಸುತಿಲ್ಲ. ಪೂಜಾ ವಿಧಿಗಳಷ್ಟೆ ಸೀಮಿತವಾಗಿ ನಡೆಯಲಿದೆ. ಪೂಜಾ ಅವಧಿಯನ್ನು ಕಡಿಮೆ ಮಾಡಿ ಸಂಜೆ 7.30ರಿಂದ 8 ರ ಒಳಗೆ ಎಲ್ಲವನ್ನು ಮುಗಿಸುತ್ತೇವೆ. ಅನಂತರದಲ್ಲಿ ಕೇಕ್ ಕತ್ತರಿಸಿ, ಕೂಟ ಸೇರುವ ಕ್ರಮಗಳನೆಲ್ಲ ಸರಳವಾಗಿ ಮಾಡುತ್ತಿದ್ದು. ಪೂಜೆ ಆದ ತತ್‌ಕ್ಷಣವೇ ಮನೆಗಳಿಗೆ ತೆರಳುವಂತೆಸಂದೇಶ ನೀಡಲಾಗಿದೆ. ಅರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ಅಗತ್ಯವಿದ್ದು. ಯಾವುದೇ ಆಡಂಬರಗಳು ಇರುವುದಿಲ್ಲ . – ಅ| ವಂ| ಜಾರ್ಜ್ ಥಾಮಸ್ ಡಿ’ಸೋಜಾ, ಧರ್ಮಗುರು, ಸಂತ ಲಾರೆನ್ಸ್ ಬಸಿಲಿಕಾ ಅತ್ತೂರು ಚರ್ಚ್ ಕಾರ್ಕಳ
ಹೆಬ್ರಿ: ಚರ್ಚ್‌ಗಳಲ್ಲಿ ಕ್ರಿಸ್ಮಸ್ ಆಚರಣೆಗೆ ಸಿದ್ಧತೆ :
ಹೆಬ್ರಿ: ಇಲ್ಲಿ ನ ಮದರ್ ಆಫ್ ಬೋರ್ಡ್ ಚರ್ಚ್ ನಲ್ಲಿ ಕ್ರಿಸ್ಮಸ್ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಚರ್ಚ್‌ನಲ್ಲಿ ಸರಕಾರದ ಸೂಚನೆಯಂತೆ ಕೋವಿಡ್ ನಿಯಮ ಪಾಲನೆಯೊಂದಿಗೆ ಡಿ. 24ರಂದು ಸಂಜೆ 7 ಗಂಟೆಗೆ ಪೂಜೆ ನಡೆಯಲಿದೆ ಎಂದು ಚರ್ಚ್‌ನ ಫಾದರ್ ಮ್ಯಾಥ್ಯೂ ತಿಳಿಸಿದ್ದಾರೆ.
ಅದೇ ರೀತಿ ಹೆಬ್ರಿ ಕುಚ್ಚಾರು ರಸ್ತೆಯಲ್ಲಿರುವ ಚರ್ಚ್ ಹಾಗೂ ಚಾರ ಹುತ್ತುರ್ಕೆ ಬಳಿ ಇರುವ ಚರ್ಚ್‌ನಲ್ಲಿ ಕೂಡ ಕ್ರಿಸ್ಮಸ್ ಆಚರಣೆ ನಡೆಸಲಾಗುತ್ತದೆ.
ಬೈಂದೂರು ಹೋಲಿಕ್ರಾಸ್ ಚರ್ಚ್: ಸರಳ ಆಚರಣೆ :
ಬೈಂದೂರು: ಬೈಂದೂರಿನ ಪ್ರಸಿದ್ಧ ಹೋಲಿ ಕ್ರಾಸ್ ಚರ್ಚ್‌ನಲ್ಲಿ ಈ ಬಾರಿ ಕ್ರಿಸ್ಮಸ್ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ನಿಯಮಗಳಿಗೆ ಅನು ಗುಣವಾಗಿ ಕ್ರಿಸ್ಮಸ್ ಹಬ್ಬ ಆಚರಿಸಲಾಗುತ್ತದೆ ಎಂದು ಚರ್ಚ್ ಪ್ರಕಟನೆಯಲ್ಲಿ ತಿಳಿಸಲಾಗಿದೆ.