Advertisement

ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಸಿದ್ಧತೆ

11:22 PM Sep 30, 2019 | Lakshmi GovindaRaju |

ಮಂಡ್ಯ: ಶತಮಾನಗಳ ಪರಂಪರೆ ಹೊಂದಿರುವ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಈ ಬಾರಿಯ ದಸರಾದಲ್ಲಿ ಗ್ರಾಮೀಣ, ರೈತ ಪರಂಪರೆ ಜತೆಗೆ ಪ್ರವಾಸಿತಾಣಗಳಿಗೂ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅ.3ರಿಂದ 5ರವರೆಗೆ ಶ್ರೀರಂಗಪಟ್ಟಣ ದಸರಾ ಆಯೋಜಿಸಲಾಗಿದೆ. ಅ.3ರಂದು ಕಿರಂಗೂರು ಬನ್ನಿಮಂಟಪದ ಬಳಿ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸುವುದರೊಂದಿಗೆ ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಅಶೋಕ್‌, ವಸತಿ ಸಚಿವ ವಿ.ಸೋಮಣ್ಣ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಉಪಸ್ಥಿತಿಯಲ್ಲಿ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀರಂಗಪಟ್ಟಣ ಶಾಸಕ ಎ.ಎಸ್‌. ರವೀಂದ್ರ ಶ್ರೀಕಂಠಯ್ಯ ವಹಿಸುವರು ಎಂದು ತಿಳಿಸಿದರು.

ದಸರಾ ಆಕರ್ಷಣೆಗಳು: ಪರಂಪರೆ ದರ್ಶನ, ಯುವ ದಸರಾ, ಗಾಳಿಪಟ ಉತ್ಸವ, ಕ್ರೀಡಾ ದಸರಾ (ಗ್ರಾಮೀಣ ಕ್ರೀಡೆಗಳು), ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಯೋಗ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ ಆಯೋಜಿಸಲಾಗಿದ್ದು, ಸಾರ್ವಜನಿಕರನ್ನೂ ಪರಂಪರೆಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವುದು ಇದರ ಹಿಂದಿನ ಉದ್ದೇಶವಾಗಿದೆ. ದಸರಾ ವೇಳೆ ಹೆಲಿಕ್ಯಾಪ್ಟರ್‌ ಜಾಯ್‌ ರೇಡ್‌, ವಾಟರ್‌ ನ್ಪೋರ್ಟ್ಸ್, ರಿವರ್‌ ರ್ಯಾಫ್ಟಿಂಗ್‌, ರಾಕ್‌ ಕ್ಲೈಬಿಂಗ್‌ ಮತ್ತು ರ್ಯಾಪ್ಲಿನ್‌ಗಳನ್ನು ಪ್ರವಾಸಿಗರ ಮನರಂಜನೆಗಾಗಿ ಆಯೋಜಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next