ಕನ್ನಡದಲ್ಲಿ ಕಲಿಯುಗದ ಕಂಸ ಎಂಬ ಚಿತ್ರವೊಂದು ತಯಾರಾಗುತ್ತಿದೆ. ಕಂಸನ ಪಾತ್ರದಾರಿ ಸಂದೀಪ ಪ್ರಥಮ ಪ್ರಯತ್ನ ಮಾಡುತ್ತಿದ್ದಾರೆ. ಇವರ ಸಹೋದರ ದಿಲೀಪ್ ಕುಮಾರ್ ಹಾಗೂ ಸಹೋದರಿ ಶ್ರೀಮತಿ ದೇವಕಿ ಈ ಚಿತ್ರದ ನಿರ್ಮಾಪಕರು. ಇತ್ತೀಚೆಗೆ ಚಿತ್ರದ ಮೋಶನ್ ಪೋಸ್ಟರ್ ರಿಲೀಸ್ ಆಗಿದೆ. ಈ ಮೋಷನ್ ಪೋಸ್ಟರ್ ಅನ್ನು ಸಂಕಲನ ಮಾಡಿಕೊಟ್ಟವರು ರಾಮ್ ಬಾಬು. ತೆಲುಗಿನ ಸೂಪರ್ ಹಿಟ್ ಸಿನಿಮಗಳಾದ ಬಾಹುಬಲಿ ಹಾಗೂ ಸೆ„ರ ನರಸಿಂಹ ರೆಡ್ಡಿ ಸಿನಿಮಾಗಳಿಗೆ ಸಂಕಲನ ಮಾಡಿದವರು.
ಕಲಿಯುಗ ಕಂಸ ಸೆಟೇrರಲು ಎಲ್ಲ ತಯಾರಿ ನಡೆದಿದೆ. ಒಬ್ಬ ರಗಡ್ ಆದ ರೌಡಿ ಕಥಾ ವಸ್ತು ಇಲ್ಲಿದೆ. ಇಲ್ಲಿ ಮಚ್ಚು ಲಾಂಗುಗಳು ಇರುವುದಿಲ್ಲ. ಇವನೊಬ್ಬ ಸಮಾಜದಲ್ಲಿ ಅತಿ ಕಿರಿಯ ವಯಸ್ಸಿನ ಕ್ರಿಮಿನಲ್. ಇದಕ್ಕೆ ಗುಜರಾತ್ ಅಲ್ಲಿ ನಡೆದ ಒಂದು ಘಟನೆಯನ್ನು ಇಟ್ಟುಕೊಂಡು ಚಿತ್ರಕತೆ ಸಿದ್ಧಪಡಿಸಲಾಗಿದೆ. ತನ್ನ ಬುದ್ಧಿ ಶಕ್ತಿಯಿಂದ ಕಂಸ ಆಗಿ ಅವತಾರ ತಾಳುತ್ತಾನೆ. ಜುಲೆ„ ತಿಂಗಳಿನಲ್ಲಿ ಈ ಕಲಿಯುಗದ ಕಂಸ ಚಿತ್ರೀಕರಣ ಶುರು ಮಾಡಲಿದ್ದಾರೆ ನಿರ್ದೇಶಕ ಬಿ ವಿ ಎಚ್ ಪ್ರಸಾದ್.
ಇದು ನಿರ್ದೇಶಕರ ಪ್ರಥಮ ಪ್ರಯತ್ನ. ಚಿತ್ರ ನಿರ್ದೇಶನದ ಬಗ್ಗೆ ಹಲವಾರು ವಿಚಾರಗಳ ಬಗ್ಗೆ ತಿಳವಳಿಕೆ ಬೆಳಸಿಕೊಂಡು ನಿರ್ದೇಶನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನವ ಯುವಕ ಸಂದೀಪ ಮೊದಲ ಚಿತ್ರದಲ್ಲಿ ಮಾಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಮುಂಬೆ„ ಅಲ್ಲಿ ಅಭಿನಯದಲ್ಲಿ ತರೆಬೇತಿ ಪಡೆದು, ರಂಗಭೂಮಿಯ ಕೆಲವು ವ್ಯಕ್ತಿಗಳಿಂದ ಸಲಹೆ ಪಡೆದು, ಸಾಹಸ ಹಾಗೂ ನೃತ್ಯದಲ್ಲೂ ಅನುಭವ ಪಡೆದುಕೊಂಡಿದ್ದಾರೆ.
ಈ ಚಿತ್ರದ ಕಥಾ ನಾಯಕಿ ಶ್ರೇಯ ಶರ್ಮ ಈ ಹಿಂದೆ 2007 ರಲ್ಲಿ ಬೇಬಿ ಶ್ರೇಯ ಆಗಿ ರಮೇಶ್ ಅರವಿಂದ್ ಅಭಿನಯದ ಸೌಂದರ್ಯ ಚಿತ್ರಕ್ಕೆ ಬಾಲ ನಟಿ ಆಗಿದ್ದವರು. ತಮಿಳಿನ ಜನಪ್ರಿಯ ನಟ ಆರ್ಯ ಈಗಾಗಲೇ ರಾಜ ರಥ ಕನ್ನಡ ಸಿನಿಮಾದಲ್ಲಿ ಅಭಿನಯ ಮಾಡಿದವರು ಮತ್ತೆ ಕನ್ನಡಕ್ಕೆ ಒಂದು ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಲಿ ದ್ದಾರೆ. ಶರತ್ ಲೋಹಿತಾಶ್ವ, ಹರೀಶ್ ರೈ ಹಾಗೂ ಇನ್ನಿತರರು ಪೋಷಕ ಪಾತ್ರಗಳಲ್ಲಿ ಅಭಿನಯ ಮಾಡಲಿದ್ದಾರೆ. ಲೋಕಿ ಹಾಡುಗಳಿಗೆ ರಾಗ ಸಂಯೋಜನೆ ಮಾಡಲಿದ್ದಾರೆ. ಪ್ರಖ್ಯಾತ್ ನಾರಾಯಣ್ ಈ ಚಿತ್ರಕ್ಕೆ ಛಾಯಾಗ್ರಹಣ ಒದಗಿಸಲಿದ್ದಾರೆ.