Advertisement
ದಾವಣಗೆರೆ ಉತ್ತರ, ದಕ್ಷಿಣ ಒಳಗೊಂಡಂತೆ ಎಂಟು ಕ್ಷೇತ್ರದಲ್ಲಿ 8,24,774 ಪುರುಷರು, 8,08,058 ಮಹಿಳೆಯರು, 117 ಇತರರು ಸೇರಿ 16,32,949 ಮತದಾರರಿದ್ದಾರೆ. ಮಹಿಳಾ ಸಿಬ್ಬಂದಿಯೇ ನಿರ್ವಹಿಸುವ 15 ಸಖೀ ಪಿಂಕ್ ಮತಗಟ್ಟೆ ಸೇರಿ 1,946 ಮತಗಟ್ಟೆ ಸ್ಥಾಪಿಸಲಾಗಿದೆ.
ಭಾವಚಿತ್ರ ಇರುವ ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಒಳಗೊಂಡಂತೆ ಆಯೋಗ ಸೂಚಿಸಿರುವ 12 ದಾಖಲೆಯಲ್ಲಿ ಯಾವುದಾದರೂ ಒಂದನ್ನು ತೋರಿಸಿ ಮತದಾನ ಮಾಡಬಹುದು ಎಂದು ತಿಳಿಸಿದರು.
Related Articles
Advertisement
ಚುನಾವಣೆ ನಡೆಯುವ 48 ಗಂಟೆ ಮುನ್ನ ಜಾರಿ ಮಾಡಲಾಗಿರುವ ನಿಷೇಧಾಜ್ಞೆ ಮೇ 13ರ ಸಂಜೆ 6 ರವರೆಗೆ ಜಾರಿಯಲ್ಲಿರುತ್ತದೆ. ಕ್ಷೇತ್ರಕ್ಕೆ ಸಂಬಂಧವೇ ಇಲ್ಲದವರು ಮತಕ್ಷೇತ್ರ ವ್ಯಾಪ್ತಿಯಲ್ಲಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಮತಗಟ್ಟೆ ಏಜೆಂಟರು ಮತಗಟ್ಟೆಯ 200 ಮೀಟರ್ ಹೊರಗೆ ವೋಟರ್ ಸ್ಲಿಪ್ ನೀಡಬಹುದು. ಆದರೆ, ಯಾವ ಕಾರಣಕ್ಕೂ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿದರು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ವಿನಾಯಕ ನಗರ ಎ ಬ್ಲಾಕ್ ಇತರೆಡೆ ಮತದಾನದ ಬಹಿಷ್ಕಾರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮತದಾನ ಬಹಿಷ್ಕಾರದಿಂದ ಅನುಕೂಲ ಆಗುವುದಿಲ್ಲ. ತಮಗೆ ಯಾರುಸೂಕ್ತವೋ ಅವರಿಗೆ ಮತ ನೀಡಬೇಕು. ಇಲ್ಲದೇ ಹೋದಲ್ಲಿ ನೋಟಾ ಚಲಾಯಿಸಬಹುದು. ಆದರೆ, ಸಂಪೂರ್ಣವಾಗಿ ಮತದಾನದಿಂದಲೇ ದೂರ ಉಳಿಯುವುದು ಒಳ್ಳೆಯದಲ್ಲ ಎಂದು ಪ್ರತಿಕ್ರಿಯಿಸಿದರು. ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್, ಚುನಾವಣಾ ತಹಶೀಲ್ದಾರ್ ಜಿ. ಸಂತೋಷ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು. ಮೊಬೈಲ್ ತರಲೇಬೇಡಿ
ಮತದಾನದ ದಿನದಂದು ಯಾವುದೇ ಕಾರಣಕ್ಕೂ ಮತಗಟ್ಟೆಯ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಲಿಕ್ಕೆ ಅವಕಾಶವೇ ಇಲ್ಲ. ಮತಗಟ್ಟೆಯ ಹೊರಗೆ ಇಡಬೇಕು. ಮೊಬೈಲ್ ತರದೇ ಇರುವುದೇ ಸೂಕ್ತ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದರು. ಮೂವರು ಅಮಾನತು
ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ 273 ವಿದ್ಯುನ್ಮಾನ ಮತಯಂತ್ರಗಳ ಪಿಂಕ್ ಪಟ್ಟಿ ತೆಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಚುನಾವಣಾಧಿಕಾರಿ ಅಮಾನತು ಆಗಿದ್ದಾರೆ. ಚುನಾವಣಾಧಿಕಾರಿ ವರ್ಗಾವಣೆ ಆಗಿದ್ದಾರೆ. ಇತರೆ ಕರ್ತವ್ಯ ಲೋಪಕ್ಕೆ ಇತರೆ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು. 373 ಪ್ರಕರಣ ದಾಖಲು
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 373 ಪ್ರಕರಣ ದಾಖಲಾಗಿವೆ. ಫ್ಲೆಯಿಂಗ್ ಸ್ಕಾ Ìಡ್ 19, ಎಸ್‌ಐಟಿ 1. ಅಬಕಾರಿ ಮತ್ತು ಪೊಲೀಸರು 353 ಪ್ರಕರಣ ದಾಖಲಿಸಿದ್ದಾರೆ. ಚುನಾವಣಾ ಪ್ರಚಾರ ಕಾರ್ಯಕ್ಕೆ ಮಕ್ಕಳನ್ನು ಬಳಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷ, ಅಭ್ಯರ್ಥಿಗಳ ವಿರುದ್ಧ 9 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 56.4 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. 8,39,510 ರೂ. ಖಜಾನೆಯಲ್ಲಿರಿಸಲಾಗಿದೆ. ಅಬಕಾರಿ ಇಲಾಖೆ ಸಿಬ್ಬಂದಿ 63.37 ಲಕ್ಷ ಮೌಲ್ಯದ 15,918 ಲೀಟರ್, ಪೊಲೀಸರು 2.10 ಲಕ್ಷ ಮೌಲ್ಯದ 694 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ ಎಂದು ರಮೇಶ್ ತಿಳಿಸಿದರು 590 ಸೂಕ್ಷ್ಮ ಮತಗಟ್ಟೆ
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ 1,946 ಮತಗಟ್ಟೆಯಲ್ಲಿ 590 ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಪೊಲೀಸ್, ಗೃಹರಕ್ಷಕ ದಳ, ಅರೆ ಸೇನಾಪಡೆ ಬಳಸಿಕೊಂಡು ಎಲ್ಲ ಕಡೆ ಜನರು ನಿರ್ಭೀತಿಯಿಂದ ಮತದಾನ ಮಾಡುವಂತಹ ವಾತಾವರಣ ನಿರ್ಮಿಸಲಾಗುವುದು. ಒಟ್ಟಾರೆಯಾಗಿ ಶಾಂತಿಯುತ ಮತದಾನ ಪ್ರಕ್ರಿಯೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಬಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಎರಡು ಪಕ್ಷಗಳ ಕಡೆಯಿಂದ ದೂರು ದಾಖಲಾಗಿದೆ. ಕೆಲವರ ವಿರುದ್ಧ ಸೆಕ್ಷನ್ 107 ಪ್ರಕರಣ ದಾಖಲಿಸಲಾಗಿದೆ. 154 ಸೆಕ್ಷನ್ ಅನ್ವಯ ಹೇಳಿಕೆ ಪಡೆದ ನಂತರ ಮುಂದಿನ
ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ತಿಳಿಸಿದರು.