ಬೆಂಗಳೂರು: ಮುಂದೂಡಿಕೆಯಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಜೂ.18ರಂದು ನಡೆಯಲಿದ್ದು, ಸಿದ್ಧತೆ ಪೂರ್ಣಗೊಳಿಸುವಂತೆ ಪಿಯು ಇಲಾಖೆ ಸೂಚನೆ ನೀಡಿದೆ.
ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಜೂ.15ರಿಂದ ಕಾಲೇಜಿನಲ್ಲಿ ಹಾಜರಿರುವಂತೆ ಅದು ಸೂಚಿಸಿದೆ.
ನಿಯೋಜಿತ ಮುಖ್ಯ ಅಧೀಕ್ಷಕರು, ಸಹಮುಖ್ಯ ಅಧೀಕ್ಷಕರು, ಕೊಠಡಿ ಮೇಲ್ವಿ ಚಾರಕರು ಕರ್ತವ್ಯ ನಿರ್ವಹಿಸಬೇಕು. ಉಳಿದ ಎಲ್ಲ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಪ್ರತೀ ವಿದ್ಯಾರ್ಥಿಗೆ ದೂರವಾಣಿ ಕರೆ ಮೂಲಕ ಸಾರಿಗೆ ವ್ಯವಸ್ಥೆ ಸಹಿತ ಎಲ್ಲ ಸುರಕ್ಷಾ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಯಾವ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತರಾಗಬಾರದು ಎಂದು ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.
ಮೌಲ್ಯಮಾಪನದಲ್ಲಿರುವ ಉಪನ್ಯಾಸಕರೂ ಜೂ. 14ರಂದು ಬಿಡುಗಡೆ ಹೊಂದಿ, ನಿಯೋಜಿತ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಬೇಕು ಬಳಿಕ ಜೂ. 19ರಿಂದ ಮೌಲ್ಯಮಾಪನಕ್ಕೆ ಹಾಜರಾಗಬೇಕು ಎಂದು ನಿರ್ದೇಶನ ನೀಡಿದೆ.