Advertisement

ಜಿಲ್ಲೆಯಲ್ಲಿ ಡಿಜೆ ಸಂಗೀತ ನಿಷೇಧಕ್ಕೆ ಸಿದ್ಧತೆ

01:13 PM Mar 06, 2017 | Team Udayavani |

ಧಾರವಾಡ: ಅಕ್ರಮ ಜಾಹೀರಾತು ಫಲಕಗಳ ವಿರುದ್ಧ ಸಮರ ಸಾರಿರುವ ಮಹಾನಗರ ಪಾಲಿಕೆ ಇದೀಗ ಹಬ್ಬ ಹರಿದಿನಗಳಲ್ಲಿ ದೈತ್ಯ ಶಬ್ದ ಮಾಡುತ್ತ ಸಾಗುವ ಡಿಜೆ (ಡಿಸ್ಕ್ ಜಾಕೀ) ಸಂಗೀತವನ್ನು ನಿಷೇಧ ಮಾಡುವುದಕ್ಕೆ ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಇನ್ನು ಎರಡು ತಿಂಗಳಲ್ಲಿ ಹುಬ್ಬಳ್ಳಿ- ಧಾರವಾಡದ ಅವಳಿ ನಗರದಲ್ಲಿ ಡಿಜೆ ಸಂಗೀತಕ್ಕೆ ತೆರೆ ಬೀಳಲಿದೆ.

Advertisement

ಶಬ್ದ ಮಾಲಿನ್ಯ ಮತ್ತು ದೇಶಿ ಸಂಸ್ಕೃತಿಯ ಸೊಗಡನ್ನೇನುಂಗಿ ಹಾಕುತ್ತಿರುವ ಡಿಜೆ ಸಂಗೀತಕ್ಕೆ ಶೀಘ್ರ ಬ್ರೇಕ್‌ ಹಾಕಬೇಕು ಎಂದು ನಾಡಿನ ಜಾನಪದ ವಿದ್ವಾಂಸರು ಮತ್ತು ಪರಿಸರವಾದಿಗಳು ಪೊಲೀಸ್‌ ಇಲಾಖೆಗೆ, ಜಿಲ್ಲಾಧಿಕಾರಿಗಳಿಗೆ ಮತ್ತು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಜಾಹೀರಾತು ಫಲಕದ ನಿಷೇಧದ ಜೊತೆ ಜೊತೆಗೆ ಡಿಜೆ ಸಂಗೀತವನ್ನು ನಿಷೇಧ ಮಾಡಲು ತೆರೆ ಮರೆಯಲ್ಲೇಸಿದ್ಧತೆ ಮಾಡಲಾಗುತ್ತಿದೆ. ಹತ್ತು ವರ್ಷಗಳ ಹಿಂದೆ ನಿಧಾನಕ್ಕೆ ಆರಂಭಗೊಂಡ ಡಿಜೆ ಸಂಗೀತ ಇಂದು ಗಣೇಶ ಚತುರ್ಥಿ, ಮೆರವಣಿಗೆ,ಮದುವೆ, ಸಂತೋಷ ಕೂಟಗಳು, ಸಂಭ್ರಮದ ಎಲ್ಲ ಸಂದರ್ಭಗಳನ್ನು ಅವರಿಸಿದೆ. ಅವಳಿ ನಗರದಲ್ಲಿ ಬರೊಬ್ಬರಿ 57ಕ್ಕೂ ಹೆಚ್ಚು ಡಿಜೆ ಸಂಗೀತ ವ್ಯವಸ್ಥಾಪಕರ ಅಂಗಡಿಗಳಿವೆ.

ವರೆಲ್ಲರೂ ಲಕ್ಷಾಂತರ ರೂ. ಹೂಡಿಕೆ  ಮಾಡಿದ್ದು, ಅಷ್ಟೇ ಲಾಭವನ್ನೂ ಪಡೆದುಕೊಂಡಿದ್ದಾರೆ. ಒಂದೊಂದು ಕಾರ್ಯಕ್ರಮಕ್ಕೆ 50 ಸಾವಿರದಿಂದ 1 ಲಕ್ಷ ರೂ. ಪಡೆಯುವ ದೈತ್ಯ ಡಿಜೆಗಳನ್ನು ಈ ಅಂಗಡಿಗಳು ನಡೆಸುತ್ತಿವೆ. ಮುಂಬೈ, ಬೆಳಗಾವಿಯಿಂದ ಅಗತ್ಯ ಬೀಳುವ ಡಿಜೆ ಸೌಂಡ್‌ಬಾಕ್ಸ್‌ಗಳನ್ನು ಬಾಡಿಗೆಗೆ ತಂದು ವ್ಯವಹಾರ ಮಾಡಲಾಗುತ್ತಿದೆ.

ದೇಶಿ ಕಲೆಗೆ ಏಟು: ಡಿಜೆ ಸಂಗೀತವನ್ನು ನಿಷೇಧ ಮಾಡುವುದಕ್ಕೆ ನೀಡಿರುವ ಪ್ರಮುಖ ಕಾರಣ, ಅದು ದೇಶಿ ಜಾನಪದ ಮತ್ತು ಸಾಂಸ್ಕೃತಿಕ ಕಲೆಗಳನ್ನೇ ನುಂಗಿ ಹಾಕುತ್ತಿರುವುದು. ಈ ಹಿಂದೆ ಗಣೇಶ ಚತುರ್ಥಿ, ಹಬ್ಬ ಹರಿದಿನ, ಸಂಭ್ರಮದ ಮೆರವಣಿಗೆಗಳಲ್ಲಿ ಡೊಳ್ಳು ಕುಣಿತ, ಜಗ್ಗಲಿಗೆ, ಕರಡಿಮಜಲು ಮುಂತಾದ ದೇಶಿ ಜಾನಪದ ವಾದ್ಯಮೇಳಗಳನ್ನು ಜನ ಬಳಸುತ್ತಿದ್ದರು.

Advertisement

ಕೊಂಚ ಆಧುನಿಕವಾದರೂ, ಸುಶ್ರಾವ್ಯವಾಗಿ ಜನರ ಗಮನ ಸೆಳೆಯುತ್ತಿದ್ದ ಬ್ಯಾಂಡ್‌ ಸೆಟ್‌ಗಳು ಬಳಕೆಯಾಗುತ್ತಿವು.ಈಚೆಗೆ ಹಳ್ಳಿಗಳನ್ನೂ ಡಿಜೆ ತಲುಪಿದ್ದು, ಯುವಕರು ಇದದಿಂದ ಹೆಚ್ಚು ಆಕರ್ಷಿತರಾಗಿ ಹಳ್ಳಿಯ ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ಮೂಲೆಗೆ ಇಟ್ಟಿದ್ದಾರೆ.

ಅಶ್ಲೀಲ ಹಾಡುಗಳನ್ನು ಡಿಜೆ ಸಂಗೀತದಲ್ಲಿ ಅಳವಡಿಸಿರುವುದು ಹಳ್ಳಿಯ ಮುಗ್ಧ ಜನರಿಗೆ ತೀವ್ರ ಇರುಸು ಮುರುಸು ಉಂಟಾಗುತ್ತಿದೆ. ಹೀಗಾಗಿ ಡಿಜೆ ನಿಲ್ಲಿಸಬೇಕು ಎನ್ನುತ್ತಿವೆ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ. 

ಶಬ್ದ ಮಾಲಿನ್ಯ: ಇನ್ನು ಡಿಜೆ ಸಂಗೀತದಿಂದ ಶಬ್ದ ಮಾಲಿನ್ಯವಾಗುತ್ತಿರುವುದು ಬಹಿರಂಗ ಸತ್ಯ. ಜನರ ಕಿವಿ ಗಡಚಿಕ್ಕುವಂತೆ ಡಿಜೆ ಸಂಗೀತದ ಮೆರವಣಿಗೆಗಳು ನಗರ ಮತ್ತು ಹಳ್ಳಿಗಳಲ್ಲಿ ಸಂಚರಿಸುತ್ತಿವೆ. ಇದನ್ನು ಪರಿಸರವಾದಿಗಳು ತೀವ್ರವಾಗಿ ವಿರೋಧಿಸುತ್ತಿದ್ದು, ಕೂಡಲೇ ಡಿಜೆ ಸಂಗೀತವನ್ನು ನಿಷೇಧಿಸಿ ಎಂದು ಹೇಳುತ್ತಿದ್ದಾರೆ. 

* ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next