Advertisement

6 ಸಾವಿರ ಕೋವಿಡ್ ಬೆಡ್‌ಗೆ ಸಿದ್ಧತೆ

12:45 PM Jun 30, 2020 | Suhan S |

ಧಾರವಾಡ: ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಬೆಡ್‌ಗಳನ್ನು ಮೀಸಲಿಡಲು ಸೂಚಿಸಲಾಗಿದೆ. ಇದಲ್ಲದೇ ಜಿಲ್ಲೆಯ ಆಸ್ಪತ್ರೆ ಹಾಗೂ ಹೋಟೆಲ್‌ ಸೇರಿ 95 ಕೇಂದ್ರಗಳನ್ನು ಗುರುತಿಸಿ 6 ಸಾವಿರ ಬೆಡ್‌ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಇದಲ್ಲದೇ ಸೋಂಕು ಹತೋಟಿಗೆ ತರುವ ದೃಷ್ಟಿಯಿಂದ ಜು. 5ರಿಂದ ಪ್ರತಿ ರವಿವಾರ ಲಾಕ್‌ಡೌನ್‌, ಶನಿವಾರ ಎಲ್ಲ ಸರ್ಕಾರಿ ಕಚೇರಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸೀಲ್‌ಡೌನ್‌ ಆಗಿರುವ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸೋಂಕು ನಿವಾರಣೆಗಾಗಿ ಖಾಸಗಿ ಆಸ್ಪತ್ರೆಯವರ ಸಹಕಾರ ಬೇಕಾಗಿದೆ. ಧಾರವಾಡದಲ್ಲಿ ಖಾಸಗಿ ಆಸ್ಪತ್ರೆಯವರೊಂದಿಗೆ ಸಮಾಲೋಚನೆ ನಡೆಸಿದ್ದು, ಅಗತ್ಯ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಸರ್ಕಾರವೇ ಎಲ್ಲವನ್ನೂ ಮಾಡಲಿಕ್ಕಾಗದು. ಜನಸಾಮಾನ್ಯರ ಜವಾಬ್ದಾರಿ ಅರಿತು ನಡೆಯಬೇಕು. ಸಾಮಾಜಿಕ ಅಂತರ ಕಾಯುವಿಕೆ, ಸ್ಯಾನಿಟೈಜರ್‌ ಬಳಕೆ ಹಾಗೂ ಮಾಸ್ಕ್ ಧಾರಣೆ ಮೂಲಕ ಸಾರ್ವಜನಿಕರೇ ಕೊರೊನಾ ನಿಯಂತ್ರಿಸಬೇಕಿದೆ ಎಂದರು.

ಸಮುದಾಯಕ್ಕೆ ಹಬ್ಬಿಲ್ಲ: ಕೋವಿಡ್ ಸೋಂಕು ಸಮುದಾಯಕ್ಕೆ ಹಬ್ಬುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಮೊರಬ ಗ್ರಾಮದ ಏರಿಯಾದಲ್ಲಿ ಮಾತ್ರ ಹೀಗಾಗಿದೆ. ಬೇರೆಲ್ಲೂ ಆಗಿಲ್ಲ. ಒಂದು ಊರಿನಲ್ಲಿ ಹೀಗೆ ಹಬ್ಬಿದೆ ಎಂದ ಮಾತ್ರಕ್ಕೆ ಇಡೀ ಸಮುದಾಯಕ್ಕೆ ಹಬ್ಬಿದಂತೆಯೇ? ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಕೋವಿಡ್ ಸಮುದಾಯಕ್ಕೆ ಹಬ್ಬಿಲ್ಲ. ಆ ಒಂದು ಏರಿಯಾದಲ್ಲಿ ಮಾತ್ರ ಹಬ್ಬಿದೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next