ಲಕ್ನೋ/ಪಣಜಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಅಯೋಧ್ಯೆ, ಗೋರಖ್‌ಪುರ ಅಥವಾ ಮಥುರಾದಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಗೋರಖ್‌ಪುರವು ಅವರ ಸಾಂಪ್ರದಾಯಿಕ ಕ್ಷೇತ್ರವಾಗಿದೆ.
ಇನ್ನು, ಪ್ರಧಾನಿ ಮೋದಿ ಅವರು ಹೇಗೆ ವಾರಾಣಸಿಯೊಂದಿಗೆ ನಂಟು ಹೊಂದಿದ್ದಾರೋ, ಅದೇ ರೀತಿ ಯೋಗಿ ಅಯೋಧ್ಯೆಯೊಂದಿಗೆ ನಂಟು ಹೊಂದಿದ್ದಾರೆ. ಅಲ್ಲದೇ ಈಗ ರಾಮಮಂದಿರ ನಿರ್ಮಾಣ ಕಾರ್ಯವೂ ಆರಂಭವಾಗಿರುವ ಕಾರಣ, ಅಯೋಧ್ಯೆಯಲ್ಲಿ ಸ್ಪರ್ಧೆ ಅವರಿಗೆ ಹೆಚ್ಚಿನ ಲಾಭ ತಂದುಕೊಡಬಹುದು ಎಂದು ಅಂದಾಜಿಸಲಾಗಿದೆ.
ಇನ್ನುಳಿದಿರುವ ಆಯ್ಕೆಯೆಂದರೆ ಮಥುರಾ. ಇತ್ತೀಚೆಗೆ ಅವರು ಇಲ್ಲಿಂದಲೇ ತಮ್ಮ ಜನವಿಶ್ವಾಸ ಯಾತ್ರೆಗೆ ಚಾಲನೆ ನೀಡಿದ್ದು, ಇಲ್ಲಿಂದ ಸ್ಪರ್ಧೆ ಬಯಸುವ ಸಾಧ್ಯತೆಯೂ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಪಾಕ್ ಸೈನಿಕನ ಹೊಡೆದುರುಳಿಸಿದ ಸೇನೆ
ಈ ಕುರಿತು ಪ್ರತಿಕ್ರಿಯಿಸಿರುವ ಯೋಗಿ, ಎಲ್ಲಿಂದ ಕಣಕ್ಕಿಳಿಯಬೇಕು ಎನ್ನುವುದನ್ನು ಪಕ್ಷ ನಿರ್ಧರಿಸುತ್ತದೆ ಎಂದಿದ್ದಾರೆ.
20 ಲಕ್ಷ ರೂ. ಸಾಲ: ಗೋವಾ ಅಸೆಂಬ್ಲಿ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಿದರೆ, 18ರಿಂದ 45ರ ವಯೋಮಾನದ ಯುವಕರಿಗೆ ಶೇ.4ರ ಬಡ್ಡಿ ದರದಲ್ಲಿ ತಲಾ 20 ಲಕ್ಷ ರೂ. ಸಾಲ ನೀಡಲಿದೆ ಎಂದು ಟಿಎಂಸಿ ಘೋಷಿಸಿದೆ.