Advertisement

ಲೋಕ ಸಮರದ ಮತ ಎಣಿಕೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ದೀಪಾ

09:32 AM May 19, 2019 | Suhan S |

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಮೇ 23 ರಂದು ಧಾರವಾಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅದಕ್ಕಾಗಿ ಜಿಲ್ಲಾ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

Advertisement

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂದು ಬೆಳಗ್ಗೆ 8:00 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ. ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ಕಾರ್ಯ ಕೈಗೊಳ್ಳಲಾಗುವುದು. ಪ್ರತಿ ಕ್ಷೇತ್ರಕ್ಕೂ ತಲಾ ಒಂದೊಂದು ಕೊಠಡಿಗಳಿದ್ದು, ಪ್ರತಿ ಕೊಠಡಿಗೂ 14 ಟೇಬಲ್ಗಳ ನಿಯೋಜಿಸಲಾಗಿದೆ. ಪ್ರತಿ ಟೇಬಲ್ಗೂ ಪ್ರತ್ಯೇಕ ಅಧಿಕಾರಿಗಳ ತಂಡವಿದ್ದು, ಇವರು ಮತ ಎಣಿಕೆ ಕಾರ್ಯ ನೋಡಿಕೊಳ್ಳಲಿದ್ದಾರೆ. ಆ ದಿನದ ಮತ ಎಣಿಕೆಗೆ ಒಟ್ಟು 1250 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು,ಅವರೆಲ್ಲರಿಗೂ ಈಗಾಗಲೇ ಅಗತ್ಯ ತರಬೇತಿ ನೀಡಿ ಆ ದಿನ ಕರ್ತವ್ಯಕ್ಕೆ ತಪ್ಪದೇ ಹಾಜರಾಗುವಂತೆ ಸೂಚಿಸಲಾಗಿದೆ ಎಂದರು.

ಮೊಬೈಲ್ ಫೋನ್‌ಗಿಲ್ಲ ಅವಕಾಶ: ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಈ ಬಾರಿ ಮತ ಎಣಿಕೆ ಕೇಂದ್ರದಲ್ಲಿ ಯಾರಿಗೂ ಮೊಬೈಲ್ ಫೋನ್‌ಗಳಿಗೆ ಅವಕಾಶ ನೀಡಿಲ್ಲ. ಮತ ಎಣಿಕೆ ಕಾರ್ಯ ನಡೆಯುವುದನ್ನು ತಮ್ಮ ಮೊಬೈಲ್ಗಳಲ್ಲಿ ಯಾರೇ ಚಿತ್ರೀಕರಿಸಿಕೊಳ್ಳುವುದು ನಿಷೇಧಿಸಲಾಗಿದೆ. ಇದು ಎಲ್ಲಾ ರಾಜಕಾರಣಿಗಳು, ಪಕ್ಷಗಳ ಕಾರ್ಯಕರ್ತರು, ಅಧಿಕಾರಿಗಳಿಗೂ ಅನ್ವಯವಾಗಲಿದೆ. ಆದರೆ ಮಾಧ್ಯಮದವರಿಗೆ ಮಾತ್ರ ವ್ಯವಸ್ಥೆ ಮಾಡಿರುವ ಮಾಧ್ಯಮ ಕೇಂದ್ರದಲ್ಲಿ ಮೊಬೈಲ್ ಪೊನ್‌ಗಳ ಬಳಕೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದರು.

2 ಬೂತ್‌ಗಳದ್ದು ನಂತರ ಎಣಿಕೆ: ಧಾರವಾಡ ಲೋಕಸಭಾ ಕ್ಷೇತ್ರದ ನಂ.198 ಮತ್ತು 249 ನೇ ಮತಗಟ್ಟೆಗಳಲ್ಲಿನ ಮತ ಎಣಿಕೆ ಕಾರ್ಯವನ್ನು ಕೊನೆಗೆ ಕೈಗೊಳ್ಳಲಾಗುತ್ತಿದೆ. ಈ ಕೇಂದ್ರಗಳಲ್ಲಿ ಮತದಾನ ಅಚ್ಚುಕಟ್ಟಾಗಿ ನಡೆದಿದೆ. ಆದರೆ ವಿವಿಪ್ಯಾಟ್‌ನಲ್ಲಿನ ಮತಗಳ ಕುರಿತು ಕೇಂದ್ರದ ಚುನಾವಣಾಧಿಕಾರಿಗಳು ಅಪೂರ್ಣ ಮಾಹಿತಿ ನೀಡಿದ್ದರು. ಇದನ್ನು ಚುನಾವಣೆ ದಿನದಂತೆ ಆಯೋಗದ ಗಮನಕ್ಕೆ ತರಲಾಗಿದೆ. ಅಷ್ಟೇಯಲ್ಲ ಅಭ್ಯರ್ಥಿಗಳ ಗಮನಕ್ಕೂ ತರಲಾಗಿದ್ದು, ಈ ಕೇಂದ್ರದಲ್ಲಿನ ಮತಗಳನ್ನು ಎಲ್ಲಾ ಸುತ್ತಿನ ಮತಗಳು ಮುಗಿದ ನಂತರ ಕೊನೆಯಲ್ಲಿ ಎಣಿಕೆ ಮಾಡಲಾಗುವುದು ಎಂದು ಡಿಸಿ ಹೇಳಿದರು.

ವಿವಿಪ್ಯಾಟ್ ಕೊನೆಗೆ ಗಣನೆಗೆ: ಇನ್ನು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿನ ಐದು ಮತಗಟ್ಟೆಗಳಲ್ಲಿನ ಮತದಾನ ವಿವರವನ್ನು ವಿವಿಪ್ಯಾಟ್‌ನಲ್ಲಿ ಪರೀಕ್ಷಿಸಲು ಚುನಾವಣಾ ಆಯೋಗ ಸೂಚಿಸಿದೆ. ಅದರನ್ವಯ ಕ್ಷೇತ್ರದ ಎಲ್ಲ ಮತಗಟ್ಟೆಗಳ ಹೆಸರು ಬರೆದು,ಅಭ್ಯರ್ಥಿಗಳು ಅಥವಾ ಪಕ್ಷಗಳ ಏಜೆಂಟರ ಎದುರಿನಲ್ಲಿಯೇ ಆ ಪೈಕಿ ಐದು ಮತಕೇಂದ್ರಗಳನ್ನು ಲಾಟರಿ ಮೂಲಕ ಪಡೆದು ಅದರ ವಿವಿಪ್ಯಾಟ್ ಮತಗಳನ್ನು ಎಣಿಕೆ ಮಾಡಲಾಗುವುದು ಎಂದು ಡಿಸಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next