Advertisement

18+ ಮಂದಿಗೆ ಲಸಿಕೆ ನೀಡಲು ಸಿದ್ಧತೆ ಕೈಗೊಳ್ಳಿ

02:38 PM Apr 22, 2021 | Team Udayavani |

ಚಾಮರಾಜನಗರ: ಮೇ 1 ರಿಂದ 18 ವರ್ಷತುಂಬಿದ ಎಲ್ಲರಿಗೂ ಲಸಿಕೆ ಲಭ್ಯವಾಗಲಿದೆ.ಇದಕ್ಕಾಗಿ ವ್ಯಾಪಕವಾದ ಸಿದ್ಧತೆಯನ್ನುಈಗಿನಿಂದಲೇ ಮಾಡಿಕೊಳ್ಳಬೇಕು ಎಂದುಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ಕುಮಾರ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಬುಧವಾರ ಕೋವಿಡ್‌ ನಿಯಂತ್ರಣ ಕುರಿತುಹಿರಿಯ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇಆರಂಭಿಸಿರುವ ಲಸಿಕಾ ಅಭಿಯಾನದಪ್ರಯೋಜನವನ್ನು ಹಾಡಿ ಪೋಡುಗಳಗಿರಿಜನರು ಪಡೆದುಕೊಳ್ಳಲು ಆಯಾಸಮುದಾಯಗಳ ಮುಖಂಡರ ಸಹಕಾರಪಡೆದು ಉತ್ತೇಜನ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಸೋಂಕು ಹರಡದಂತೆಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು. ಕೋವಿಡ್‌ ವಿರುದ್ಧಸಮರದಲ್ಲಿ ಗೆಲುವು ಸಾಧಿಸಲು ಗ್ರಾಪಂಯಿಂದಹಿಡಿದು ಎಲ್ಲಾ ಹಂತದ ಜನಪ್ರತಿನಿಧಿಗಳು,ಅಧಿಕಾರಿಗಳು ಒಟ್ಟಾಗಿ ಶ್ರಮಿಸೋಣ ಎಂದರು.ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳುಲಭ್ಯವಾಗಬೇಕು.

ಖಾಸಗಿ ಆಸ್ಪತ್ರೆಗಳಲ್ಲೂಹಾಸಿಗೆ ಕಾಯ್ದಿರಿಸಬೇಕು. ಆಮ್ಲಜನಕಪೂರೈಕೆಯಲ್ಲಿ ವ್ಯತ್ಯಯವಾಗದಂತೆ ದಾಸ್ತಾನುಮಾಡಿಕೊಳ್ಳಬೇಕು. ಯಾವುದೇ ದೂರುಗಳಿಗೆಅವಕಾಶವಾಗದಂತೆ ಔಷದೋಪಚಾರಗಳುಸೋಂಕಿತರಿಗೆ ದೊರೆಯುವಂತೆನಿಗಾವಹಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಶಾಸಕ ಆರ್‌.ನರೇಂದ್ರ, ಹೋಂ ಐಸೋಲೇಷನ್‌ ಆಯ್ಕೆಮಾಡಿಕೊಳ್ಳುವವರಿಗೆ ಸೂಕ್ತ ಮಾರ್ಗದರ್ಶನನೀಡಬೇಕು ಎಂದರು.ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿಮಾತನಾಡಿ, ಹಾಡಿಗಳಲ್ಲಿರುವ ಆಶ್ರಮಶಾಲೆಗಳಲ್ಲಿ ಲಸಿಕಾ ಕೇಂದ್ರಕ್ಕೆ ವ್ಯವಸ್ಥೆ ಕಲ್ಪಿಸಿಆಯಾ ಭಾಗದಲ್ಲೇ ಲಸಿಕೆ ಪಡೆಯಲು ಅರಣ್ಯವಾಸಿಗಳು, ಗಿರಿಜನರಿಗೆ ಅನುಕೂಲಮಾಡಿಕೊಡಬೇಕೆಂದರು.

Advertisement

ಕೃಷಿಗೆ ತೊಂದರೆಯಾಗದಂತೆ ರಸಗೊಬ್ಬರ,ಬಿತ್ತನೆ ಬೀಜ ಒದಗಿಸುವ ಕಾರ್ಯವನ್ನು ಕೃಷಿಇಲಾಖೆ ಮಾಡಬೇಕು. ತೋಟಗಾರಿಕೆ ಇಲಾಖೆಸಹ ರೈತರಿಗೆ ಪೂರಕ ಸೌಲಭ್ಯ ಕಲ್ಪಿಸಬೇಕುಎಂದು ಸಚಿವರು ಸೂಚಿಸಿದರು.ಜಿಪಂ ಅಧ್ಯಕ್ಷೆ ಎಂ. ಅಶ್ವಿ‌ನಿ, ಉಪಾಧ್ಯಕ್ಷೆಶಶಿಕಲಾ, ಎಸ್ಪಿ ಸಾರಾ ಥಾಮಸ್‌, ಜಿಪಂ ಸಿಇಒಬೋಯರ್‌ ನಾರಾಯಣ್‌ ರಾವ್‌, ನಗರಸಭೆಅಧ್ಯಕ್ಷೆ ಆಶಾ ನಟರಾಜು, ಹೆಚ್ಚುವರಿಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ,ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ. ಎಂ.ಸಿ. ರವಿ, ವೈದ್ಯಕೀಯ ವಿಜ್ಞಾನಸಂಸ್ಥೆಯ ಡೀನ್‌ ಡಾ. ಸಂಜೀವ್‌, ಜಿಲ್ಲಾಸರ್ಜನ್‌ ಡಾ.ಶ್ರೀನಿವಾಸ್‌, ಡಾ. ಮಹೇಶ್‌,ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next