Advertisement

ಜಿಲ್ಲಾ ಕೇಂದ್ರಗಳಲ್ಲಿ ಟಿಪ್ಪು ಜಯಂತಿ ಆಯೋಜನೆಗೆ ಸಿದ್ಧತೆ

11:09 AM Nov 08, 2018 | Team Udayavani |

ಮಂಗಳೂರು / ಉಡುಪಿ / ಕುಂದಾಪುರ: ರಾಜ್ಯ ಸರಕಾರ ಆಚರಿಸಲುದ್ದೇಶಿಸಿದ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿಗೆ ಈ ವರ್ಷವೂ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಆದರೂ ಸರಕಾರ ವಿರೋಧದ ನಡುವೆಯೇ ಆಚರಿಸಲು ಸಿದ್ಧತೆ ಮಾಡಿಕೊಂಡಿದೆ. ನ. 10ರಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರಗಳಲ್ಲಿ ಟಿಪ್ಪು ಜಯಂತಿ ನಡೆಯಲಿದೆ. ಈ ಉದ್ದೇಶಿತ ಕಾರ್ಯಕ್ರಮಕ್ಕೆ ಕರಾವಳಿಯ ವಿವಿಧ ಕ್ಷೇತ್ರಗಳ ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ಆಮಂತ್ರಣ ಪತ್ರಿಕೆಗಳಲ್ಲಿ ಶಿಷ್ಟಾಚಾರದ ಪ್ರಕಾರ ಹೆಸರು ಹಾಕದಂತೆ ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ.

Advertisement

ಶಾಸಕರ ವಿರೋಧ ಏಕೆ?
ರಾಜ್ಯ ಸರಕಾರ  ಕೇವಲ ಮತಬ್ಯಾಂಕ್‌ ರಾಜಕಾರಣಕೋಸ್ಕರ ಟಿಪ್ಪು ಸುಲ್ತಾನ್‌ ಸ್ವಾತಂತ್ರÂ ಹೋರಾಟಗಾರನೆಂದು ಸುಳ್ಳು ಹೇಳಿ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮುಂದಾಗಿರುವುದು ದ್ರೋಹವಾಗಿದೆ. ಬಹುಸಂಖ್ಯಾಕ ಹಿಂದೂಗಳ ಹಾಗೂ ಕ್ರೈಸ್ತರ ಮೇಲೆ ಟಿಪ್ಪು ಅಮಾನವೀಯ ದೌರ್ಜನ್ಯ ಎಸಗಿರುವುದನ್ನು ಮರೆತು ರಾಜ್ಯ ಸರಕಾರ ಆತನ ಜಯಂತಿ ಆಚರಣೆಗೆ ಮುಂದಾಗಿದೆ. ಟಿಪ್ಪು ಜಯಂತಿ ಬದಲು ಸರ್ವಧರ್ಮೀಯರನ್ನು ಪ್ರೀತಿಸಿ, ಗೌರವಿಸುತ್ತಿದ್ದ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರಂಥ ವಿಜ್ಞಾನಿಗಳ ಜಯಂತಿಯನ್ನು ರಾಜ್ಯ ಸರಕಾರ ಆಚರಿಸಬಹುದಿತ್ತು ಎಂದು ಶಾಸಕರು ಹೇಳಿದ್ದಾರೆ. 

ಸಂಸದ, ಶಾಸಕರ ಪತ್ರ
ಟಿಪ್ಪು ಜಯಂತಿ ಆಮಂತ್ರಣದಲ್ಲಿ ತಮ್ಮ ಹೆಸರು ಹಾಕದಂತೆ ಈಗಾಗಲೇ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ವೇದವ್ಯಾಸ ಕಾಮತ್‌, ರಘುಪತಿ ಭಟ್‌, ಹರೀಶ್‌ ಪೂಂಜಾ, ಬಿ.ಎಂ. ಸುಕುಮಾರ ಶೆಟ್ಟಿ, ಡಾ| ವೈ. ಭರತ್‌ ಶೆಟ್ಟಿ ಅವರು ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ. ಈ ವಿಚಾರದಲ್ಲಿ ಪ್ರತಿಭಟನೆ ನಡೆಸುವುದಾಗಿಯೂ ಕೆಲವು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಜನತೆಗೆ ಎಸಗಿದ ಅವಮಾನ 
ಉಡುಪಿ:
ರಾಜ್ಯ ಸರಕಾರ ಆಚರಿಸಲು ಹೊರಟ ಟಿಪ್ಪು ಜಯಂತಿ ಜನತೆಗೆ ಮಾಡಿದ ಅವಮಾನ. ಇದನ್ನು ಹಿಂಪಡೆಯದಿದ್ದರೆ ನ.10ರಂದು ಪ್ರತಿಭಟನೆ ನಡೆಸುವುದಾಗಿ ಬಜರಂಗ ದಳದ ಪ್ರಾಂತ ಸಂಚಾಲಕ ಸುನೀಲ್‌ ಕೆ.ಆರ್‌. ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇತಿಹಾಸದಲ್ಲಿ ಟಿಪ್ಪು ಸುಲ್ತಾನ್‌ನಷ್ಟು ಹಿಂದೂಗಳ ಹತ್ಯೆ ಮತ್ತು ದೇವಾ ಲಯಗಳನ್ನು ಕೆಡವಿದ ರಾಜ ಮತ್ತೂಬ್ಬನಿಲ್ಲ. ಹೀಗಿದ್ದರೂ ಅವನನ್ನು ಸ್ವಾತಂತ್ರ್ಯ ಹೋರಾಟಗಾರ ಎಂಬಂತೆ ಬಿಂಬಿಸಲಾಗುತ್ತಿದೆ. ಆತ ಮೈಸೂರಿನ 700 ಮಂಡಯಂ ಅಯ್ಯಂಗಾರಿ ಕುಟುಂಬಗಳನ್ನು ನರಕ ಚತುರ್ದಶಿ ಯಂದು ನರಮೇಧ ಮಾಡಿದ. ಇಂದಿಗೂ ಈ ಕುಟುಂಬಗಳು ನರಕ ಚತುರ್ದಶಿ ಯನ್ನು ಕರಾಳ ದಿನವಾಗಿ ಆಚರಿಸುತ್ತಿವೆ. ಕೇರಳದಲ್ಲಿ ಟಿಪ್ಪುವಿನ ಕ್ರೌರ್ಯ ತಿಳಿಯಲು ತಮ್ಮ ಸುತ್ತಮುತ್ತಲಿನ ದೇಗುಲ ಮತ್ತು ಚರ್ಚ್‌ ಗಳನ್ನು ನೋಡಿದರೆ ಸಾಕು. ಆತನ ಜಯಂತಿ ಆಚರಣೆಗೆ ಜನರಿಂದಲೇ ವಿರೋಧವಿದೆ. ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಸಾಕಷ್ಟು ಧೀಮಂತ ವ್ಯಕ್ತಿಗಳಿದ್ದಾರೆ. ಅವರ ಜಯಂತಿ ಆಚರಿಸಲಿ ಎಂದರು. 

Advertisement

ವಿಶ್ವ ಹಿಂದೂ ಪರಿಷತ್‌ನ ಜಿÇÉಾ ಕಾರ್ಯದರ್ಶಿ ಪ್ರಮೋದ್‌ ಶೆಟ್ಟಿ ಮಂದಾರ್ತಿ, ಜಿÇÉಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಕ್ಕೆಹಳ್ಳಿ,  ಶಂಕರ್‌ ಕೋಟ, ಹಿಂದೂ ಜಾಗರಣ ವೇದಿಕೆ ಜಿÇÉಾಧ್ಯಕ್ಷ ಪ್ರಶಾಂತ್‌ ನಾಯಕ್‌ ಉಪಸ್ಥಿತರಿದ್ದರು.

ನ. 10: ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿ
ಮಂಗಳೂರು/ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಟಿಪ್ಪು ಜಯಂತಿಯನ್ನು ನ. 10ರಂದು ಬೆಳಗ್ಗೆ 10.30ಕ್ಕೆ ದ.ಕ. ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಮತ್ತು ಮಣಿಪಾಲದಲ್ಲಿರುವ ಉಡುಪಿಯ ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. 
ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲೆಯ ಜನಪ್ರನಿಧಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next