Advertisement

ಲೋಕಸಭೆ ಚುನಾವಣೆಗೆ ತಾಲೂಕಾಡಳಿತ ಸಿದ್ಧತೆ

06:36 AM Jan 14, 2019 | Team Udayavani |

ಹೊನ್ನಾಳಿ: ಮುಂಬರುವ ಲೋಕಸಭೆ ಚುನಾವಣೆಗೆ ತಾಲೂಕು ಆಡಳಿತ ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸಿದೆ. ಹೊಸ ಮತದಾರರಾಗಿ ನೋಂದಣಿ ಮಾಡಿಕೊಂಡಿರುವ ತಾಲೂಕಿನ 3914 ಮತದಾರರಿಗೆ ಮತದಾರರ ಗುರುತಿನ ಕಾರ್ಡ್‌ನ್ನು ಜ.25 ರಂದು ನಡೆಯುವ ಮತದಾರರ ದಿನಾಚರಣೆಯಂದು ವಿತರಿಸಲು ಮತಗಟ್ಟೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಜ.25 ರ ನಂತರ ಮತ್ತೂಮ್ಮೆ ನೂತನ ಯುವ ಮತದಾರರ ಸೇರ್ಪಡೆಗೆ ಅವಕಾಶ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

Advertisement

ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಸಂಬಂಧ ಹಲವಾರು ಸಭೆಗಳು ಡಿಸಿ ನೇತೃತ್ವದಲ್ಲಿ ನಡೆದಿವೆ. ಚುನಾವಣೆಗೆ ನೇಮಕಗೊಂಡಿರುವ ಸೆಕ್ಟರ್‌ ಅಧಿಕಾರಿಗಳ ಸಭೆ ಜ. 14ರ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿದೆ.

ಮತಗಟ್ಟೆಗಳ ಕೇಂದ್ರಗಳ ಸ್ಥಿತಿಗತಿ ಕುರಿತು ತಾಲೂಕು ಆಡಳಿತ ಬಿಇಒ ಕಚೇರಿಯಿಂದ ವರದಿ ಕೇಳಿದ್ದು, ಅವಶ್ಯಕತೆ ಇರುವಲ್ಲಿ ದುರಸ್ತಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರ್‌, ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವ ಬದಲು ಈಗಿನಿಂದಲೇ ಸಿದ್ಧತೆ ಮಾಡಿಕೊಂಡರೆ ಆ ಸಂದರ್ಭದಲ್ಲಿ ಸಮಸ್ಯೆಯಾಗುವುದಿಲ್ಲ. ಆದ್ದರಿಂದ ಸಿದ್ಧತೆಗಳನ್ನು ಆರಂಂಭಿಸಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next