ಪಟ್ಟಣದಲ್ಲಿ ಎಐಡಿವೈಒ ವತಿಯಿಂದ ಏರ್ಪಡಿಸಲಾಗಿದ್ದ ನಿರುದ್ಯೋಗ ವಿರೋಧಿ ಯುವಜನ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
Advertisement
ವಿವಿಧ ಇಲಾಖೆಗಳಲ್ಲಿ ಖಾಲಿ ಉದ್ಯೋಗಗಳಿದ್ದರೂ ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಬದಲಿಗೆ ಇದ್ದ ಹುದ್ದೆಗಳನ್ನೇಕಡಿತಗೊಳಿಸಲಾಗುತ್ತಿದೆ. ಪ್ರತಿವರ್ಷವೂ ಉದ್ಯೋಗ ಸೃಷ್ಟಿಸಬೇಕಾದ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಬಂಡವಾಳಶಾಹಿಗಳ ಕುತಂತ್ರಕ್ಕೆ ತಾಳ ಹಾಕುವ ಮೂಲಕ ನಿರುದ್ಯೋಗ ಸಮಸ್ಯೆ ಹೆಚ್ಚಾಗುವಂತೆ ಮಾಡುತ್ತಿವೆ. ಜನರು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದು, ವ್ಯವಸ್ಥೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗುತ್ತಿದೆ. ಉದ್ಯೋಗಕ್ಕಾಗಿ ಬೀದಿ ಬೀದಿ ಅಲೆಯುತ್ತಿರುವ ಯುವಜನರು ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಕೈಗೊಳ್ಳಲು ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಮಹೆಬೂಬ ಪಟೇಲ, ಹಣಮಂತ ಲಾಡ್ಲಾಪುರ, ದೇವು ಹಡಪದ, ಶರಣಬಸು ಲಾಡ್ಲಾಪುರ, ನಾಗರಾಜ ಅಕ್ಕಿ ಹಳಕರ್ಟಿ, ಖದೀರ ಡೋಣಗಾಂವ, ಅಹ್ಮದ್ ಮಿರ್ಜಾ ಸದಸ್ಯರಾಗಿ ಆಯ್ಕೆಯಾದರು.