Advertisement

ಉದ್ಯೋಗ ಮೂಲಭೂತ ಹಕ್ಕಾಗಿ ರೂಪಿಸಿ: ಜಂಬಗಿ

09:40 PM Mar 23, 2019 | |

ವಾಡಿ: ದೇಶದಲ್ಲಿ ನಿರುದ್ಯೋಗ ಸಮಸ್ಯೆಯೇ ಪ್ರಧಾನವಾಗಿದ್ದು, ಎದುರಾಗುತ್ತಿರುವ ಎಲ್ಲ ಸಮಸ್ಯೆಗಳಿಗೆ ಇದುವೇ ಮೂಲ ಕಾರಣವಾಗಿದೆ. ಶಿಕ್ಷಣ ಮೂಲಭೂತ ಹಕ್ಕಾಗಿರುವಂತೆ ಉದ್ಯೋಗವನ್ನು ಸರಕಾರ ಮೂಲಭೂತ ಹಕ್ಕಾಗಿ ಘೋಷಿಸಬೇಕು ಎಂದು ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ (ಎಐಡಿವೈಒ) ಜಿಲ್ಲಾ ಕಾರ್ಯದರ್ಶಿ ನಿಂಗಣ್ಣ ಜಂಬಗಿ ಒತ್ತಾಯಿಸಿದರು.
ಪಟ್ಟಣದಲ್ಲಿ ಎಐಡಿವೈಒ ವತಿಯಿಂದ ಏರ್ಪಡಿಸಲಾಗಿದ್ದ ನಿರುದ್ಯೋಗ ವಿರೋಧಿ ಯುವಜನ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.

Advertisement

ವಿವಿಧ ಇಲಾಖೆಗಳಲ್ಲಿ ಖಾಲಿ ಉದ್ಯೋಗಗಳಿದ್ದರೂ ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಬದಲಿಗೆ ಇದ್ದ ಹುದ್ದೆಗಳನ್ನೇ
ಕಡಿತಗೊಳಿಸಲಾಗುತ್ತಿದೆ. ಪ್ರತಿವರ್ಷವೂ ಉದ್ಯೋಗ ಸೃಷ್ಟಿಸಬೇಕಾದ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಬಂಡವಾಳಶಾಹಿಗಳ ಕುತಂತ್ರಕ್ಕೆ ತಾಳ ಹಾಕುವ ಮೂಲಕ ನಿರುದ್ಯೋಗ ಸಮಸ್ಯೆ ಹೆಚ್ಚಾಗುವಂತೆ ಮಾಡುತ್ತಿವೆ. ಜನರು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದು, ವ್ಯವಸ್ಥೆಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗುತ್ತಿದೆ. ಉದ್ಯೋಗಕ್ಕಾಗಿ ಬೀದಿ ಬೀದಿ ಅಲೆಯುತ್ತಿರುವ ಯುವಜನರು ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಕೈಗೊಳ್ಳಲು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಎಸ್‌ಯುಸಿಐ (ಸಿ) ಪಕ್ಷದ ಕಾರ್ಯದರ್ಶಿ ಕಾಮ್ರೇಡ್‌ ವೀರಭದ್ರಪ್ಪ ಆರ್‌.ಕೆ., ಸದಸ್ಯ ಶರಣು ಹೇರೂರ ಮಾತನಾಡಿದರು. ಎಐಡಿವೈಒ ಅಧ್ಯಕ್ಷ ರಾಘವೇಂದ್ರ ಅಲ್ಲಿಪುರ ಅಧ್ಯಕ್ಷತೆ ವಹಿಸಿದ್ದರು. ಮಲ್ಲಣ್ಣ ದಂಡಬಾ, ರಾಜು ಒಡೆಯರ ಪಾಲ್ಗೊಂಡಿದ್ದರು.

 ಪದಾಧಿಕಾರಿಗಳ ಆಯ್ಕೆ: ಯುವಜನ ಸಮಾವೇಶದಲ್ಲಿ ಎಐಡಿವೈಒ ನಗರ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.  ಶರಣು ವಿ.ಕೆ. (ಅಧ್ಯಕ್ಷ), ಮಲ್ಲಿನಾಥ ಹುಂಡೇಕಲ್‌ (ಕಾರ್ಯದರ್ಶಿ), ಶ್ರೀಶರಣ ಹೊಸಮನಿ, ಶ್ರೀಶೈಲ ಕಡಬೂರ, ಬಸವರಾಜ ನಾಟೇಕರ, ನಂದೀಶ ಪೋದ್ದಾರ, ಸಾಬು ಯಾದವ್‌, ಸುನೀಲ ಜಂಗಮ ಲಾಡ್ಲಾಪುರ, ಸುರೇಶ ಲಾಡ್ಲಾಪುರ, ಅವಿನಾಶ ಒಡೆಯರ,
ಮಹೆಬೂಬ ಪಟೇಲ, ಹಣಮಂತ ಲಾಡ್ಲಾಪುರ, ದೇವು ಹಡಪದ, ಶರಣಬಸು ಲಾಡ್ಲಾಪುರ, ನಾಗರಾಜ ಅಕ್ಕಿ ಹಳಕರ್ಟಿ, ಖದೀರ ಡೋಣಗಾಂವ, ಅಹ್ಮದ್‌ ಮಿರ್ಜಾ ಸದಸ್ಯರಾಗಿ ಆಯ್ಕೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next