Advertisement

ಮತ್ತೂಂದು ಅರ್ಜಿ ಸಲ್ಲಿಸಲು ತಯಾರಿ

07:00 AM Jul 26, 2018 | Team Udayavani |

ಪಣಜಿ: ಮಹದಾಯಿ ನದಿ ನೀರು ಹಂಚಿಕೆ ವಿವಾದದ ಅಂತಿಮ ತೀರ್ಪು ಹೊರ ಬರುವ ಸಂದರ್ಭದಲ್ಲಿ ಗೋವಾ ಸರ್ಕಾರ ನ್ಯಾಯಾಧಿಕರಣದಲ್ಲಿ ಕರ್ನಾಟಕದ ವಿರುದ್ಧ ಮತ್ತೂಂದು ಅರ್ಜಿ ಸಲ್ಲಿಸಲು ಮುಂದಾಗಿದೆ.

Advertisement

ಈ ಕುರಿತಂತೆ ಬುಧವಾರ ಗೋವಾ ವಿಧಾನಸಭೆಯಲ್ಲಿಯೂ ವಿಷಯ ಪ್ರಸ್ತಾಪವಾಗಿದ್ದು,ಕರ್ನಾಟಕದ ಪ್ರಯತ್ನ ವಿಫಲಗೊಳಿಸುವ ಎಲ್ಲ ಕಸರತ್ತು ನಡೆದಿದೆ.ಕಳಸಾ-ಬಂಡೂರಿ ನಾಲೆಯಿಂದ ಮಲಪ್ರಭೆಗೆ ನೀರು ಸೇರದಂತೆ ಅಲ್ಲಲ್ಲಿ ನಿರ್ಮಿಸಲಾಗಿದ್ದ ಸುಮಾರು ಮೂರು ತಡೆಗೋಡೆಯನ್ನು ಕರ್ನಾಟಕವು ಒಡೆದು ಹಾಕಿದೆ. ಈಗಾಗಲೇ ಮಹದಾಯಿ ನದಿಯಿಂದ ಮಲಪ್ರಭಾ ನದಿಗೆ ನೀರನ್ನು ತಿರುಗಿಸಲಾಗಿದೆ ಎಂದು ಗೋವಾ ರಾಜ್ಯ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲೇಕರ್‌ ಬುಧವಾರ ಅಧಿವೇಶನದಲ್ಲಿ ಮಹದಾಯಿ ವಿಷಯಪ್ ಸ್ತಾಪಿಸಿದರು.

3 ಸುರಂಗಗಳ ಮೂಲಕ ಮಹದಾಯಿ ನದಿ ನೀರು ಮಲಪ್ರಭೆಗೆ ಸೇರುತ್ತಿರುವುದನ್ನು ಅಲ್ಲಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ವೀಕ್ಷಿಸಿದೆ.ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ಟ್ರಿಬ್ಯುನಲ್‌ನಲ್ಲಿ ಕೂಡಲೇ ಕರ್ನಾಟಕದ ವಿರುದ್ಧ ಅರ್ಜಿ ಸಲ್ಲಿಸಲಾಗುವುದು.ಕಂಟೆಮ್‌ ಪಿಟಿಷನ್‌ನ್ನು ಶುಕ್ರವಾರ ಸಲ್ಲಿಸಲಾಗುವುದು ಎಂದು ವಿನೋದ ಪಾಲೇಕರ್‌ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶಾಸಕ ಅಲೆಕ್ಸ್  ರೆಜಿನಾಲ್ಡೊ ಹಾಗೂ ಬಿಜೆಪಿ ಶಾಸಕ ರಾಜೇಶ್‌ ಪಾಕ್ಲೃಕರ್‌ ಪ್ರಸ್ತಾಪಿಸಿದ್ದ ಪ್ರಶ್ನೆಗೆ ಉತ್ತರಿಸಿದರು. 

ಸರ್ಕಾರ ಯಾವುದಿದೆ ಎಂಬುದು ಅಪ್ರಸ್ತುತ. ನಮ್ಮ ರಾಜ್ಯದ ಆಸ್ತಿಯನ್ನು ನಾವು ರಕ್ಷಿಸಬೇಕು. ಮಹದಾಯಿ ನಮ್ಮ ಆಸ್ತಿ.
– ಮನೋಹರ್‌ ಪರ್ರಿಕರ್‌,ಗೋವಾ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next