Advertisement

ಅ.15ರ ಒಳಗಾಗಿ ದೋಷರಹಿತ ಮತದಾರರ ಪಟ್ಟಿ ಸಿದ್ಧ ಪಡಿಸಿ

03:48 PM Sep 10, 2019 | Team Udayavani |

ಮಾಲೂರು: 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ನಾಗರಿಕ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡುವುದು ಕಡ್ಡಾಯ ಎಂದು ಉಪವಿಭಾಗಾಧಿಕಾರಿ ಸೋಮಶೇಖರ್‌ ತಿಳಿಸಿದರು.

Advertisement

ಪಟ್ಟಣದ ಸರ್ಕಾರಿ ಬಾಲಕರ ಜೂನಿಯರ್‌ ಕಾಲೇಜು ಸಭಾಂಗಣದಲ್ಲಿ ನಡೆದ ಬಿಎಲ್ಒ ಮತ್ತು ಸಾಮಾನ್ಯ ಸೇವಾ ಕೇಂದ್ರದ ಪ್ರತಿನಿಧಿಗಳ ತರಬೇತಿ ಸಭೆಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಡ್ಡಾಯ ಮತದಾನ ಮತ್ತು 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರು ಮತದಾರರ ಪಟ್ಟಿಗೆ ನಮ್ಮ ಹೆಸರು ನೋಂದಣಿ ಮಾಡಿಸಬೇಕು. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ಬೂನಾದಿಯಾಗಿರುವ ಚುನಾವಣೆಯಲ್ಲಿನ ಲೋಪ ತಡೆಯಲು ಪ್ರತಿಯೊಬ್ಬರು ಜವಾಬ್ದಾರಿ ಹೊರಬೇಕಾಗಿದೆ ಎಂದು ಹೇಳಿದರು.

ಅ.15 ಕೊನೆ ದಿನ: ಅ.15ರ ಒಳಗಾಗಿ ಸಂಪೂರ್ಣ ದೋಷ ರಹಿತ ಮತದಾರರಪಟ್ಟಿ ಮತ್ತು ಬಣ್ಣದ ಭಾವಚಿತ್ರವಿರುವ ಮತದಾರರಪಟ್ಟಿ ಸಿದ್ಧ ಪಡಿಸಬೇಕಾಗಿದೆ. ಇದರಿಂದ ಶೇ.99 ಚುನಾವಣೆ ದೋಷ ತಡೆಯಲು ಸಾಧ್ಯ. ಹೀಗಾಗಿ ಚುನಾವಣೆ ಆಯೋಗ ಸೆ.1ರಿಂದ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ ಎಂದು ಹೇಳಿದರು.

ಅಗತ್ಯ ದಾಖಲೆ ಒದಗಿಸಿ: ಈ ಅವಧಿಯಲ್ಲಿ ಹೆಚ್ಚು ಜವಾಬ್ದಾರಿವುಳ್ಳ ಬಿಎಲ್ಒ ಮತ್ತು ಸಾಮಾನ್ಯ ಸೇವಾ ಕೇಂದ್ರದ ಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಬೂತ್‌ಗಳ ಪ್ರತಿ ಮನೆಗೂ ತೆರಳಿ 18 ವರ್ಷ ಪೂರ್ಣಗೊಂಡವರಿಂದ ವಯಸ್ಸಿನ ದೃಢೀಕರಣದ ದಾಖಲೆ ಪಡೆದು, ಮೃತ ಪಟ್ಟ ವ್ಯಕ್ತಿಗಳ ಹೆಸರು ಪಟ್ಟಿಯಿಂದ ಕೈಬಿಡುವ ನಿಟ್ಟಿನಲ್ಲಿ ಅರ್ಜಿ ನಮೂನೆ 6 ಮತ್ತು 8ರಲ್ಲಿ ಅಗತ್ಯ ದಾಖಲೆಗಳೊಂದಿಗೆ ಚುನಾವಣಾ ಶಾಖೆಗೆ ಒದಗಿಸುವಂತೆ ತಿಳಿಸಿದರು.

ತಿದ್ದುಪಡಿಗೆ ಅವಕಾಶ: ಪ್ರತಿಯೊಬ್ಬರು ಶೇ.100 ಗುಣಮಟ್ಟದ ಮತದಾರ ಪಟ್ಟಿ ಸಿದ್ಧಪಡಿಸಲು ಶ್ರಮವಹಿಸಬೇಕಾಗಿದೆ. ಅದೇರೀತಿಯಲ್ಲಿ ಮತದಾ ರರ ಪಟ್ಟಿಯಲ್ಲಿನ ಹೆಸರು ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ವರ್ಗಾವಣೆಗೆ ಅವಕಾಶ ವಿದ್ದು, ನಿಗದಿತ ಅರ್ಜಿ ನಮೂನೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹು ದಾಗಿದೆ. ಬಿಎಲ್ಒಗಳು ಮನೆಗಳಿಗೆ ಭೇಟಿ ನೀಡುವ ಸಮಯದಲ್ಲಿ ಪಟ್ಟಿಯಲ್ಲಿ ಹೆಸರು ತಪ್ಪಾಗಿದ್ದಲ್ಲಿ ಸರಿಪಡಿಸಲು ಅವಕಾಶ ಇದೆ ಎಂದರು.

Advertisement

ಕೊಡುಗೆ ನೀಡಿದಂತೆ: ಎಲ್ಲಾ ಪ್ರಕ್ರಿಯೆಗಳ ಪೂರ್ಣವಾದ ನಂತರ ಶೇ.100 ದೋಷರಹಿತ ಮತದಾರ ಪಟ್ಟಿಯು ಸಿದ್ಧವಾಗಬೇಕಾಗಿದೆ. ಇದರ ಫ‌ಲಿತಾಂಶವನ್ನು 2020ರ ಚುನಾವಣೆಯಲ್ಲಿ ಕಾಣಬಹುದಾಗಿದೆ ಎಂದ ಅವರು, ದೋಷರಹಿತ ಪಟ್ಟಿಯಿಂದ ಬಿಎಲ್ಒಗಳು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಮತದಾನವಾದಲ್ಲಿ ಅ ಪ್ರಗತಿಗೆ ತಮ್ಮದೇ ಕೊಡುಗೆಯಾಗಲಿದೆ ಎಂದರು.

ಸಭೆಯಲ್ಲಿ ತಹಶೀಲ್ದಾರ್‌ ವಿ.ನಾಗರಾಜು, ಪುರಸಭೆ ಮುಖ್ಯಾಧಿಕಾರಿ ಪ್ರಸಾದ್‌ರೆಡ್ಡಿ, ತರಬೇತು ದಾರ ಮಂಜುನಾಯಕ್‌ ಮತ್ತಿತರರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next