ಡಾ| ಜಿ. ಶಂಕರ್ ಹೇಳಿದರು.
Advertisement
ರವಿವಾರ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಮೊಗವೀರ ಯುವ ಸಂಘಟನೆಗಳ ನೇತೃತ್ವದಲ್ಲಿ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಜರಗಿದ ಗುರಿಕಾರರ ಸಮಾವೇಶ, ಗೌರವಧನ ವಿತರಣೆ ಮತ್ತು “ಮತ್ಸ éಜ್ಯೋತಿ’ ಮೀನುಗಾರ ಮಹಿಳೆಯರನ್ನು ಗೌರವಿಸುವ ಸಮಾರಂಭ ಹಾಗೂ ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊಗವೀರರು ಸೇರಿದಂತೆ ಮೀನುಗಾರಿಕೆ ನಡೆಸುವ 39 ಜಾತಿಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಈ ಹಿಂದೆ ಮೂರು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಮತ್ತೂಮ್ಮೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಒತ್ತಡ ಹಾಕಬೇಕು. ಚುನಾವಣಾ ಪ್ರಣಾಳಿಕೆಯಲ್ಲಿಯೂ ಇದನ್ನು ಸೇರಿಸಿ ಕೊಳ್ಳಬೇಕು. ಇದು ಮೀನುಗಾರರ ಅಳಿವು ಉಳಿವಿನ ಪ್ರಶ್ನೆ. ರಾಜಕೀಯ ಪಕ್ಷಗಳು ನಮ್ಮನ್ನು ಮರುಳು ಮಾಡುವುದು ಬೇಡ, ಕೆಲಸ ಮಾಡಿಕೊಡಿ. ಪ.ಪಂಗಡಕ್ಕೆ ಸೇರ್ಪಡೆಯಾದರೆ ಎಂಬಿಬಿಎಸ್, ಎಂಜಿ ನಿಯರಿಂಗ್ ಸೀಟುಗಳು, ಸರಕಾರಿ ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ. ಇದು ಮುಂದಿನ ಪೀಳಿಗೆಗೆ ನೆರವಾಗಲಿದೆ. ಸಿಆರ್‌ಝಡ್ ಸಮಸ್ಯೆ ಪರಿಹರಿಸಲು ಕೂಡ ರಾಜಕೀಯ ಪಕ್ಷಗಳು ಕಾರ್ಯಪ್ರವೃತ್ತವಾಗಬೇಕು ಎಂದು ಅವರು ಹೇಳಿದರು.
Related Articles
ಗುರಿಕಾರರು ಸಮಾಜದ ಮಾರ್ಗದರ್ಶಕರು. ಕಳೆದ 12 ವರ್ಷಗಳಿಂದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಗುರಿಕಾರರನ್ನು ಗೌರವಿಸುತ್ತಾ ಬಂದಿದೆ. ಗುರಿಕಾರರು ಸಮಾಜದಲ್ಲಿ ಮತ್ತಷ್ಟು ಮುಂದೆ ಬರಬೇಕು, ಮಾರ್ಗದರ್ಶನ, ತಿಳಿವಳಿಕೆ ನೀಡ ಬೇಕು ಎಂದು ಹೇಳಿದರು.
Advertisement
ಉಡುಪಿ ಜಿಲ್ಲೆ ಮೊಗವೀರ ಯುವಸಂಘಟನೆಯ ಅಧ್ಯಕ್ಷ ವಿನಯ್ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಗಂಗಾಧರ್ ಎಚ್. ಕರ್ಕೇರ, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸೇವಾಸಂಘದ ಕುಂದಾಪುರ ಶಾಖೆಯ ಅಧ್ಯಕ್ಷ ಕೆ.ಕೆ. ಕಾಂಚನ್, ಬೆಣ್ಣೆಕುದ್ರು-ಬಾರಕೂರು ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ವಿಶ್ವನಾಥ ಮಾಸ್ತರ್ ಕೂರಾಡಿ, ಉದ್ಯಮಿ ಶಿವಪ್ಪ ಟಿ. ಅಮೀನ್, ಮೊಗವೀರ ಯುವಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಗಣೇಶ್ ಕಾಂಚನ್, ಶಾಲಿನಿ ಶಂಕರ್ ಉಪಸ್ಥಿತರಿದ್ದರು. ಜಯ ಸಿ. ಕೋಟ್ಯಾನ್ ಸ್ವಾಗತಿಸಿ, ಶಂಕರ ಸಾಲ್ಯಾನ್ ವಂದಿಸಿದರು. ಅಶೋಕ್ ತೆಕ್ಕಟ್ಟೆ ನಿರ್ವಹಿಸಿದರು.
ಅಮ್ಮನ ನೆನಪು ತಂದ ಸಮ್ಮಾನತಲೆಹೊರೆಯಲ್ಲಿ ಮೀನು ಮಾರಾಟ ಮಾಡುವ 10 ಮಂದಿ ಹಿರಿಯ ಮೀನುಗಾರ ಮಹಿಳೆಯರನ್ನು 25,000 ರೂ. ನಗದು ಸಹಿತ “ಮತ್ಸಜ್ಯೋತಿ’ ಪುರಸ್ಕಾರ ನೀಡಿ ಸಮ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಡಾ| ಜಿ. ಶಂಕರ್, ನಮ್ಮ ಬಾಲ್ಯವನ್ನು ನೆನಪಿಟ್ಟು ಕೊಂಡರೆ ಮಾತ್ರ ನಾವು ಮನುಷ್ಯರು. ಶ್ರೀಮಂತರಾದರೆ ಎಲ್ಲರೂ ಗುರುತಿಸುತ್ತಾರೆ. ಆದರೆ ಗಂಜಿಗೂ ಗತಿ ಇಲ್ಲದ ದಿನಗಳಲ್ಲಿ ನಮಗೆ ತಾಯಿ ಕಲಿಸಿದ ಸಂಸ್ಕಾರವೇ ಮುಖ್ಯ. ನನ್ನ ತಾಯಿ ಕೂಡ ತಲೆಹೊರೆಯಲ್ಲಿ ಮೀನು ಮಾರಾಟ ಮಾಡುತ್ತಿದ್ದರು. ಇಂದು ಈ ಹಿರಿಯ ಮೀನುಗಾರ ಮಹಿಳೆಯರನ್ನು ಗೌರವಿಸುವಾಗ ನನಗೆ ಅಮ್ಮನ ನೆನಪಾಗುತ್ತಿದೆ ಎಂದು ಹೇಳಿದರು.