Advertisement

ಕಡಲಕೆರೆ ಸಸ್ಯಕ್ಷೇತ್ರದಲ್ಲಿ 2,500 ಬೀಜದುಂಡೆ ತಯಾರಿ

01:58 AM Jun 09, 2019 | Team Udayavani |

ಮೂಡುಬಿದಿರೆ: ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ನಾಶ ಮಾಡುವ ಮೂಲಕ ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದ್ದೇವೆ. ಇದರಿಂದಾಗಿ ಪರಿಸರ ಸಮತೋಲನ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಈ ಬಗ್ಗೆ ಎಲ್ಲರಲ್ಲಿ ಕಾಳಜಿ ಮೂಡಬೇಕಾಗಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಚಿದಾನಂದ ಹೇಳಿದರು.

Advertisement

ದ.ಕ. ಜಿಲ್ಲಾ ಪಂಚಾಯತ್‌ ಸಾಮಾಜಿಕ ಅರಣ್ಯ ವಿಭಾಗ, ಸಾಮಾಜಿಕ ಅರಣ್ಯ ವಲಯ ಮಂಗಳೂರು ಆÍ‌್ರಯದಲ್ಲಿ ಭಾರತ್‌ ಸ್ಕೌಟ್ಸ್‌ ಹಾಗೂ ಗೈಡ್ಸ್‌ನ ಮೂಡುಬಿದಿರೆ ಸಹಯೋಗದೊಂದಿಗೆ ಶುಕ್ರವಾರ ಕಡಲಕೆರೆ ಸಸ್ಯಕ್ಷೇತ್ರದಲ್ಲಿ ಆರಂಭಗೊಂಡ ಬೀಜದುಂಡೆ ಅಭಿಯಾನದಲ್ಲಿ ಅವರು ಮಾತನಾಡಿದರು.

ಬೀಜದುಂಡೆ ತಯಾರಿ

ಮಂಗಳೂರು ಸಾಮಾಜಿಕ ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಜೆ. ಶ್ರೀನಿವಾಸ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಅವರ ಮಾರ್ಗದರ್ಶನದಲ್ಲಿ ನಡೆದ ಈ ಆಭಿಯಾನದಲ್ಲಿ ವಿದ್ಯಾರ್ಥಿಗಳು 2,500 ಬೀಜದುಂಡೆಗಳನ್ನು ತಯಾರಿಸಿದರು.

ಬೀಜದುಂಡೆಗಳ ಮಹತ್ವ, ಸಸಿಗಳನ್ನು ನೆಡುವ ಸರಿಯಾದ ವಿಧಾನದ ಬಗ್ಗೆ ಮಾಹಿತಿ ನೀಡಲಾಯಿತು. ಹಲಸು, ಪುನರ್‌ಪುಳಿ, ಜಾರಿಗೆ ಹುಳಿ ನೇರಳೆ, ಮಹಾಗನಿ ಗಿಡಗಳನ್ನು ನೆಡಲಾಯಿತು.

Advertisement

ವಲಯ ಅರಣ್ಯಾಧಿಕಾರಿ ರೋಹಿಣಿ, ಮೂಡುಬಿದಿರೆ ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ, ಸ್ಕೌಟ್ಸ್‌ -ಗೈಡ್ಸ್‌ ಸಂಸ್ಥೆಯ ಜತೆ ಕಾರ್ಯದರ್ಶಿ ನಿರ್ಮಲಾ, ನವೀನ್‌ ಅಂಬೂರಿ, ಶಿಕ್ಷಕಿಯರಾದ ವಿದ್ಯಾ, ವಿನಯಾ, ಸುರಕ್ಷಾ, ಸಸ್ಯಕ್ಷೇತ್ರ ಹಾಗೂ ಮಂಗಳೂರು ಸಾಮಾಜಿಕ ವಲಯಅರಣ್ಯವಿಭಾಗದ ಸಿಬಂದಿಗಳು ಉಪಸ್ಥಿತರಿದ್ದರು. ಸ್ಕೌಟ್ಸ್‌-ಗೈಡ್ಸ್‌ ಡಿಓಸಿ ಭರತ್‌ ನಿರೂಪಿಸಿದರು.

ಮೂಡುಬಿದಿರೆ ರೋಟರಿ ವಿದ್ಯಾಸಂಸ್ಥೆಗಳ ಪ್ರಾಂಶುಪಾಲ, ಸ್ಕೌಟ್ಸ್‌ನ ಹಾಗೂ ಗೈಡ್ಸ್‌ನ ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷ ವಿನ್ಸೆಂಟ್ ಡಿ’ಕೋಸ್ತ ಮಾತನಾಡಿ, ಪ್ರಕೃತಿ ಸಂಪತ್ತನ್ನು ಕೊಳ್ಳೆ ಹೊಡೆದ ಪರಿಣಾಮ ನಾವು ಇಂದು ಹವಾಮಾನ ವೈಪರಿತ್ಯದ ಪ್ರಭಾವಗಳನ್ನು ಅನುಭವಿಸುತ್ತಿದ್ದೇವೆ. ಬೀಜದುಂಡೆಯಂತಹ ಅಭಿಯಾನ ನಮ್ಮಿಂದ ನಿರಂತರವಾಗಿ ನಡೆದರೆ ಪ್ರಕೃತಿ ಸಮೃದ್ಧವಾಗಿ ಉಳಿಯಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next