Advertisement
ಆದರೆ, ಈಗ ಉಪ ಸಗಟು ನಿರ್ವಹಣೆ ಮಾಡುವವರೂ ಸೇರಿಕೊಂಡಿರುವುದು ಪತ್ತೆಯಾಗಿದೆ. ಸಗಟು ನಿರ್ವಹಣೆ ಮಾಡುವವರು ನಗರದಲ್ಲಿ 10ರಿಂದ 100 ಕೆ.ಜಿ ತ್ಯಾಜ್ಯ ಉತ್ಪಾದನೆಯಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿದ್ದಾರೆ. ಸಗಟು ತ್ಯಾಜ್ಯ ವಿಲೇವಾರಿ ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಅಲ್ಲದೆ, ಸಗಟು ವಿಲೇವಾರಿಗೆ ಪರವಾನಗಿ ಪಡೆದಿರುವವರು ಅಕ್ರಮವಾಗಿ ಬಿಬಿಎಂಪಿಯ ವಾಹನಗಳಿಗೆ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ, ಎಲ್ಲೆಂದರಲ್ಲಿ ಎಸೆಯುತ್ತಿರುವ ಬಗ್ಗೆಯೂ ಆರೋಪಗಳೂ ಕೇಳಿಬಂದಿತ್ತು.
Related Articles
Advertisement
ಪಾಲಿಕೆ ಅಧಿಕಾರಿಗಳು ರಾಷ್ಟ್ರೀಯ ಎನ್‌ಜಿಟಿಯ ಘನತ್ಯಾಜ್ಯ ನಿರ್ವಹಣೆ -2016ರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ನಿಯಮಾನುಸಾರವೇ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.
ನೂತನ ಪ್ರಸ್ತಾವನೆ ಸಲ್ಲಿಸಿದ ಬಿಬಿಎಂಪಿ: ನಗರದ ತ್ಯಾಜ್ಯ ವಿಲೇವಾರಿಗೆ ಬಳಸಲಾಗುತ್ತಿರುವ ಬೆಳ್ಳಳ್ಳಿ ಕ್ವಾರಿ ಮತ್ತು ಮಿಟಗಾನಹಳ್ಳಿ ಸೇರಿದಂತೆ ಘನತ್ಯಾಜ್ಯ ವಿಲೇವಾರಿ ಘಟಕಗಳ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಹಾಗೂ ನಗರದಲ್ಲಿ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ (ಮೂರು ವರ್ಷಗಳಿಗೆ) ವಿಲೇವಾರಿ ಮಾಡುವುದಕ್ಕೆ 1,179 ಕೋಟಿ ರೂ. ನೀಡುವಂತೆ ಪಾಲಿಕೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆ ಮತ್ತು ಕಾಮಗಾರಿಗಳಿಗೆ (2018-19, 2019-20, 2020-21ನೇ ಸಾಲಿಗೆ) 583.34 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ರೂಪಿಸಿದೆ. ಇದರಲ್ಲಿ ನಗರದ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಗೆ 55.50 ಕೋಟಿ ರೂ. ಹಾಗೂ 528.85 ಕೋಟಿ ರೂ. ಘನತ್ಯಾಜ್ಯ ವಿಲೇವಾರಿ ಘಟಕಗಳ ಸುತ್ತಮುತ್ತಲಿನ ಪ್ರದೇಶಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಮೀಸಲಿರಿಸಿದೆ.
ಹೀಗಾಗಿ, ನಗರದ ತ್ಯಾಜ್ಯ ವಿಲೇವಾರಿಗೆ ಸಮಸ್ಯೆ ಉಂಟಾಗಲಿದ್ದು, ಹೆಚ್ಚುವರಿಯಾಗಿ ಅನುದಾನ ಬಿಡುಗಡೆ ಮಾಡುವಂತೆ ಬಿಬಿಎಂಪಿಯು ಸರ್ಕಾರಕ್ಕೆ ನೂತನ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಪ್ರಸ್ತಾವನೆಯಲ್ಲಿರುವ ಯೋಜನೆಗಳಲ್ಲಿ 2 ಕೋಟಿ ರೂ.ವರೆಗಿನ ಯೋಜನೆಗಳನ್ನು ಬಿಬಿಎಂಪಿ ಆಯುಕ್ತರ ಮಟ್ಟದಲ್ಲೇ ಅನುಮೋದನೆ ಪಡೆದುಕೊಳ್ಳಲು ಅನುಮತಿ ನೀಡಬೇಕು ಎಂದು ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಯೋಜನೆ 2019-20 2020-21 2021-22 (ಕೋಟಿ ರೂ.ಗಳಲ್ಲಿ) ಘನತ್ಯಾಜ್ಯ ನಿರ್ವಹಣೆ 277.50 462 259.50
ತ್ಯಾಜ್ಯ ಘಟಕಗಳ ಸುತ್ತಲ ಹಳ್ಳಿಗಳ ಅಭಿವೃದ್ಧಿ 30 75 75
ಒಟ್ಟು 307.50 537 334.50 1179 ಸಗಟು ತ್ಯಾಜ್ಯ ನಿರ್ವಾಹಕರು ಎಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಇದರಲ್ಲಿ ಲೋಪ ಕಂಡು ಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಸಗಟು ತ್ಯಾಜ್ಯ ವಿಲೇವಾರಿ ಪರವಾನಗಿ ಪಡೆದವರೇ ವಿಲೇವಾರಿ ಮಾಡುತ್ತಿದ್ದಾರೆಯೇ, ಪ್ರತ್ಯೇಕ ತ್ಯಾಜ್ಯ ಸಂಗ್ರಹಣೆ ಆಗುತ್ತಿದೆಯೇ ಎನ್ನುವ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತಿದೆ.
-ರಂದೀಪ್, ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) * ಹಿತೇಶ್ ವೈ