Advertisement

Panaji: ರಾಜ್ಯಕ್ಕೆ ಉತ್ತಮ ಬಜೆಟ್ ಮಂಡಿಸುವ ಹಿನ್ನೆಲೆ ಸಿದ್ಧತೆ ಆರಂಭ

03:19 PM Jan 19, 2024 | Team Udayavani |

ಪಣಜಿ: ಗೋವಾ ವಿಧಾನಸಭೆಯ ಬಜೆಟ್ ಅಧಿವೇಶನ ಫೆಬ್ರವರಿ 2 ರಿಂದ ಆರಂಭಗೊಳ್ಳಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ಹೇಳಿದರು.

Advertisement

ಪ್ರಸಕ್ತ ಗೋವಾ ಬಜೆಟ್‍ನ ಭವಿಷ್ಯದ ಯೋಜನೆಗಾಗಿ ಎಲ್ಲಾ ವಿಭಾಗದ ಮುಖ್ಯಸ್ಥರ ಕಾರ್ಯದರ್ಶಿಗಳೊಂದಿಗೆ ಸಭೆಗಳನ್ನು ನಡೆಸಲಾಗಿದೆ ಮತ್ತು ಪ್ರತಿ ಇಲಾಖೆಯಿಂದ ಸೂಚನೆಯನ್ನು ಪಡೆದುಕೊಳ್ಳಲಾಗುತ್ತಿದೆ. ರಾಜ್ಯಕ್ಕೆ  ಕೇಂದ್ರದ ಯೋಜನೆಗಳು ಮತ್ತು ಕೇಂದ್ರದಿಂದ ಅನುಮೋದನೆ ಪಡೆದ ಯೋಜನೆಗಳ ಕುರಿತು ಇಂದು ಚರ್ಚೆಗಳು ನಡೆದವು ಎಂದು ಮಾಹಿತಿ ನೀಡಿದರು.

ಪ್ರಸಕ್ತ ಗೋವಾ ಬಜೆಟ್ ಕುರಿತಂತೆ ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಈ ಬಜೆಟ್‍ಗಾಗಿ ನಾವು ಸಾರ್ವಜನಿಕರಿಂದ ಸಲಹೆಯನ್ನು ಕೇಳಿದ್ದೇವೆ ಮತ್ತು ನಾವು ರಾಜ್ಯದ ಎಲ್ಲಾ ಉದ್ಯಮ ಸಂಘಗಳು, ಚೇಂಬರ್ಸ್ ಆಫ್ ಕಾಮರ್ಸ್, ರೋಟರಿ ಕ್ಲಬ್‍ಗಳು ಮತ್ತು ಅಂತಹ ಎಲ್ಲಾ ಸಂಸ್ಥೆಗಳಿಂದ ಇನ್‍ಪುಟ್ ಪಡೆಯುತ್ತಿದ್ದೇವೆ. ರಾಜ್ಯಕ್ಕೆ ಉತ್ತಮ ಬಜೆಟ್ ಮಂಡಿಸುವ ಹಿನ್ನೆಲೆಯಲ್ಲಿ ಸಿದ್ಧತೆ ಆರಂಭಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next