ಮಹಾನಗರ: ಸೆಪ್ಟಂಬರ್ 2ರಂದು ನಡೆಯಲಿರುವ ಗಣೇಶ ಚತುರ್ಥಿಗೆ ನಗರಾದ್ಯಂತ ಸಿದ್ಧತೆಗಳು ನಡೆದಿದ್ದು, ಗಣೇಶನ ವಿಗ್ರಹಗಳು ತಯಾರಾಗುತ್ತಿವೆ. ನಗರದ ಮಣ್ಣಗುಡ್ಡೆಯಲ್ಲಿ ಪ್ರಭಾಕರ ರಾವ್, ರಥಬೀದಿಯ ವಿವಿಧೆಡೆ ರವಿ ಆರ್ಟ್ಸ್, ದಾಮೋದರ ಶೆಣೈ ಹಾಗೂ ಕಿಶೋರ್ ಪೈ ಅವರು ತಮ್ಮ ತಂಡದೊಂದಿಗೆ ಗಣಪತಿಯ ವಿಗ್ರಹ ನಿರ್ಮಿಸುವುದರಲ್ಲಿ ತಲ್ಲೀನರಾಗಿದ್ದಾರೆ.
ನಗರದಲ್ಲಿ 5 ವರ್ಷಗಳಿಂದ ಪರಿಸರ ಸ್ನೇಹಿ ಔತಿ ಆಚರಣೆ ನಡೆಯುತ್ತಿದ್ದು, ಮೂರ್ತಿ ರಚನೆಗೆ ಆವೆ ಮಣ್ಣನ್ನು ಮಾತ್ರ ಬಳಸುತ್ತಾರೆ.
ಈಗಾಗಲೇ ಸಂಘ-ಸಂಸ್ಥೆಗಳು ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ, ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ಯುವಜನತೆಯಲ್ಲಿ ಉತ್ಸಾಹ ಮೂಡಿಸಲಾಗಿದೆ. ಸಂಘನಿಕೇತನ, ಕೇಂದ್ರ ಮೈದಾನ, ಕೆಎಸ್‌ಆರ್‌ಟಿಸಿ, ಪೊಲೀಸ್ ಲೇನ್, ಮಂಗಳಾದೇವಿ, ಎಪಿಎಂಸಿ ಮುಂತಾದ ಹಲವೆಡೆ ಗಣೇಶೋತ್ಸವದ ತಯಾರಿ ಬಿರುಸಿನಿಂದ ನಡೆಯುತ್ತಿದೆ.