Advertisement

ಬೈಕ್‌ಟೂರ್‌ ಹೊರಟಿದ್ದೀರಾ ಸಿದ್ಧತೆ ಹೀಗೆ ಮಾಡಿ…

08:04 AM Feb 22, 2019 | Team Udayavani |

ಬೈಕ್‌ ಟೂರು ಹೊರಡುವುದು ಈಗಿನ ಕಾಲದಲ್ಲಿ ಸಾಮಾನ್ಯ. ಬೇರೆ ವಾಹನಗಳಿಗಿಂತಲೂ ಹೆಚ್ಚಿನ ಮಜಾ ಕೊಡುತ್ತೆ ಎಂಬ ಕಾರಣಕ್ಕೆ ಈಗೀಗ ಯುವಕರು ಮಾತ್ರವಲ್ಲದೆ, ಮಧ್ಯವಯಸ್ಕರೂ ಬೈಕ್‌ ಟೂರ್‌ ಎಂಬ ಕ್ರೇಜ್‌ಗೆ ಅಂಟಿಕೊಂಡಿದ್ದಾರೆ. ಬೈಕ್‌ ಟೂರ್‌ಗೆ ಹೊರಡುವ ಮುನ್ನ ಬೈಕ್‌ನ ಸ್ಥಿತಿ ಬಗ್ಗೆ ಗಮನ ಹರಿಸಬೇಕಾದ್ದು ತುರ್ತು ಅಗತ್ಯ. ಆದ್ದರಿಂದ ನಿಮ್ಮ ಬೈಕ್‌ ಅದಕ್ಕೆ ತಯಾರಿದೆಯೇ ಎಂಬುದನ್ನು ಪರಿಶೀಲಿಸಿ.

Advertisement

ಟಯರ್‌: ಟಯರ್‌ನ ಥ್ರೆಡ್‌ಗಳು ಚೆನ್ನಾಗಿರಬೇಕು. ಟಯರ್‌ ಚೆನ್ನಾಗಿಲ್ಲ ಎಂದರೆ, ದಾರಿ ಮಧ್ಯೆ ಪಂಕ್ಚರ್‌, ಸ್ಕಿಡ್‌ ಆಗುವ ಸಾಧ್ಯತೆ ಇರಬಹುದು. ಆದ್ದರಿಂದ ಎರಡೂ ಟಯರ್‌ ಚೆನ್ನಾಗಿದೆಯೇ? ಟ್ಯೂಬ್‌ ಹೇಗಿದೆ? ರಿಮ್‌ ಚೆನ್ನಾಗಿದೆಯೇ ಎಂಬುದನ್ನು ಪರಿಶೀಲಿಸಿ.

ಆಯಿಲ್‌: ಸುಗಮ ಸವಾರಿಗೆ ಎಂಜಿನ್‌ ಆಯಿಲ್‌ ಕೂಡ ಮುಖ್ಯ. ಹಳೆಯ ಎಂಜಿನ್‌ ಆಯಿಲ್‌ ಇದ್ದರೆ ಕಪ್ಪಾಗಿ ಎಂಜಿನ್‌ಗೆ ಹಾನಿಯಾಗುವ ಅಥವಾ ಆಯಿಲ್‌ ಲೆವೆಲ್‌ ಕಡಿಮೆಯಿದ್ದರೆ ಎಂಜಿನ್‌ ದಾರಿ ಮಧ್ಯೆ ಕೆಟ್ಟುಹೋಗುವ ಅಪಾಯವಿರುತ್ತದೆ. ಆದ್ದರಿಂದ ಟೂರ್‌ಗೆ ಹೋಗುವ ಮುನ್ನ ಹೊಸ ಎಂಜಿನ್‌ ಆಯಿಲ್‌ ಹಾಕುವುದೇ ಉತ್ತಮ.

ಚೈನ್‌: ಚೈನ್‌ ಟೆನÒನ್‌ ಸರಿಯಾಗಿರಬೇಕು. ಜೋತಾಡಿಕೊಂಡಿದ್ದರೆ, ಉತ್ತಮ ಸವಾರಿ ಸಾಧ್ಯವಿಲ್ಲ. ಚೈನ್‌ ಸಾಕಷ್ಟು ಟೈಟ್‌ ಮಾಡಿ, ಉತ್ತಮ ಆಯಿಲ್‌ ಅಥವಾ ಸ್ಪ್ರೇ ಅನ್ನು ಬಿಡಬೇಕು. ಸಾøಕೆಟ್‌ ಗಳನ್ನೂ ಪರಿಶೀಲಿಸಿ. ಹೆಚ್ಚು ಸವೆದಿದ್ದರೆ ಬದಲಾಯಿಸಿ. ಜತೆಗೆ ತುರ್ತು ಸಂದರ್ಭಕ್ಕೆಂದು ಹೆಚ್ಚುವರಿ ಚೈನ್‌ಲಿಂಕ್‌ ಅನ್ನು ಖರೀದಿಸಿ ಬ್ಯಾಗ್‌ನಲ್ಲಿಟ್ಟುಕೊಳ್ಳುವುದು ಉತ್ತಮ.

ಎಲೆಕ್ಟ್ರಿಕಲ್ಸ್‌: ಎಲ್ಲ ಬಲ್ಬ್ ಗಳು ಸರಿಯಾಗಿ ಉರಿಯುತ್ತಿದೆಯೇ? ಫ್ಯೂಸ್‌ ಸ್ಥಿತಿ ಚೆನ್ನಾಗಿದೆಯೇ ಎಂಬುದನ್ನು ಪರಿಶೀಲಿಸಿ. ಹೆಚ್ಚುವರಿ ಫ್ಯೂಸ್‌ ಖರೀದಿಸಿಟ್ಟುಕೊಳ್ಳಿ. ವಯರಿಂಗ್‌ ಅಗತ್ಯವಿದ್ದರೆ ಪರಿಶೀಲಿಸಿ. ಒಂದು ಹೆಡ್‌ಲೈಟ್‌, ಬ್ರೇಕ್‌ಲೈಟ್‌ ಬಲ್ಬ್ ಗಳನ್ನೂ ಖರೀದಿಸಿಟ್ಟುಕೊಳ್ಳಿ.

Advertisement

ಬ್ರೇಕ್‌ಪ್ಯಾಡ್‌: ಬ್ರೇಕ್‌ಪ್ಯಾಡ್‌ ಸವೆದಿದ್ದರೆ ಬದಲಾಯಿಸಿ. ಬ್ರೇಕ್‌ಲೈನರ್‌, ಸ್ಪ್ರಿಂಗ್‌ಗಳು ಉತ್ತಮವಾಗಿವೆಯೇ ಎಂದು ಪರಿಶೀಲಿಸಿ. 

ಎಂಜಿನ್‌ ಪರಿಶೀಲನೆ: ಸ್ಪಾರ್ಕ್‌ಪ್ಲಗ್‌, ಎಂಜಿನ್‌ ಹೆಡ್‌, ಕ್ಯಾಮ್‌ಗಳು ಮತ್ತು ತಳಭಾಗದಲ್ಲಿ ಎಂಜಿನ್‌ ಆಯಿಲ್‌ ಸೋರುತ್ತಿದೆಯೇ ಎಂದು ಪರಿಶೀಲಿಸಿ. ತುಸು ತೇವಾಂಶ ಇದ್ದರೂ, ಕೂಡಲೇ ರಬ್ಬರ್‌ ಪ್ಯಾಕ್‌ಗಳನ್ನು ಬದಲಾಯಿಸಿ. ಬ್ರೇಕ್‌ ಆಯಿಲ್‌, ಎಂಜಿನ್‌ ಕೂಲೆಂಟ್‌ಗಳನ್ನೂ ಅಗತ್ಯವಾಗಿ ಬದಲಾಯಿಸುವುದು ಉತ್ತಮ. ಹ್ಯಾಂಡಲ್‌, ಸ್ವಿಂಗ್‌ ಆರ್ಮ್, ಸ್ಟೀರಿಂಗ್‌ ಬೋಲ್ಟ್‌ಗಳನ್ನು ಟೈಟ್‌ ಮಾಡಿಸಿ.

ಈಶ 

Advertisement

Udayavani is now on Telegram. Click here to join our channel and stay updated with the latest news.

Next