Advertisement

“ಕ್ಯಾಲೆಂಡರ್ ತಿಂಗಳ ವ್ಯಾಲಿಡಿಟಿ” ಪ್ರಿ-ಪೇಯ್ಡ್ ಪ್ಲಾನ್ ಲಾಂಚ್ ಮಾಡಿದ ಜಿಯೋ

06:54 PM Mar 28, 2022 | Team Udayavani |

ಬೆಂಗಳೂರು: ಮೊಬೈಲ್ ಪ್ರಿಪೇಡ್ ವ್ಯಾಲಿಡಿಟಿ 28 ದಿನಗಳು ಮಾತ್ರ ಏಕೆ? ಪೂರ್ತಿ ಒಂದು ತಿಂಗಳು ಏಕಿಲ್ಲ? ಎಂಬ ಗ್ರಾಹಕರ ಪ್ರಶ್ನೆಗೆ ಜಿಯೋ ಸ್ಪಂದಿಸಿದೆ.

Advertisement

ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ತನ್ನ ಪ್ರೀ-ಪೇಯ್ಡ್ ಗ್ರಾಹಕರಿಗಾಗಿ ಇದೇ ಮೊದಲ ಬಾರಿಗೆ ‘ಕ್ಯಾಲೆಂಡರ್ ತಿಂಗಳ ವ್ಯಾಲಿಡಿಟಿ’ ಯೋಜನೆಯನ್ನು ಪ್ರಾರಂಭಿಸಿದೆ.
ಇದು ಟೆಲಿಕಾಂ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ.

ಜಿಯೋ ಲಾಂಚ್ ಮಾಡಿರುವ ಹೊಸ ಪ್ಲಾನ್ ಪ್ರತಿ ತಿಂಗಳು ಅದೇ ದಿನಾಂಕದಂದು ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತದೆ, ಇದುವೇ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ನೀಡುವ ಸೇವೆಯಂತೆಯೇ ದೊರೆಯಲಿದೆ.

ಹೊಸದಾಗಿ ಲಾಂಚ್ ಮಾಡಿರುವ ಮಾಸಿಕ ಯೋಜನೆಯು ರೂ 259 ಬೆಲೆಯದ್ದಾಗಿದೆ ಮತ್ತು 1.5 GB ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು ಇತರ ಪ್ರಯೋಜನಗಳನ್ನು ಗ್ರಾಹಕರಿಗೆ ನೀಡಲಿದ್ದು, ಮಾರ್ಚ್ 28 ರಂದು ಈ ಹೊಸ ಯೋಜನೆ ಜಾರಿಯಾಗಲಿದೆ.

ರೂ. 259 ಪ್ಲಾನ್ ವಿಶಿಷ್ಟವಾಗಿದೆ. ಈ ಹೊಸತನವು ಪ್ರಿಪೇಯ್ಡ್ ಬಳಕೆದಾರರಿಗೆ ಪ್ರತಿ ತಿಂಗಳು ಕೇವಲ ಒಂದು ರೀಚಾರ್ಜ್ ದಿನಾಂಕವನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

Advertisement

ಇದನ್ನೂ ಓದಿ : ಧರ್ಮಾಧಾರಿತ ರಾಷ್ಟ್ರಗಳು ಉದ್ಧಾರವಾಗೊಲ್ಲ; ಪ್ರೊ|ರಾಚಪ್ಪ

ಗಮನಾರ್ಹವಾಗಿ, ರೂ. 259 ಯೋಜನೆಯನ್ನು ಒಂದೇ ಬಾರಿಗೆ ಹಲವಾರು ಬಾರಿ ರೀಚಾರ್ಜ್ ಮಾಡಬಹುದು. “ಮುಂಗಡ ರೀಚಾರ್ಜ್ ಮಾಡಲಾದ ಯೋಜನೆಯು ಸರದಿಯಲ್ಲಿ ಬಳಕೆಯಾಗುತ್ತದೆ ಮತ್ತು ಪ್ರಸ್ತುತ ಸಕ್ರಿಯ ಯೋಜನೆಯ ಮುಕ್ತಾಯದ ದಿನಾಂಕದಂದು ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ.

ಈ ಯೋಜನೆಯು ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಲಭ್ಯವಿರುತ್ತದೆ.

ರೂ 259 ಪ್ರಿ-ಪೇಯ್ಡ್ ರೀಚಾರ್ಜ್‌ ವೈಶಿಷ್ಟ್ಯಗಳು.

– ದಿನಕ್ಕೆ 1.5 GB ಹೈಸ್ಪೀಡ್ ಡೇಟಾ, ಆನಂತರ 64 kpbs ವೇಗದ ಡೇಟಾ
– ಅನಿಯಮಿತ ಧ್ವನಿ ಕರೆ ಸೌಲಭ್ಯ
– ದಿನಕ್ಕೆ 100 SMS
– ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆ
– ಪ್ರತಿ ತಿಂಗಳು ಅದೇ ದಿನಾಂಕದಂದು ನವೀಕರಿಸುವ ಮಾಸಿಕ ಮಾನ್ಯತೆ.

Advertisement

Udayavani is now on Telegram. Click here to join our channel and stay updated with the latest news.

Next