ಜಮ್ಮು: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರೀ-ಪೇಯ್ಡ ಮೊಬೈಲ್ ಸೇವೆ ಶನಿವಾರ ಪುನಾರಂಭ ಗೊಂಡಿದೆ. ಸ್ಥಳೀಯ ಕರೆಗಳು, ವಾಯ್ಸ ಕಾಲ್, ಎಸ್‌ಎಂಎಸ್ ಮಾಡುವುದಕ್ಕೂ ಈಗ ಸ್ಥಳೀಯರಿಗೆ ಅನುಕೂಲವಾಗಲಿದೆ. ಜಮ್ಮು ಭಾಗದ ಹತ್ತು ಮತ್ತು ಕಾಶ್ಮೀರ ಭಾಗದ 2 ಜಿಲ್ಲೆಗಳಲ್ಲಿ ವ್ಯವಸ್ಥೆ ಪುನಃಸ್ಥಾಪಿಸ ಲಾಗಿದೆ. 2019ರ ಆಗಸ್ಟ್‌ನಲ್ಲಿ ಮೊಬೈಲ್ ಬಳಕೆ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಕೆಲ ದಿನಗಳ ಹಿಂದಷ್ಟೇ ಸುಪ್ರೀಂಕೋರ್ಟ್ ಕೂಡ ಸರಕಾರದ ನಿರ್ಧಾರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ, ಸಂಪರ್ಕ ಪುನಸ್ಥಾಪಿಸುವಂತೆ ಆದೇಶಿಸಿತ್ತು.
ಆಯಾ ಗ್ರಾಹಕನ ವಿವರ ಪರಿಶೀಲಿಸಿದ ಬಳಿಕ ದೂರಸಂಪರ್ಕ ಕಂಪೆನಿಗಳು ಮೊಬೈಲ್ ಮೂಲಕ ಇಂಟರ್‌ನೆಟ್ ಸಂಪರ್ಕ ನೀಡುತ್ತವೆ. 12 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆ ಪೂರೈಕೆದಾರರಿಗೆ ಫಿಕ್ಸೆಡ್ ಲೈನ್‌ಗಳ ಮೂಲಕ ಸಂಪರ್ಕ ಕಲ್ಪಿಸಲು ಸೂಚಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಶನಿವಾರ ತಿಳಿಸಿದ್ದಾರೆ.
ಮೂವರು ಸಚಿವರ ಆಗಮನ: ವಿಶೇಷ ಸ್ಥಾನಮಾನ ಹಿಂಪಡೆದ ಬಗ್ಗೆ ಮತ್ತು ಕೇಂದ್ರಾ ಡಳಿತ ಪ್ರದೇಶದಲ್ಲಿ ಎನ್‌ಡಿಎ ಸರಕಾರ ಕೈಗೊಳ್ಳಲಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಸ್ಥಳೀಯರಿಗೆ ವಿವರಣೆ ನೀಡಲು ಕೇಂದ್ರ ಸಚಿವರಾದ ಅರ್ಜು ಮೇಘಾÌಲ್, ಅಶ್ವಿನಿ ಚೌಬೆ ಮತ್ತು ಡಾ| ಜಿತೇಂದ್ರ ಸಿಂಗ್ ಶ್ರೀನಗರಕ್ಕೆ ಆಗಮಿಸಿದ್ದಾರೆ. 6 ದಿನಗಳ ಕಾಲ ಇವರು 60 ಸಭೆಗಳನ್ನು ನಡೆಸಲಿದ್ದಾರೆ.
ಅಭಿವೃದ್ಧಿಯ ಸಂದೇಶ ನೀಡಿ: ಕೇಂದ್ರಾ ಡಳಿತ ಪ್ರದೇಶಕ್ಕೆ ತೆರಳುವ ಮೊದಲು 36 ಸಚಿವರನ್ನು ಭೇಟಿಯಾಗಿದ್ದ ಪ್ರಧಾನಿ ಮೋದಿ ಯಾವ ಉದ್ದೇಶಕ್ಕಾಗಿ ಸರಕಾರ ಇಂಥ ನಿರ್ಧಾರ ಕೈಗೊಂಡಿತು ಎಂಬುದರ ಬಗ್ಗೆ ಸಮಗ್ರವಾಗಿ ಮನದಟ್ಟು ಮಾಡಬೇಕು. ಕೈಗೊಳ್ಳಲಿರುವ ಅಭಿವೃದ್ಧಿ ಯೋಜನೆಗಳು, ಕಣಿವೆ ಪ್ರದೇಶದ ಜನರ ಜತೆಗೆ ಸರಕಾರ ಯಾವತ್ತೂ ನಿಲ್ಲಲಿದೆ ಎಂದು ಅವರ ಮನೋಸ್ಥೈರ್ಯ ಬಲಪಡಿ ಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಹಮ್ ವಾಪಸ್ ಆಯೇಂಗೆ
ಕಾಶ್ಮೀರದ ಮೂಲ ನಿವಾಸಿಗಳಾಗಿ ರುವ ಕಾಶ್ಮೀರಿ ಪಂಡಿತರು ಸ್ವಂತ ನೆಲೆಗೆ ವಾಪಸಾಗುತ್ತೇವೆ ಎಂಬ ಅಭಿಯಾನ ವನ್ನು ಟ್ವಿಟರ್‌ನಲ್ಲಿ ಶುರು ಮಾಡಿದ್ದಾರೆ. “ಹಮ್ ವಾಪಸ್ ಆಯೇಂಗೇ'(ನಾವು ಮತ್ತೆ ಬರುವೆವು) ಎಂಬ ಹ್ಯಾಶ್‌ಟ್ಯಾಗ್‌ನಡಿ ವೀಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. 1990ರ ಜ.19ರಂದು ಕಣಿವೆ ರಾಜ್ಯದಲ್ಲಿ ಸಾಮೂಹಿಕ ಕಗ್ಗೊಲೆಗಳ ಬಳಿಕ ಕಾಶ್ಮೀರಿ ಪಂಡಿತರ ಕುಟುಂಬಗಳು ಅಲ್ಲಿಂದ ಹೊರಟು ದೇಶದ ವಿವಿಧ ಭಾಗಗಳಿಗೆ ಬಂದು ನೆಲೆಸಿತ್ತು. ಆ ಘಟನೆ ನಡೆದು ಶನಿವಾರಕ್ಕೆ 30 ವರ್ಷಗಳು ತುಂಬುವ ಹಿನ್ನೆಲೆಯಲ್ಲಿ ರಂಗಭೂಮಿ ಕಲಾವಿದ ಚಂದನ್ ಸಂಧು, ರೇಡಿಯೋ ಕಲಾ ವಿದೆ ಖುಷೂº ಮಟ್ಟೂ, ಪತ್ರಕರ್ತ ರಾಹುಲ್ ಪಂಡಿತ್ ಸೇರಿದಂತೆ ಹಲ ವರು ಈ ಕುರಿತು ಟ್ವೀಟ್ ಮಾಡಿದ್ದಾರೆ.