Advertisement
ಈ ಕುರಿತು ಟ್ವೀಟ್ ಮಾಡಿರುವ ಪ್ರೇಮ್, ನನ್ನ ಮುಂದಿನ ಚಿತ್ರ ಯಾವುದು ಸುದೀಪ್ ಅವರ ಜೊತೆಗೆ ಮತ್ತೆ ಯಾವಾಗ ಕೆಲಸ ಮಾಡುತ್ತೀರಿ ಎಂದು ಅನೇಕರು ಕೇಳುತ್ತಲೇ ಇದ್ದರು. ಸುದೀಪ್ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅವರ ಜೊತೆ ಮತ್ತೂಂದು ಚಿತ್ರ ಮಾಡುವುದನ್ನು ಅನೌನ್ಸ್ ಮಾಡುತ್ತಿದ್ದೇನೆ. ಈ ಹೊಸ ಚಿತ್ರದಲ್ಲಿ ಸುದೀಪ್ ಅವರು ಇದುವರೆಗೆ ಕಾಣಿಸಿಕೊಳ್ಳದ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಪ್ರೇಮ್ ಮಾಹಿತಿ ನೀಡಿದ್ದಾರೆ. ಈಗಾಗಲೇ ಸುದೀಪ್ ಹಾಗೂ ಪ್ರೇಮ್ “ದಿ ವಿಲನ್’ ಚಿತ್ರದಲ್ಲಿ ಒಂದಾಗಿದ್ದಾರೆ. ಆ ಚಿತ್ರದಲ್ಲೂ ಸುದೀಪ್ ಅವರ ಹೇರ್‌ಸ್ಟೈಲ್ ಗೆಟಪ್ ಭಿನ್ನವಾಗಿತ್ತು. ಸಾಕಷ್ಟು ಮಂದಿ ಅಭಿಮಾನಿಗಳು ಅದನ್ನು ಫಾಲೋ ಮಾಡಿದ್ದರು. ಈಗ ಹೊಸ ಚಿತ್ರದಲ್ಲೂ ಭಿನ್ನ ಗೆಟಪ್ ಇರುತ್ತದೆ ಎಂದು ಪ್ರೇಮ್ ಹೇಳುವ ಮೂಲಕ ಈಗಲೇ ಆಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ್ದಾರೆ.
Related Articles
Advertisement