ಹೊಸದಿಲ್ಲಿ: ಜಗತ್ತಿನ ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆ ಕಂಪೆನಿ ಸೋನಿ ಹೊಸ ಮಾದರಿಯ ಮಿರರ್‌ಲೆಸ್ ಕಾಂಪ್ಯಾಕ್ಟ್ ಕೆಮರಾವನ್ನು ಬಿಡುಗಡೆ ಮಾಡಿದೆ.
ಆರ್‌ಎಕ್ಸ್ ಸೀರೀಸ್‌ನ ಈ ಕೆಮರಾ ಆಲ್ಫಾ 9 ಆರ್‌ಎಕ್ಸ್100 7 ಹೆಸರು ಹೊಂದಿದ್ದು, ಈ ದರ್ಜೆಯಲ್ಲೇ ಅತಿ ಪ್ರೀಮಿಯಂ ಕೆಮರಾ ಆಗಿದೆ.
ಕೆಮರಾ ಸಣ್ಣದಾದರೂ ವೀಡಿಯೋಗ್ರಫಿ, ಫೋಟೋಗ್ರಫಿಗೆ ಇದು ಅತ್ಯುತ್ತವಾಗದ್ದಾಗಿದೆ. ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಚಿತ್ರಗಳನ್ನು, ವೀಡಿಯೋಗಳನ್ನು ತೆಗೆಯುತ್ತದೆ. ಎಫ್/2.8-4.5 ಅಪರ್ಚರ್ ಹೊಂದಿದೆ.
ಕೆಮರಾ 20.1 ಮೆಗಾಪಿಕ್ಸೆಲ್ ಸಿಎಮ್‌ಒಎಸ್ ಸೆನ್ಸರ್ ಹೊಂದಿದ್ದು, ಪ್ರತಿ ಸೆಕೆಂಡ್‌ಗೆ 60 ಎಎಫ್/ಎಇ ಮತ್ತು 20 ಎಫ್ಪಿಎಸ್ ಬರ್ಸ್ಡ್ ಶೂಟಿಂಗ್ ಮಾಡಬಹುದು. 357 ಪಿಡಿಎಎಫ್ ಫೋಕಸ್ ಪಾಯಿಂಟ್ಸ್, 425 ಕಾಂಟ್ರಾಸ್ಟ್ ಡಿಟೆನÒನ್ ಪಾಯಿಂಟ್‌ಗಳನ್ನು ಇದು ಗುರುತಿಸುತ್ತದೆ. 24-200 ಎಂ.ಎಂ. ಝೂಮ್ ಲೆನ್ಸ್ ಹೊಂದಿದೆ.
ಇದರೊಂದಿಗೆ 180 ಡಿಗ್ರಿ ಫ್ಲಿಪ್ ಸ್ಕ್ರೀನ್, 3.5ಎಂ.ಎಂ. ಮೈಕ್ರೋಫೋನ್ ಜಾಕ್ ಹೊಂದಿದೆ. ಇದರ ವೀಡಿಯೋ 4ಕೆ ಮತ್ತು ಎಸ್‌ಲಾಗ್ 3 ಎಚ್‌ಡಿಆರ್ ಮಾದರಿ ಹೊಂದಿದೆ. ಬೆಲೆ 96,990 ರೂ. ಆಗಿದೆ.