ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಡಿ.ವೈ. ಚಂದ್ರಚೂಡ್, ನ್ಯಾ| ಮೂ| ಪಿ.ಎಸ್. ನರಸಿಂಹ ಅವ ರಿದ್ದ ನ್ಯಾಯಪೀಠದ ಎದುರು, ದಿಲ್ಲಿ ಪೊಲೀಸರ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನ ರಲ್ ತುಷಾರ್ ಮೆಹ್ತಾ, “ಒಂದು ವೇಳೆ ನೇರವಾಗಿ ಎಫ್ಐಆರ್ ದಾಖಲಿಸಬೇಕು ಎಂದು ನ್ಯಾಯ ಪೀಠ ಹೇಳಿದರೆ, ಅದರಂತೆ ಎಫ್ಐಆರ್ ದಾಖಲಿಸಲಾಗುವುದು” ಎಂದು ಹೇಳಿದರು.
Advertisement
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, “ನಮ್ಮ ಬಳಿ ಪುರಾವೆಗಳಿಲ್ಲದಿದ್ದರೆ ನಾವು ಕೂಡ ಇನ್ನೊಂದು ಪಕ್ಷದ ವಾದವನ್ನು ಆಲಿಸದೆ ಏನೂ ಮಾಡುವುದಿಲ್ಲ. ನಿಮ್ಮ ಬಳಿ ಇರುವ ಪುರಾವೆಗಳನ್ನು ಶುಕ್ರವಾರ ಸಲ್ಲಿಸಿ” ಎಂದು ಸೂಚಿಸಿದರು. ಕುಸ್ತಿಪಟುಗಳ ಪರವಾಗಿ ವಾದ ಮಂಡಿಸಿದ ಕಪಿಲ್ ಸಿಬಲ್, ತಮ್ಮ ಬಳಿ ಹೆಚ್ಚುವರಿ ಪುರಾವೆಗಳಿದ್ದು, ಅದನ್ನು ನ್ಯಾಯಾ ಲಯಕ್ಕೆ ಸಲ್ಲಿಸುವುದಾಗಿ ತಿಳಿಸಿದರು.