Advertisement

ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ನ ಜವಾಬ್ದಾರಿಯುತ ಕೆಲಸವನ್ನು ಶ್ಲಾಘಿಸಿದ ಪ್ರೀತಿ ಜಿಂಟಾ

12:43 PM Feb 13, 2022 | Team Udayavani |

ಬೆಂಗಳೂರು: ಶನಿವಾರ ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2022 ಮೆಗಾ ಹರಾಜಿನ ಮೊದಲ ದಿನದಂದು ಮುಂಬೈ ಇಂಡಿಯನ್ಸ್ ತಂಡವನ್ನು ಬಾಲಿವುಡ್ ತಾರೆ ಮತ್ತು ಪಂಜಾಬ್ ಕಿಂಗ್ಸ್ ಸಹ-ಮಾಲಕಿ ಪ್ರೀತಿ ಜಿಂಟಾ ಹೊಗಳಿದರು.

Advertisement

ಸಾಮಾಜಿಕ ಜಾಲತಾಣ ಟ್ವಿಟರ್‌ ನಲ್ಲಿ ಪೋಸ್ಟ್ ಮಾಡಿದ, ಪ್ರೀತಿ ಜಿಂಟಾ, ಹರಾಜಿನಲ್ಲಿ ಕೋವಿಡ್-19 ಪ್ರೋಟೋಕಾಲ್‌ಗಳನ್ನು ಅನುಸರಿಸಿದ್ದಕ್ಕಾಗಿ ಮುಂಬೈ ತಂಡವನ್ನು ಶ್ಲಾಘಿಸಿದರು.

ಇದನ್ನೂ ಓದಿ:20 ಲಕ್ಷದಿಂದ 10 ಕೋಟಿ ರೂ.: ದಾಖಲೆ ಬರೆದ ವೇಗಿ ಆವೇಶ್ ಖಾನ್

ಮುಂಬೈ ಮಾಲಕಿ ನೀತಾ ಅಂಬಾನಿ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. “ಐಪಿಎಲ್ ಹರಾಜು ಟೇಬಲ್‌ನಲ್ಲಿ ಮುಂಬೈ ಇಂಡಿಯನ್ಸ್ ಕೋವಿಡ್ ನಿಯಮ ಪಾಲಿಸಿರುವುದನ್ನು ನೋಡಲು ಸಂತೋಷವಾಗಿದೆ” ಎಂದು ಜಿಂಟಾ ಶನಿವಾರ ಟ್ವೀಟ್‌ನಲ್ಲಿ ಬರೆದಿದ್ದಾರೆ. “ನೀತಾ ಅಂಬಾನಿಗೆ ಸುಂದರವಾದ ಕಣ್ಣುಗಳಿವೆ ಎಂದು ಒಪ್ಪಿಕೊಳ್ಳಬೇಕು” ಎಂದೂ ಜಿಂಟಾ ಹೇಳಿದ್ದಾರೆ.

ವೈಯಕ್ತಿಕ ಕಾರಣಗಳಿಂದ ಪ್ರೀತಿ ಜಿಂಟಾ ಅವರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ.

Advertisement

Advertisement

Udayavani is now on Telegram. Click here to join our channel and stay updated with the latest news.

Next