Advertisement
ಗಾಂಧಿ ಚೌಕ್ ನಲ್ಲಿ ಚರಂಡಿ ಮತ್ತು ಸೇತುವೆಯ ದುರಸ್ತಿ ಕಾರ್ಯ ಮೂವತ್ತು ಲಕ್ಷ₹ವೆಚ್ಚದಲ್ಲಿ ನಡೆಯುತ್ತಿದ್ದು ಕಳೆದ 45 ದಿನ ಗಳಿಂದ ವಿಳಂಬವಾಗಿ ಕಾಮಗಾರಿ ನಡೆಯುತ್ತಿದೆ ಈ ಕುರಿತು ಸ್ಥಳೀಯ ಜನರು ಮತ್ತು ಸುತ್ತಮುತ್ತಲಿನ ಅಂಗಡಿಗಳ ವ್ಯಾಪಾರಿಗಳು ಜಿಲ್ಲಾಡಳಿತಕ್ಕೆ ಮತ್ತು ನಗರ ಆಡಳಿತಕ್ಕೆ ದೂರು ನೀಡಿದ್ದು ಬುಧವಾರ ಚರಂಡಿಯ ಸೇತುವೆ ಆರ್ ಸಿಸಿ ಹಾಕುವ ಸಂದರ್ಭದಲ್ಲಿ ಸ್ಥಳಕ್ಕೆ ಅಭಿಯಂತರ ಗಂಗಾಧರ ಭೇಟಿ ನೀಡಿ ಪರಿಶೀಲನೆ ಮಾಡಿದರು.ಕಡಿಮೆ ಮರಳು ಮತ್ತು ಹೆಚ್ಚು ನೀರು ಬಳಕೆ ಮಾಡಿ ಕಾಮಗಾರಿ ನಿರ್ವಹಣೆ ಮಾಡುತ್ತಿದ್ದರಿಂದ ಆರ್ ಸಿಸಿ ಕಳಪೆಯಾಗಿರುವುದನ್ನು ಕಂಡು ಅಧಿಕಾರಿ ಕೋಪಗೊಂಡುಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದರು.ಈ ಮಧ್ಯೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಮತ್ತು ಗುಣಮಟ್ಟ ಪರಿಶೀಲನೆ ಮಾಡುತ್ತಿರುವ ಎನ್ ಜಿಒ ಅಭಿಯಂತರರನ್ನು ಗಂಗಾಧರ್ ತೀವ್ರ ತರಾಟೆಗೆ ತೆಗೆದುಕೊಂಡರು.ಎನ್ ಜಿಒ ಅಭಿಯಂತರರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಗಂಗಾಧರ್ ಮತ್ತು ಎನ್ ಜಿಒ ಅಧಿಕಾರಿ ವಿರುದ್ಧ ವಾಗ್ವಾದ ಜರುಗಿತು.ಈ ಮಧ್ಯೆ ಸುತ್ತಲಿನ ವ್ಯಾಪರಿಗಳು ಜನರು ಸ್ಥಳಕ್ಕೆ ಆಗಮಿಸಿ ಕಾಮಗಾರಿ ಕಳಪೆಯಾಗಿದ್ದು ಪುನಃ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.