Advertisement

ರಾಮದುರ್ಗಕ್ಕೆ ಮುಂಬೈನಿಂದ ಬಂದಿದ್ದ ಗರ್ಭಿಣಿಗೆ ಕೋವಿಡ್ ಪಾಸಿಟಿವ್

02:19 PM May 23, 2020 | keerthan |

ಬೆಳಗಾವಿ: ರಾಮದುರ್ಗ ತಾಲೂಕಿನ‌ ಶಿವಪೇಠೆ ಗ್ರಾಮಕ್ಕೆ ಮುಂಬೈನಿಂದ ಆಗಮಿಸಿದ್ದ 27 ವರ್ಷದ ಗರ್ಭಿಣಿಗೆ ಕೋವಿಡ್-19 ಸೋಂಕು ದೃಢವಾಗಿದೆ.

Advertisement

ಮುಂಬೈನಿಂದ ಬಂದಿದ್ದ ಗರ್ಭಿಣಿಯನ್ನು ರಾಮದುರ್ಗ ನಲ್ಲಿ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.  ಮೇ 17ರಂದು ಮಹಿಳೆ ಮುಂಬೈನಿಂದ ಆಗಮಿಸಿದ್ದು, ಕೂಡಲೇ ರಾಮದುರ್ಗದಲ್ಲಿ ತಪಾಸಣೆ ನಡೆಸಿ ಅಲ್ಲಿಯೇ ಕ್ವಾರಂಟೈನ್ ಮಾಡಿ ಇಡಲಾಗಿತ್ತು.

ಸದ್ಯ ಜಿಲ್ಲೆಯಲ್ಲಿ ಹೊಸ ಪಾಸಿಟಿವ್ ಕೇಸುಗಳು ಹೊರ ಬರುತ್ತಿರುವುದರಿಂದ ಆತಂಕ ಹೆಚ್ಚಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 121 ಜಿಲ್ಲೆಯ ಸೋಂಕಿತರು ಹಾಗೂ 8 ಜನ ಅನ್ಯ ರಾಜ್ಯದ (ಬಾಗಲಕೋಟೆ) ಸೋಂಕಿತರು ಬೆಳಗಾವಿಯಲ್ಲಿದ್ದಾರೆ. ಒಟ್ಟು 129 ಸೋಂಕಿತರ ಸಂಖ್ಯೆ ಹೆಚ್ಚಾದಂತಾಗಿದೆ.‌

ರಾಜ್ಯದಲ್ಲಿ ಇಂದು ಹೊಸ 196 ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1939ಕ್ಕೆ ಏರಿಕೆಯಾಗಿದೆ. 42 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇಬ್ಬರು ಸೋಂಕಿತರು ಕೋವಿಡ್-19 ಅಲ್ಲದ ಕಾರಣದಿಂದ ಮರಣಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next