Advertisement

ಗರ್ಭಿಣಿ ಪತ್ನಿಯೊಂದಿಗೆ 100 ಕಿ.ಮೀ. ನಡೆದ ಕಾರ್ಮಿಕ

10:11 AM Apr 01, 2020 | sudhir |

ಸಹ್ರಾನ್‌ಪುರ: ಕೋವಿಡ್ 19 ವೈರಸ್‌ಕಾರಣಕ್ಕೆ ದಿನಗೂಲಿ ಕಾರ್ಮಿಕರು ಕಿ.ಮೀ. ಗಟ್ಟಲೆ ಕಾಲ್ನಡಿಗೆಯಲ್ಲೇ ತೆರಳಿದ ಸುದ್ದಿ ಗೊತ್ತೇಇದೆ. ಉತ್ತರ ಪ್ರದೇಶದ ಕಾರ್ಮಿಕರ ಈ ಸಂಕಷ್ಟ ಇನ್ನೂ ಮುಂದುವರಿದಿದೆ. ಇಲ್ಲಿನ ಕಾರ್ಮಿಕ ದಂಪತಿ ವಾಕಿಲ್‌ ಮತ್ತು ಯಾಸ್ಮಿàನ್‌ ಎಂಬವರು ತಮ್ಮೂರಿಗೆ ಕಾಲ್ನಡಿಗೆಯಲ್ಲೇ ಹೊರಟಿದ್ದಾರೆ. ಅದರಲ್ಲೂಕಾರ್ಮಿಕ ಹೆಂಗಸು 8 ತಿಂಗಳ ಗರ್ಭಿಣಿಯಾಗಿದ್ದು ಗಂಡನೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.

Advertisement

ಸಹ್ರಾನ್‌ಪುರದಿಂದ ಬುಲಂದ್‌ಶೆಹರ್‌ಗೆ ಕಾಲ್ನಡಿಗೆಯಲ್ಲಿ ಹೊರಟಿದ್ದು 100 ಕಿ.ಮೀ. ಕ್ರಮಿಸಿದ್ದಾರೆ. ಅನ್ನಾಹಾರಗಳಿಲ್ಲದೆ ದಂಪತಿ ನಡೆದಿದ್ದು ಕೊನೆಗೆ ಇದು ಸ್ಥಳೀಯರ ಗಮನಕ್ಕೆ ಬಂದಿತು. ಮೇರs…ನಲ್ಲಿ ಅವರು ಹೆಜ್ಜೆ ಹಾಕುತ್ತಿದ್ದಂತೆ, ಸ್ಥಳೀಯರು ಇವರನ್ನು ಗಮನಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಕೊನೆಗೆ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಅವರ ಸಂಕಷ್ಟ ಬೆಳಕಿಗೆ ಬಂದಿತು. ಕೂಡಲೇ ಸ್ಥಳೀಯರು ಅವರಿಗೆ ಆಹಾರ ನೀಡಿ ಸಹಕರಿಸಿದರು. ಜತೆಗೆ ಸ್ವಲ್ಪ ಹಣ ನೀಡಿದ್ದಲ್ಲದೇ, ಬುಲಂದ್‌ಶೆಹರ್‌ನ ಸಾಯ್ನಾ ಎಂಬ ಊರಿಗೆ ಅವರನ್ನು ಬಿಡಲು ಆಂಬ್ಯುಲೆನ್ಸ್‌ ವ್ಯವಸ್ಥೆಯನ್ನೂ ಮಾಡಲಾಯಿತು.

ಯಾಸ್ಮಿàನ್‌ ಸಹ್ರಾನ್‌ಪುರದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಅದರ ಮಾಲಕ ಅವರಿಗೆ ಕೋಣೆಯೊಂದನ್ನು ನೀಡಿದ್ದನಂತೆ. ಆದರೆ ಲಾಕ್‌ಡೌನ್‌ಆಗುತ್ತಲೇ ಆತ ಅವರನ್ನು ಹೊರದಬ್ಬಿದ್ದು ಹಣವನ್ನೂ ಕೊಡದೆ ಊರಿಗೆ ಹೊಗುವಂತೆ ಹೇಳಿದ್ದ. ನಿರ್ವಾಹವಿಲ್ಲದೇ ಊರಿನತ್ತ ನಡೆಯಲು ನಿರ್ಧರಿಸಿದರು ಆ ದಂಪತಿ ಎನ್ನುತ್ತಾರೆ ಸ್ಥಳೀಯರು.

Advertisement

Udayavani is now on Telegram. Click here to join our channel and stay updated with the latest news.

Next