Advertisement

ವಸತಿ-ಆಹಾರವಿಲ್ಲದೆ 8ತಿಂಗಳ ಗರ್ಭಿಣಿ ಪತ್ನಿಯೊಂದಿಗೆ 100 ಕಿ.ಮೀ ನಡೆದ ವಲಸೆ ಕಾರ್ಮಿಕ

09:51 AM Mar 31, 2020 | Mithun PG |

ಮೀರತ್: ಲಾಕ್ ಡೌನ್ ಪರಿಣಾಮ ಊಟ-ವಸತಿಯಿಲ್ಲದೆ ವ್ಯಕ್ತಿಯೋರ್ವ ತನ್ನ ಎಂಟು ತಿಂಗಳ ಗರ್ಭಿಣಿ ಪತ್ನಿಯೊಂದಿಗೆ 100 ಕಿ. ಮೀ ನಡೆದುಕೊಂಡೇ ಕ್ರಮಿಸಿದ ಘಟನೆ ಸಹರನ್ ಪುರದಲ್ಲಿ ನಡೆದಿದೆ.

Advertisement

ಭಾರತದಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಲಕ್ಷಾಂತರ ವಲಸೆ ಕಾರ್ಮಿಕರು ಅನ್ನ, ನೀರಿಲ್ಲದೆ ಪರದಾಡುತ್ತಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ. ವಕಿಲ್ ಎಂಬ ವ್ಯಕ್ತಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ನಂತರ ಆತನ ಮಾಲಿಕ ಮನೆಯನ್ನು ಬಿಟ್ಟು ತೆರಳುವಂತೆ ಸೂಚಿಸಿದ್ದರು. ಮಾತ್ರವಲ್ಲದೆ ಯಾವುದೇ ಹಣವನ್ನು ಕೂಡ ನೀಡಿರಲಿಲ್ಲ.

ವಸತಿ, ಆಹಾರದ ವ್ಯವಸ್ಥೆಯಿಲ್ಲದೆ ವಕಿಲ್ ತನ್ನ ಎಂಟು ತಿಂಗಳ ಗರ್ಭಿಣಿ ಪತ್ನಿಯೊಂದಿಗೆ ಸಹರಾನ್ ಪುರದಿಂದ ತನ್ನ ಗ್ರಾಮಕ್ಕೆ ಗುರುವಾರ ಹೊರಟಿದ್ದಾನೆ. ಆದರೆ ದಾರಿಯಲ್ಲಿ ಯಾವುದೇ ವಾಹನಗಳು ಸಿಗದೆ ಮತ್ತು ಹೊಟೇಲ್ ಗಳು ಸಿಗದ ಕಾರಣ ಅನ್ನ, ಆಹಾರವಿಲ್ಲದೆ 100 ಕಿ. ಮೀ ಕ್ರಮಿಸಿದ್ದಾರೆ.

ಶನಿವಾರ ಈ ಇಬ್ಬರು  ಮೀರತ್‌ನ ಸೊಹ್ರಾಬ್ ಗೇಟ್ ಬಸ್ ನಿಲ್ದಾಣಕ್ಕೆ ಆಗಮಿಸಿದಾಗ ದಣಿದ ದಂಪತಿಗಳಾದ ವಕಿಲ್ ಮತ್ತು ಯಸ್ಮೀನ್ ಅವರನ್ನು ಸ್ಥಳೀಯ ನಿವಾಸಿಗಳಾದ ನವೀನ್ ಕುಮಾರ್ ಮತ್ತು ರವೀಂದ್ರ ಅವರು ಗುರುತಿಸಿ ನೌಚಂಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರೇಂಪಾಲ್ ಸಿಂಗ್ ಅವರಿಗೆ ಮಾಹಿತಿ ನೀಡಿದರು.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಣ ಮತ್ತು ಆಹಾರವನ್ನು ನೀಡಿ, ಆ್ಯಂಬುಲೆನ್ಸ್ ಮೂಲಕ ಸಹರಾನ್‌ಪುರದಿಂದ ಬುಲಂದ್‌ಶಹರ್‌ ಗೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.

Advertisement

ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ದೇಶದಲ್ಲಿ ಲಾಕ್‌ಡೌನ್ ಘೋಷಿಸಲಾಗಿದ್ದು, ಲಕ್ಷಾಂತರ ವಲಸೆ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ಮಾತ್ರವಲ್ಲದೆ  ಆಹಾರ-ವಸತಿಗಳಿಲ್ಲದ ಕಾರಣ  ಬೇರೆ ಯಾವುದೇ ಮಾರ್ಗಗಳಿಲ್ಲದ ನೂರಾರು ಕಿಲೋಮೀಟರ್ ದೂರದಲ್ಲಿರುವ ತಮ್ಮ ಹಳ್ಳಿಗಳಿಗೆ ನಡೆಯುತ್ತಿದ್ದಾರೆ.

ಲಾಕ್ ಡೌನ್ ಕಾರಣದಿಂದಾಗಿ ಸಾರ್ವಜನಿಕರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕ್ಷಮೆಯಾಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next