Advertisement

ಬೇಬಿ ಪಾಸಿಟಿವ್‌ : ಗರ್ಭಿಣಿ ನಕ್ಕರೆ, ಕಂದನಿಗೆ ಸಕ್ಕರೆ

03:59 PM May 30, 2019 | sudhir |

ನನ್ನವರ ಜೊತೆಗೆ ವಾಕಿಂಗ್‌ ಹೋಗುವಾಗ ಸಿಗುವ ಮಕ್ಕಳ ಬಟ್ಟೆ ಅಂಗಡಿ ಇತ್ತೀಚೆಗೆ ತುಂಬಾ ಆಕರ್ಷಿಸಲು ಶುರುಮಾಡಿದೆ. ಪುಟ್ಟ ಪುಟ್ಟ ಅಂಗಿ, ಪ್ಯಾಂಟು, ಫ್ರಾಕು, ಟೋಪಿ ನೋಡಿದಾಗ, ಯಾವಾಗ ನನ್ನ ಮುದ್ದು ಕಂದನಿಗೆ ಇದನ್ನೆಲ್ಲಾ ಹಾಕೋದು ಎಂಬ ಕಾತರ, ಪುಳಕ…

Advertisement

ನನ್ನೊಳಗೆ ಚಿಗುರೊಡೆದು ಮೃದುವಾಗಿ ಅರಳುತ್ತಿರುವ ಪುಟ್ಟಜೀವದ ಬಗ್ಗೆ ನೆನೆಸಿಕೊಂಡಾಗ ಕಣ್ತುಂಬಿ ಬರುತ್ತದೆ. ನನಗಿಷ್ಟವಾದ ಪಾನಿಪೂರಿ, ಮಸಾಲಪೂರಿ, ಬಜ್ಜಿ ಇತ್ಯಾದಿಗಳ ಸ್ಥಾನವನ್ನು ದಾಳಿಂಬೆ, ಸೇಬು, ಕಿತ್ತಳೆಗಳು ತುಂಬುತ್ತಿವೆ. ಹಾಗಂತ ನನಗೇನೂ ಬೇಜಾರಿಲ್ಲ. ಬದಲಿಗೆ ಖುಷಿಯೇ ಹೆಚ್ಚು. ನನ್ನ ಮುದ್ದು ಕಂದಮ್ಮನಿಗೋಸ್ಕರ ನಾಲಗೆ ಚಪಲವನ್ನು ಒಂದಷ್ಟು ತಿಂಗಳ ಮಟ್ಟಿಗಾದರೂ ತ್ಯಾಗ ಮಾಡೋಕಾಗಲ್ವಾ? ನನ್ನವರ ಜೊತೆಗೆ ವಾಕಿಂಗ್‌ ಹೋಗುವಾಗ ಸಿಗುವ ಮಕ್ಕಳ ಬಟ್ಟೆ ಅಂಗಡಿ ಇತ್ತೀಚೆಗೆ ತುಂಬಾ ಆಕರ್ಷಿಸಲು ಶುರು ಮಾಡಿದೆ. ಪುಟ್ಟ ಪುಟ್ಟ ಅಂಗಿ, ಪ್ಯಾಂಟು, ಫ್ರಾಕು, ಟೋಪಿ ನೋಡಿದಾಗ, ಯಾವಾಗ ನನ್ನ ಮುದ್ದು ಕಂದನಿಗೆ ಇದನ್ನೆಲ್ಲಾ ಹಾಕೋದು ಎಂಬ ಕಾತರ, ಪುಳಕ.

ಇವೆಲ್ಲ ಬರೀ ನನ್ನೊಬ್ಬಳ ಮನಸ್ಥಿತಿಯಲ್ಲ. ತಾಯಂದಿರಾಗುವ ಎಲ್ಲರ ಮನಸ್ಥಿತಿ. ಗರ್ಭಿಣಿ ಹೀಗೆÇÉಾ ಕನಸು ಕಾಣುತ್ತಿರುವ ಸಂದರ್ಭದಲ್ಲಿ, ಆಕೆಯ ಯಜಮಾನರು ಮತ್ತು ತಾಯ್ತಂದೆಯರು, ಗರ್ಭಿಣಿಯ ಮಾನಸಿಕ ಆರೋಗ್ಯದ ಕುರಿತೂ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕು. ಒಳ್ಳೆಯ ಆಹಾರ ಪದ್ಧತಿಯೊಂದಿಗೆ, ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಬೇಕಾದ ಉತ್ತಮ ಜೀವನಶೈಲಿಯನ್ನು ಗರ್ಭಿಣಿಗೆ ಅಭ್ಯಾಸ ಮಾಡಿಸಬೇಕು.

ದೈಹಿಕ ಆರೋಗ್ಯಕ್ಕೆ
– ವಾಕಿಂಗ್‌, ಸರಳ ವ್ಯಾಯಾಮ, ಧ್ಯಾನ
– ತಾಜಾ ಆಹಾರ ಸೇವನೆ (ಹಣ್ಣು, ತರಕಾರಿ, ಡ್ರೈಫ‌ೂÅಟ್ಸ್‌, ಸಿರಿಧಾನ್ಯಗಳು)

ಮಾನಸಿಕ ಆರೋಗ್ಯಕ್ಕೆ
ಒಳ್ಳೆಯ ಅಭಿರುಚಿಗಳನ್ನು ರೂಢಿಸಿಕೊಳ್ಳುವುದು. ಉದಾಹರಣೆಗೆ: ಸಂಗೀತ, ಪೇಂಟಿಂಗ್‌, ಒಳ್ಳೆಯ ಪುಸ್ತಕಗಳನ್ನು ಓದುವುದು, ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆಯುವುದು ಉತ್ತಮ.

Advertisement

ಮನೆಯವರಿಗೆ ಕಿವಿಮಾತು
ಗರ್ಭಿಣಿಯ ಮಾನಸಿಕ ಆರೋಗ್ಯಕ್ಕೂ , ಮಗುವಿನ ದೈಹಿಕ ಬೆಳವಣಿಗೆಗೂ ನೇರ ನಂಟಿದೆ. ತಾಯಂದಿರ ನಕಾರಾತ್ಮಕ ಭಾವನೆಗಳು, ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕುಂದುಂಟು ಮಾಡುತ್ತವೆ. ಹಾಗಾಗಿ, ಜಗಳ, ಹಿಂಸಾತ್ಮಕ ದೃಶ್ಯಗಳು, ತೀವ್ರ ನೋವುಂಟು ಮಾಡುವ ಸಂಭಾಷಣೆಗಳು, ಅನವಶ್ಯಕ ಗದ್ದಲದಿಂದ ಗರ್ಭಿಣಿ ದೂರವಿರುವಂತೆ ನೋಡಿಕೊಳ್ಳಬೇಕು. ಆಕೆ ಸದಾ ಹಿತನುಡಿಗಳನ್ನು ಕೇಳುತ್ತಾ, ನಗುನಗುತ್ತ ಇರುವಂಥ ವಾತಾವರಣ ರೂಪಿಸಬೇಕು.

ಹೀಗಾಗದಂತೆ ನೋಡ್ಕೊಳ್ಳಿ…
ಗರ್ಭಿಣಿಯರಲ್ಲಿ ಈ ಬದಲಾವಣೆ ಕಾಣಿಸಿದರೆ, ಸೂಕ್ತ ಚಿಕಿತ್ಸೆ ಕೊಡಿಸುವುದು ಒಳಿತು.
– ಆಹಾರ ಸೇವನೆಯಲ್ಲಿ ತೀವ್ರ ಏರುಪೇರು
– ತೀವ್ರ ದುಃಖ, ಆತಂಕ
– ಅತಿ ಹೆಚ್ಚು ಅಥವಾ ಅತಿ ಕಡಿಮೆ ನಿದ್ರೆ
– ನಿರಾಸಕ್ತಿ, ವಿನಾಕಾರಣ ಆತಂಕ

– ಡಾ. ಸುಹಾಸಿನಿ ರಾಮ್‌

Advertisement

Udayavani is now on Telegram. Click here to join our channel and stay updated with the latest news.

Next