Advertisement

‘ನಾನು ಗರ್ಭಿಣಿ, ಹೊಟ್ಟೆ ನೋಯುತ್ತಿದೆ ಎಂದರೂ ಬಿಡುತ್ತಿಲ್ಲ’ಪೊಲೀಸರ ವಿರುದ್ಧ ಮಹಿಳೆ ಸಿಟ್ಟು

04:59 PM May 28, 2021 | Team Udayavani |

ಮೈಸೂರು: ಕೋವಿಡ್ ಲಾಕ್ ಡೌನ್ ಕಾರಣದಿಂದ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡುವವರನ್ನು ಪೊಲೀಸರು ವಿಚಾರಿಸಿ ದಂಡ ಹಾಕುತ್ತಿದ್ದಾರೆ. ಹಲವು ಕಡೆ ವಾಹನ ಜಪ್ತಿ ಮಾಡಿದ ಪ್ರಸಂಗವೂ ನಡೆದಿದೆ. ಬೆಳಗ್ಗೆ 10 ಗಂಟೆಯ ಬಳಿಕ ವೈದ್ಯಕೀಯ ತುರ್ತು ಹೊರತುಪಡಿಸಿ ಯಾರೂ ತಿರುಗಾಡುವಂತಿಲ್ಲ. ಇದೇ ರೀತಿ ಮಹಿಳೆಯೋರ್ವರು ತಾನು ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದು ಹೇಳಿದರೂ ಬಿಡದ ಕಾರಣ ಪೊಲೀಸರ ವಿರುದ್ಧವೇ ಸಿಟ್ಟಾದ ಘಟನೆ ಮೈಸೂರಿನಲ್ಲಿ ನಡೆದಿದೆ.

Advertisement

ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಈ ಘಟನೆ ನಡೆದಿದೆ. ಮಹಿಳೆಯು ಗರ್ಭಿಣಿಯಾಗಿದ್ದು, ಸಂಬಂಧಿಯೊಡನೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಪೊಲೀಸರು ಬೈಕ್ ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ.

ನಾನು ಗರ್ಭಿಣಿ, ಹೊಟ್ಟೆ ನೋಯುತ್ತಿದೆ, ಆಸ್ಪತ್ರೆಗೂ ಹೋಗುತ್ತಿದ್ದೆನೆ ಎಂದು ಹೇಳಿದರೂ ಬಿಡುತ್ತಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಇತರ ಪೊಲೀಸರು ಸರಿಯಾಗಿ ನಡೆದುಕೊಂಡರೂ ಲೇಡಿ ಪೊಲೀಸ್ ತಮ್ಮ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆಂದು ಮಹಿಳೆ ಕಣ್ಣೀರಿಟ್ಟರು.

ಒಂದು ಹಂತದಲ್ಲಿ ಗರ್ಭಿಣಿ ಹಾಗೂ ಮಹಿಳಾ ಪೊಲೀಸ್ ಕೈಕೈ ಮಿಲಾಯಿಸುವ ಹಂತಕ್ಕೆ ಹೋದರು. ಕೊನೆಗೆ ಮಹಿಳೆಯನ್ನು ಸಮಾಧಾನಪಡಿಸಿದ ಪೊಲೀಸರು ಕಳುಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next