Advertisement

ಕುಡಿಯುವ ನೀರು ಒದಗಿಸಲು ಆದ್ಯತೆ: ಶಾಸಕಿ ಅನಿತಾ

11:43 AM Nov 28, 2020 | Suhan S |

ಕನಕಪುರ: ವಿವಿಧ ಇಲಾಖೆಯ ಅನುದಾನದಿಂದ ಮೂಲ ಸೌಕರ್ಯ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಶಾಸಕಿ ಅನಿತಾಕುಮಾರಸ್ವಾಮಿ ಹೇಳಿದರು.

Advertisement

ತಾಲೂಕಿನ ಮರಳವಾಡಿ ಹೋಬಳಿಯ ತೋಕ ಸಂದ್ರ ಮತ್ತು ಟಿ.ಹೊಸಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಂದು-ಕೊರತೆ ಮತ್ತುಅಹವಾಲು ಸ್ವೀಕರಿಸಲು ಶುಕ್ರವಾರ ಪ್ರವಾಸ ಕೈಗೊಂಡಿದ್ದ ಅವರು ಟಿ. ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಬಳೆ ಚನ್ನವಲಸೆ ಗ್ರಾಮದಲ್ಲಿ ಕಾರ್ಮಿಕಇಲಾಖೆಯಿಂದ ಬಂದಿದ್ದ ಆಹಾರದ ಕಿಟ್‌ಗಳನ್ನು ಫ‌ಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.

ಆರ್‌ಡಿಪಿಆರ್‌, ಟಾಸ್ಕ್ ಫೋರ್ಸ್‌, ಪಿಡ್ಲ್ಯೂಡಿ ಸೇರಿದಂತೆ ವಿವಿಧ ಇಲಾಖೆಯ ಅನುದಾನದಲ್ಲಿ ಅಭಿವೃದ್ಧಿಕಾರ್ಯಕೈಗೊಳ್ಳಲಾಗಿದೆ.ಕಳೆದ ಜನವರಿಯಲ್ಲೇ ಈ ಭಾಗದ ಜನರ ಕುಂದು-ಕೊರತೆ ಸಭೆ ಗಳನ್ನು ಮಾಡಿ ಅವರ ಸಮಸ್ಯೆ ಬಗೆಹರಿಸಲು ತಿರ್ಮಾನಿಸಲಾಗಿತ್ತು ಎಂದರು.

ಆದರೆ ರಾಜ್ಯದಲ್ಲಿ ಕೋವಿಡ್ ತೀವ್ರವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರ ಸಲಹೆ ಮೇರೆಗೆ ಕ್ಷೇತ್ರಕ್ಕೆಭೇಟಿ ನೀಡಿರಲಿಲ್ಲ, ಆದರೂ ಕೋವಿಡ್ ಸಂದರ್ಭದಲ್ಲಿ ಈ ಭಾಗದಲ್ಲಿ ಆಹಾರದ ಕಿಟ್‌ಗಳು ಮತ್ತು ಪ್ರತಿನಿತ್ಯ ಸಂಕಷ್ಟದಲ್ಲಿದ್ದವರಿಗೆ ಉಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈಗ ಕೋವಿಡ್ ಹಾವಳಿ ಕೊಂಚ ತಗ್ಗಿದ ಹಿನ್ನೆಲೆಯಲ್ಲಿ ಕ್ಷೇತ್ರದ ಜನರ ಕುಂದು-ಕೊರತೆ ಆಲಿಸಲು ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

ಮುಂದೆ ಬೇಸಿಗೆ ಆರಂಭವಾಗಲಿದ್ದು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಕೊರತೆ ಇರುವ ಗ್ರಾಮಗಳನ್ನು ಗುರುತಿಸಿ ಕೊಳವೆ ಬಾವಿ ಗಳನ್ನು ಕೊರೆಯಿಸಲು ಅಧಿಕಾರಿಗಳು ಕ್ರಮಕೈ ಗೊಳ್ಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಅವಶ್ಯವಿರುವ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಕಗಳನ್ನು ಸ್ಥಾಪಿಸಲು ಚಾಲನೆ ನೀಡಲಾಗಿದೆ ಎಂದರು.

Advertisement

ಕುಂದು-ಕೊರತೆ ಅಹವಾಲು ಸ್ವೀಕರಿಸಲು ಟಿ.ಹೊಸಹಳ್ಳಿ ಗ್ರಾಮಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಭೇಟಿ ನೀಡಿದಾಗ ಗ್ರಾಮದ ಜನರು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದೇವೆ. ಹಾರೋಹಳ್ಳಿಯಿಂದ ಟಿ.ಹೊಸಹಳ್ಳಿ ಮತ್ತು ಮಡುವಣಗೆರೆ ಮಾರ್ಗವಾಗಿ ಕನಕಪುರಕ್ಕೆ ಸಾರಿಗೆ ವ್ಯವಸ್ಥೆಕಲ್ಪಿಸಬೇಕು ಎಂದು ಪಟ್ಟು ಹಿಡಿದರು.

ಉಳಿದಂತೆ ಕೆಲವು ಗ್ರಾಮಗಳಲ್ಲಿ ಪಿಂಚಣಿ ಯೋಜನೆ, ಸಾಗುವಳಿ ಚೀಟಿ, ಕುಡಿಯುವ ನೀರು ರಸ್ತೆ ಚರಂಡಿ, ಬೀದಿ ದೀಪ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಸಲ್ಲಿಸಿದರು. ಅಹವಾಲು ಸ್ವೀಕರಿಸಿದ ಶಾಸಕರು ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು.

ಜೆಡಿಎಸ್‌ ಮುಖಂಡ ಉಮೇಶ್‌, ಜಿಪಂ ಮಾಜಿ ಸದಸ್ಯ ಭುಜಂಗಯ್ಯ, ಮುಖಂಡರಾದ ಮರಳ ವಾಡಿ ರಾಮಕೃಷ್ಣ, ಪ್ರದೀಪ್‌, ಮಹೇಶ್‌, ಸಿದ್ದ ರಾಜು ಸೇರಿದಂತೆ ಜೆಡಿಎಸ್‌ ಮುಖಂಡರು ಕಾರ್ಯಕರ್ತರು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next