Advertisement
ನಗರಕ್ಕೆ ನೀರೊದಗಿಸುವ ಕಲ್ಲುಮುಟ್ಲು ಪಂಪ್ ಹೌಸ್ ಬಳಿ ಮರಳು ಕಟ್ಟದ ನೀರು ಸಂಗ್ರಹ ಸ್ಥಳ ಪರಿಶೀಲಿಸಿ, ವಾರ್ಡ್‌ಗಳಿಗೆ ಭೇಟಿ ನೀಡಿ ಅವರು ಮಾತನಾಡಿ ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಲವು ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಸುಳ್ಯ ನ.ಪಂ.ಮೇಲ್ದರ್ಜೆಗೆ ಇಲ್ಲಿನ ಶಾಸಕರು, ಆಡಳಿತ ಒತ್ತಡ ಹೇರಲಿಲ್ಲ. ಈ ಬಾರಿ ನ.ಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿದಲ್ಲಿ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಆದ್ಯತೆ ನೀಡುವುದಾಗಿ ಅವರು ನುಡಿದರು.
ಹದಿಮೂರು ವರ್ಷಗಳಿಂದ ನಗರಾಡ ಳಿತದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಆಡಳಿತ ನಗರದಲ್ಲಿ ಶಾಶ್ವತ ನೀರಿನ ಯೋಜನೆ ಅನುಷ್ಠಾನಕ್ಕೆ ಯಾವುದೇ ಪ್ರಯತ್ನ ಮಾಡದ ಕಾರಣ ಜನರು ಕಲುಷಿತ ನೀರು ಉಪಯೋಗಿಸುವ ಸ್ಥಿತಿ ಉಂಟಾಗಿದೆ. ಜನರ ಅಗತ್ಯಗಳಿಗೆ ಸ್ಪಂದಿಸಬೇಕಾದ ಜವಾಬ್ದಾರಿಯನ್ನು ಬಿಜೆಪಿ ಮರೆತಿದೆ ಅನ್ನುವುದಕ್ಕೆ ನೀರು ಪೂರೈಕೆಯಲ್ಲಿ ತೋರಿದ ನಿರ್ಲಕ್ಷ್ಯವೇ ಉದಾಹರಣೆ ಎಂದು ರೈ ಹೇಳಿದರು. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡುತ್ತೇವೆ. ಪಯಸ್ವಿನಿ ನದಿಗೆ ವೆಂಟೆಡ್ ಡ್ಯಾಂ, ಶುದ್ಧೀಕರಣ ಘಟಕ ಸ್ಥಾಪನೆಗೆ ಒತ್ತು ನೀಡಲಾಗುವುದು ಎಂದರು. ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ, ಅಲ್ಪಸಂಖ್ಯಾಕ ಘಟಕದ ಜಿಲಾಧ್ಯಕ್ಷ ಎನ್.ಎಸ್. ಕರೀಂ, ಮುಖಂಡರಾದ ಸಂಶುದ್ದಿನ್ ಎನ್., ಜಿ.ಕೆ. ಹಮೀದ್, ಸಿದ್ದಿಕ್ ಕೊಕ್ಕೊ, ಶಾಫಿ ಕುತ್ತಮೊಟ್ಟೆ, ಲಕ್ಷ್ಮಣ ಶೆಣೈ ಉಪಸ್ಥಿತರಿದ್ದರು.