ಬೇಕಾಗುವ ಸಾಮಗ್ರಿ: ಹಾಲು- 3/4 ಕಪ್, ಚಾಕೋಲೇಟ್ ಸಿರಪ್-1/4 ಕಪ್, ವೆನಿಲ್ಲಾ ಐಸ್‌ಕ್ರೀಂ- 1/2 ಕಪ್
ಮಾಡುವ ವಿಧಾನ: ಹಾಲು ಹಾಗೂ ಚಾಕೋಲೇಟ್ ಸಿರಪ್ ಅನ್ನು ಮಿಕ್ಸರ್‌ನಲ್ಲಿ ಹಾಕಿ ರುಬ್ಬಿ. ನಂತರ ಐಸ್‌ಕ್ರೀಂ ಹಾಕಿ ಪುನಃ ಐದು ಸೆಕೆಂಡ್‌ಗಳ ಕಾಲ ರುಬ್ಬಿ, ಗ್ಲಾಸ್‌ಗೆ ಸುರಿದು ತಕ್ಷಣ ತಿನ್ನಲು ಕೊಡಿ.
Advertisement
2. ಪಂಪ್‌ಕಿನ್ ಪೈ ಮಿಲ್ಕ್ಶೇಕ್ಬೇಕಾಗುವ ಸಾಮಗ್ರಿ: ಐಸ್‌ಕ್ರೀಂ- 2 ಕಪ್, ಹಾಲು- 1/2 ಕಪ್, ಕುಂಬಳಕಾಯಿ ರಸ- 1/4 ಕಪ್, 8 ರಿಂದ 10- ಕತ್ತರಿಸಿ, ಬೇಯಿಸಿದ ಕುಂಬಳಕಾಯಿ ತುಂಡುಗಳು.
ಮಾಡುವ ವಿಧಾನ: ಮೊದಲು ಐಸ್‌ಕ್ರೀಂ, ಹಾಲು, ಕುಂಬಳಕಾಯಿ ತುಂಡುಗಳನ್ನು ಮಿಕ್ಸರ್‌ಗೆ ಹಾಕಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಕುಂಬಳಕಾಯಿ ರಸ ಸೇರಿಸಿ ಪುನಃ ರಬ್ಬಬೇಕು. ನಂತರ ಕಪ್‌ಗ್ಳಿಗೆ ಹಾಕಿ ಮೇಲೆ ಐಸ್‌ಕ್ರೀಂ ಹಾಕಿ. ಬೇಯಿಸಿದ ಪಂಪ್‌ಕಿನ್‌ನಿಂದ ಗಾರ್ನಿಷ್ ಮಾಡಿ ತಕ್ಷಣ ಸರ್ವ್ ಮಾಡಿ.
ಬೇಕಾಗುವ ಸಾಮಗ್ರಿ: ಸೇಬು ಹಣ್ಣಿನ ತುಂಡು- 9 ರಿಂದ 10, ಐಸ್‌ಕ್ರೀಂ- 2 ಕಪ್, ಏಲಕ್ಕಿ ಪುಡಿ- ಸ್ವಲ್ಪ, ಹಾಲು- 1/4 ಕಪ್.
ಮಾಡುವ ವಿಧಾನ: ಮೊದಲು ಮಿಕ್ಸರ್‌ಗೆ ಸೇಬು ಹಣ್ಣಿನ ತುಂಡು ಮತ್ತು ಹಾಲು ಹಾಕಿ ರುಬ್ಬಿ. ನಂತರ ಐಸ್‌ಕ್ರೀಂ ಬೆರೆಸಿ. ಪುನಃ ರುಬ್ಬಿ, ಏಲಕ್ಕಿ ಪುಡಿ ಬೆರೆಸಿ ಸವಿಯಲು ಕೊಡಿ. 4. ಓರಿಯೋ ಮಿಲ್ಕ್ಶೇಕ್
ಬೇಕಾಗುವ ಸಾಮಗ್ರಿ: ಓರಿಯೋ ಬಿಸ್ಕೆಟ್ಸ್- 8 ರಿಂದ 9, ಚಾಕ್ಲೆಟ್ ಸಿರಪ್- 4 ಚಮಚ, ಹಾಲು- 1 ಕಪ್, ವೆನಿಲ್ಲ ಐಸ್‌ಕ್ರೀಂ- 2 ಕಪ್.
ಮಾಡುವ ವಿಧಾನ: ಮೊದಲು 1 ಚಮಚ ಚಾಕ್ಲೆಟ್ ಸಿರಪ್ ಅನ್ನು 4 ಗ್ಲಾಸ್‌ಗಳಿಗೆ ಹಾಕಬೇಕು. ನಂತರ ಇದರ ಮೇಲೆ ಪೀಸ್ ಮಾಡಿದ ಓರಿಯೋ ಬಿಸ್ಕೆಟ್ ಅನ್ನು ಹಾಕಬೇಕು. ನಂತರ ಉಳಿದ ಓರಿಯೋ ಬಿಸ್ಕೆಟ್ ಅನ್ನು ಮಿಕ್ಸರ್‌ನಲ್ಲಿ ಹಾಲಿನೊಂದಿಗೆ ಹಾಕಿ ರುಬ್ಬಿಕೊಳ್ಳಿ. ಐಸ್‌ಕ್ರೀಂ ಹಾಕಿ ಪುನಃ ರುಬ್ಬಬೇಕು.
Related Articles
ಬೇಕಾಗುವ ಸಾಮಗ್ರಿ: ವೆನಿಲ್ಲಾ ಐಸ್‌ಕ್ರೀಂ- 2 ಕಪ್, ವೆನಿಲ್ಲಾ- 2 ಚಮಚ, ಹಾಲು- 1 ಕಪ್.
ಮಾಡುವ ವಿಧಾನ: ಮಿಕ್ಸರ್‌ಗೆ ವೆನಿಲ್ಲಾ ಐಸ್‌ಕ್ರೀಂ ಹಾಗೂ ಹಾಲು ಸೇರಿಸಿ ರುಬ್ಬಿ, ತಕ್ಷಣ ಸವಿಯಲು ಕೊಡಿ.
Advertisement
6. ಬನಾನಾ ಮಿಲ್ಕ್ಶೇಕ್ಬೇಕಾಗುವ ಸಾಮಗ್ರಿ: ಬಾಳೆಹಣ್ಣು- 2, ಹಾಲು- 1 ಕಪ್, ಕಂಡೆನ್ಸ್‌ಡ್ ಮಿಲ್ಕ್- 1/4 ಕಪ್, ಬಾದಾಮಿ (ನೆನೆಸಿದ್ದು)- 8 ರಿಂದ 10, ಐಸ್‌ಕ್ರೀಂ- 1 ಕಪ್.
ಮಾಡುವ ವಿಧಾನ: ಬಾಳೆಹಣ್ಣು ಮತ್ತು ನೆನೆಸಿದ ಬಾದಾಮಿಯನ್ನು ಮಿಕ್ಸರ್‌ಗೆ ಹಾಕಿ ರುಬ್ಬಿಕೊಂಡು ನಂತರ ಹಾಲು, ಕಂಡೆನ್ಸ್‌ಡ್ ಮಿಲ್ಕ್ ಸೇರಿಸಿ ಪುನಃ ರುಬ್ಬಿ, ಗ್ಲಾಸ್‌ಗಳಿಗೆ ಸುರಿದು ಐಸ್‌ಕ್ರೀಂ ಸೇರಿಸಿ ಸರ್ವ್ ಮಾಡಿ. 7. ಜಿಂಜರ್ ಸ್ಪೈಸ್
ಬೇಕಾಗುವ ಸಾಮಗ್ರಿಗಳು: ಐಸ್‌ಕ್ರೀಂ- 1 ಕಪ್, ಹಾಲು- 1/4 ಕಪ್, ಶುಂಠಿ ಪೇಸ್ಟ್- 1/4 ಚಮಚ .
ಮಾಡುವ ವಿಧಾನ: ಐಸ್‌ಕ್ರೀಂ ಮತ್ತು ಶುಂಠಿ ಪೇಸ್ಟ್ ಅನ್ನು ಬೆರೆಸಿ, ರುಬ್ಬಿಕೊಂಡು ಇದಕ್ಕೆ ಹಾಲು ಸೇರಿಸಿ ಕೆಲ ಕಾಲ ಫ್ರಿಡ್ಜ್ನಲ್ಲಿಡಿ. ನಂತರ ಸೇವಿಸಿದರೆ ಬಲು ರುಚಿಕರ. 8. ಡೇಟ್ಸ್ ಬಟರ್ ಶೇಕ್
ಬೇಕಾಗುವ ಸಾಮಗ್ರಿ: ಖರ್ಜೂರ- 8 ರಿಂದ 10, ಮೊಸರು- 1/2 ಕಪ್, ಲೆಮನ್ ಜ್ಯೂಸ್- 1/2 ಚಮಚ, ಐಸ್‌ಕ್ರೀಂ- 1/4 ಕಪ್.
ಮಾಡುವ ವಿಧಾನ: ಮೊದಲು ಖರ್ಜೂರವನ್ನು ಬಿಸಿ ನೀರಿನಲ್ಲಿ ನೆನೆಸಿ, ಅನಂತರ ಮೆತ್ತಗಾಗುವವರೆಗೂ ಬೇಯಿಸಬೇಕು. ನಂತರ ಇದನ್ನು ಮಿಕ್ಸರ್‌ನಲ್ಲಿ ಮೊಸರಿನೊಂದಿಗೆ ಬೆರೆಸಿ, ರುಬ್ಬಬೇಕು. ಇದಕ್ಕೆ ಐಸ್‌ಕ್ರೀಂ ಮತ್ತು ಲೆಮನ್ ಜ್ಯೂಸ್ ಸೇರಿಸಿದರೆ ರುಚಿರುಚಿಯಾದ ಡೇಟ್ಸ್ ಬಟರ್‌ಶೇಕ್ ರೆಡಿ. ಭಾಗ್ಯ ನಂಜುಂಡಸ್ವಾಮಿ, ನರಸಿಂಹರಾಜಪುರ