Advertisement

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ

03:25 PM Sep 17, 2018 | Team Udayavani |

ಯಾದಗಿರಿ: ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಹೆಚ್ಚಿನ ಆದ್ಯೆತೆ ನೀಡುವುದಾಗಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು. ವಡಗೇರಾ ತಾಲೂಕಿನ ಗುಲಸರಂ ಗ್ರಾಮದಲ್ಲಿ ಕರ್ನಾಟಕ
ಗ್ರಾಮೀಣ ರಸ್ತೆ ಅಭಿವೃದ್ಧಿ ಇಲಾಖೆ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಗುಲಸರಂ-ಮಳ್ಳಳ್ಳಿ ಹಾಗೂ ಹುಲ್ಕಲ್‌
(ಜೆ)-ಗುಲಸರಂ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗೆ ಅಡಿಗಲ್ಲು ಸಮಾರಂಭವನ್ನು ಜ್ಯೋತಿ ಬೆಳಗಿ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಗುತ್ತಿಗೆದಾರರು ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಬೇಕು ಮತ್ತು ಡಾಂಬರ್‌ ರಸ್ತೆಗಳು ಹೆಚ್ಚಿನ ಬಾಳಿಕೆ ಬರುವಂತೆ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದರು. ಎಸ್‌ಡಿಪಿ ವಿಶೇಷ ಅಭಿವೃದ್ಧಿ ಯೋಜನೆ ಅಡಿ ಅಂದಾಜು ಸುಮಾರು 1 ಕೋಟಿ 23 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಗೊಂಡಿದ್ದು, ಯಾದಗಿರಿ ಮತಕ್ಷೇತ್ರದ ವ್ಯಾಪ್ತಿಯ ಹದಗೆಟ್ಟಿರುವ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಿ ಡಾಂಬರೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
 
ಎಇಇ ಎಸ್‌.ಕೆ. ಚಿಲ್ಲರಗಿ, ಎಇ ಶಿವಾಜಿ, ಜಿಪಂ ಸದಸ್ಯರಾದ ಅಶೋಕರೆಡ್ಡಿ ಗೋನಾಲ, ಭೀಮರೆಡ್ಡಿ ಕೂಲೂರ, ತಾಪಂ ಸದಸ್ಯೆ ಮಲ್ಲಮ್ಮ, ಯಾದಗಿರಿ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮಲ್ಲಣಗೌಡ ಹತ್ತಿಕುಣಿ, ಎಪಿಎಂಸಿ ಸದಸ್ಯ ಸಂತೋಷ ನಿರ್ಮಲಕರ್‌, ಜಿಪಂ ಮಾಜಿ ಸದಸ್ಯರಾದ ಶ್ರೀನಿವಾಸರೆಡ್ಡಿ ಚೆನ್ನೂರ, ಸಿದ್ದಣಗೌಡ ಕಾಡಂನೋರ್‌, ದಂಡಪ್ಪಗೌಡ, ಚೆನ್ನುಗೌಡ ಬಿಳಾØರ, ಗುತ್ತೇದಾರ ಚಾಂದಪಟೇಲ್‌ ಕುರುಕುಂದ, ಸುರೇಶರೆಡ್ಡಿ, ಚಾಂದಪಾಶ ಗುಲಸರಂ ಹಾಗೂ ಗುಲಸರಂ, ಹುಲ್ಕಲ್‌(ಜೆ), ಉಳ್ಳೆಸುಗೂರ, ಮಳ್ಳಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು
ಭಾಗವಹಿಸಿದ್ದರು. ಹುಸೇನ್‌ ಭಾಷಾ ಕುರುಕುಂದ ಸ್ವಾಗತಿಸಿ, ನಿರೂಪಿಸಿದರು 

Advertisement

Udayavani is now on Telegram. Click here to join our channel and stay updated with the latest news.

Next