Advertisement

ಪಾರದರ್ಶಕತೆಗೆ ಆದ್ಯತೆ: ಮುಲಾಲಿ

07:09 PM Mar 06, 2021 | Team Udayavani |

ಯಾದಗಿರಿ: ಕನ್ನಡ ಸಾಹಿತ್ಯ ಪರಿಷತ್ತನ್ನು ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕವಾಗಿ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಪರಿಷತ್‌ ಅಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ರಾಜಶೇಖರ ಮುಲಾಲಿ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನ ಆಸ್ಮಿತೆಯಾಗಿರುವ ಸಾಹಿತ್ಯ ಪರಿಷತ್ತು 4 ಲಕ್ಷ ಸದಸ್ಯತ್ವ ಹೊಂದಿದ್ದು ಸಾಹಿತ್ಯಾಸಕ್ತರಿಗೆ ಸದಸ್ಯತ್ವ ನೀಡುವ ವಿಚಾರದಲ್ಲಿಯೂ ಸಾಕಷ್ಟು ಆರೋಪಗಳಿದ್ದು, ತಾವು ಅಧ್ಯಕ್ಷರಾದರೆ, ಕನ್ನಡ ಸಾಹಿತ್ಯ ಪರಿಷತ್‌ಗೆ ಡಿಜಿಟಲ್‌ ಸ್ಪರ್ಶ ನೀಡಿ, ಸರ್ವ ಸದಸ್ಯರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಣೆ ಗುರಿಯಿದೆ ಎಂದರು.

ಪರಿಷತ್‌ ಸ್ಥಾಪನೆಯಾಗಿ 105 ವರ್ಷ ಕಳೆದರೂ ಅಭಿವೃದ್ಧಿ ಕಂಡಿಲ್ಲ. ನಿವೃತ್ತರ ತಾಣ ಮತ್ತು ಗಂಜಿ ಕೇಂದ್ರವೆಂಬ ಕಪ್ಪು ಚುಕ್ಕೆಯಿದ್ದುಅದನ್ನು ಅಳಿಸುವ ನಿಟ್ಟಿನಲ್ಲಿ ಅಗತ್ಯ  ಕ್ರಮವಹಿಸಿ, ಕನಿಷ್ಟ 30 ಲಕ್ಷ ಸದಸ್ಯತ್ವ ನೀಡಿ ಪ್ರತಿ ಹಳ್ಳಿಗಳಲ್ಲಿಯೂ ಕಸಾಪ ಸದಸ್ಯತ್ವ ಹೊಂದುವಂತೆ ಯೋಜನೆ ರೂಪಿಸಲಾಗುವುದು ಎಂದರು.

ಹಿಂದೆ ಕಸಾಪ ಸಮ್ಮೇಳದ ವೇಳೆ ನಕಲಿ ಬಿಲ್‌ ಸೃಷ್ಟಿಸಿ ಭ್ರಷ್ಟಾಚಾರ ನಡೆಸಿರುವ ಕುರಿತು ತಾವು ದೂರು ನೀಡಿದ್ದು ಪ್ರಕರಣ ತನಿಖೆ ಹಂತದಲ್ಲಿದೆ. ಈ ಮೂಲಕ ಭ್ರಷ್ಟಾಚಾರ ರಹಿತವಾಗಿ ನಿರ್ಮಿಸಲು ಶ್ರಮಿಸುತ್ತಿರುವುದಾಗಿ ಹೇಳಿದ ಅವರು, ಬೆಳಗಾವಿಯಲ್ಲಿ ಪುಂಡಾಟ ನಡೆದರೂ ಕನ್ನಡಪರ ಸಂಘಟನೆಗಳು ಧರಣಿ ನಡೆಸುತ್ತದೆ. ಆದರೆ ಕಸಾಪ ಈ ಬಗ್ಗೆ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದರು.

ಗಡಿ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪಿದ್ದು ಪುನಃಶ್ಚೇತನ ನೀಡುವುದು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಪ್ರತಿಭಾವಂತ ಮಕ್ಕಳ ಕನ್ನಡ ಮಾಧ್ಯಮದ ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸುವುದು, ಕನ್ನಡ ಸಾಹಿತ್ಯ ಪರಿಷತ್‌ ಸರ್ವಾಂಗೀಣ ಅಭಿವೃದ್ಧಿಗೆ ವಲಯವಾರು ಗೌರವ ಕಾರ್ಯದರ್ಶಿ ನೇಮಕಗೊಳಿಸಿ, ಕನ್ನಡ ಸಾಹಿತ್ಯ ಪುಸ್ತಕಗಳ ಮುದ್ರಣಕ್ಕೆ ಉತ್ತೇಜನ ನೀಡುವ ಚಿಂತನೆಯಿದೆ.

Advertisement

ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯಮಟ್ಟದ ಮಹಿಳಾ ಘಟಕ ಸ್ಥಾಪಿಸಿ ಮಹಿಳೆಯರಿಗೆ ಆದ್ಯತೆ ನೀಡುವುದು, ಯುವ ಸಾಹಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಹಣಮೇಶ ಉಪ್ಪಾರ್‌, ಮಂಜುನಾಥ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next