Advertisement

ವಿದ್ಯುತ್‌-ಸಿಎನ್‌ಜಿ ಚಾಲಿತ ಬಸ್‌ಗೆ ಆದ್ಯತೆ

09:44 PM Jan 02, 2022 | Team Udayavani |

ಧಾರವಾಡ: ಸಾರಿಗೆ ಸಂಸ್ಥೆಯಲ್ಲಿ ಹಳೆಯ ಬಸ್‌ಗಳನ್ನು ಬದಲಾಯಿಸಿ ವಿದ್ಯುತ್‌ ಚಾಲಿತ ಹಾಗೂ ಸಿಎನ್‌ಜಿ ಇಂಧನದ ವಾಹನಗಳನ್ನು ಬಳಕೆಗೆ ತರಲು ಕೇಂದ್ರ ಸರ್ಕಾರ ಸಲಹೆ ನೀಡಿದ್ದು, ಮುಂಬರುವ ದಿನಗಳಲ್ಲಿ ಈ ವಾಹನಗಳು ಬಳಕೆಗೆ ಬರಲಿವೆ ಎಂದು ಸಾರಿಗೆ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ರಾಯಾಪುರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಧಾರವಾಡ ಪಶ್ಚಿಮ ಸಾರಿಗೆ ಕಚೇರಿಯು ನೂತನವಾಗಿ ನಿರ್ಮಿಸಿರುವ ಸ್ವಯಂಚಾಲಿತ ಚಾಲನಾ ಪರೀûಾ ಪಥ, ವಾಹನ ತಪಾಸಣಾ ಹಾಗೂ ಪ್ರಮಾಣೀಕರಣ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಸದ್ಯ ಜಮಖಂಡಿ, ಬಾಗಲಕೋಟೆಯಲ್ಲಿ ಸ್ವಯಂಚಾಲಿತ ಚಾಲನಾ ಪಥಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಧಾರವಾಡದಲ್ಲಿ ಉದ್ಘಾಟಿಸಲಾಗಿದೆ.

ಗುಣಮಟ್ಟದ ಚಾಲನಾ ಪರೀಕ್ಷೆಗೆ ಈ ಕೇಂದ್ರಗಳು ಅಗತ್ಯವಾಗಿವೆ. ಹೀಗಾಗಿ ರಾಜ್ಯದೆಲ್ಲೆಡೆ ಇಂತಹ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಸುಮಾರು 30ರಿಂದ 35 ಮಾನದಂಡಗಳ ಮೂಲಕ ತಂತ್ರಜ್ಞಾನ ಆಧರಿಸಿ ಮಾನವ ರಹಿತವಾಗಿ ಚಾಲನಾ ಪರೀಕ್ಷೆಗಳು ನಡೆಯಲಿವೆ. ವಾಹನಗಳ  ನೆಸ್‌ ಪರೀಕ್ಷೆಯಲ್ಲಿಯೂ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರಿಗೆ ಇಲಾಖೆಯ ಸುಧಾರಣೆ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸಾರಿಗೆ ಸಂಸ್ಥೆಯ ನೌಕರರ ವೇತನ ಪಾವತಿಗೆ 2500 ಕೋಟಿ ರೂ. ನೀಡಿದ್ದಾರೆ. ಮುಷ್ಕರದಲ್ಲಿ ಭಾಗವಹಿಸಿ ವಜಾಗೊಂಡಿದ್ದ ನೌಕರರನ್ನು ಪುನಃ ಸೇವೆಗೆ ಸೇರಿಸಿಕೊಳ್ಳಲಾಗುತ್ತಿದೆ ಎಂದರು.

ಶಾಸಕರಾದ ಅರವಿಂದ ಬೆಲ್ಲದ, ವಾಕರಸಾಸಂ ಅಧ್ಯಕ್ಷ ವಿ.ಎಸ್‌. ಪಾಟೀಲ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಕರಾಸಾಸಂ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ಉತ್ತರ ಪ್ರವರ್ತನ ವಿಭಾಗದ ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಎಂ.ಶೋಭಾ, ಪ್ರಾದೇಶಿಕ ಸಾರಿಗೆ ಅ ಧಿಕಾರಿ ಬಿ.ಶಂಕ್ರಪ್ಪ, ವಾಕರಸಾಸಂ ಹುಬ್ಬಳ್ಳಿ ಗ್ರಾಮೀಣ ವಿಭಾಗೀಯ ನಿಯಂತ್ರಣಾ ಧಿಕಾರಿ ಎಚ್‌.ಆರ್‌. ರಾಮನಗೌಡರ್‌ ಮೊದಲಾದವರಿದ್ದರು. ಅನಿಲ ಮೇತ್ರಿ ಮತ್ತು ಅನುರಾಗ ಸಾಂಸ್ಕೃತಿಕ ಬಳಗದ ಕಲಾವಿದರು ಪ್ರಾರ್ಥಿಸಿದರು. ದಿನಮಣಿ ನಿರೂಪಿಸಿದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next